AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯು ಮಾಲಿನ್ಯವು ಶೇ 40 ಭಾರತೀಯರ ಜೀವಿತಾವಧಿಯನ್ನು 9 ವರ್ಷ ಕಡಿತಗೊಳಿಸಬಹುದು: ಅಮೆರಿಕದ ಅಧ್ಯಯನ ವರದಿ

Air pollution: ಆತಂಕದ ವಿಷಯ ಎಂದರೆ ಭಾರತದಲ್ಲಿ ಉನ್ನತ ಮಟ್ಟದ ವಾಯು ಮಾಲಿನ್ಯವು ಕಾಲಾನಂತರದಲ್ಲಿ ಭೌಗೋಳಿಕವಾಗಿ ವಿಸ್ತರಿಸಿದೆ ಎಂದು ಇಪಿಐಸಿ ವರದಿ ಹೇಳಿದೆ. ಉದಾಹರಣೆಗೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಗಣನೀಯವಾಗಿ ಹದಗೆಟ್ಟಿದೆ ಎಂದು ಅದು ಹೇಳಿದೆ.

ವಾಯು ಮಾಲಿನ್ಯವು ಶೇ 40 ಭಾರತೀಯರ ಜೀವಿತಾವಧಿಯನ್ನು 9 ವರ್ಷ ಕಡಿತಗೊಳಿಸಬಹುದು: ಅಮೆರಿಕದ ಅಧ್ಯಯನ ವರದಿ
ದೆಹಲಿಯಲ್ಲಿ ವಾಯುಮಾಲಿನ್ಯ (ಸಂಗ್ರಹ ಚಿತ್ರ)
TV9 Web
| Edited By: |

Updated on: Sep 01, 2021 | 12:23 PM

Share

ದೆಹಲಿ: ಅಮೆರಿಕ ಸಂಶೋಧನಾ ತಂಡವು ಬುಧವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ವಾಯು ಮಾಲಿನ್ಯವು (Air pollution )ಶೇ 40 ಭಾರತೀಯರ ಜೀವಿತಾವಧಿಯನ್ನು ಒಂಬತ್ತು ವರ್ಷಗಳಿಗಿಂತಲೂ ಕಡಿಮೆ ಮಾಡುವ ಸಾಧ್ಯತೆಯಿದೆ.ನವದೆಹಲಿ ಸೇರಿದಂತೆ ಮಧ್ಯ, ಪೂರ್ವ ಮತ್ತು ಉತ್ತರ ಭಾರತದ ವಿಶಾಲ ಪ್ರದೇಶಗಳಲ್ಲಿ ವಾಸಿಸುತ್ತಿರುವ 48 ಕೋಟಿಗೂ ಹೆಚ್ಚು ಜನರು ಗಮನಾರ್ಹವಾಗಿ ಹೆಚ್ಚಿನ ಮಾಲಿನ್ಯ ಮಟ್ಟವನ್ನು ಸಹಿಸಿಕೊಳ್ಳುತ್ತಾರೆ ಎಂದು ಚಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸಿಟ್ಯೂಟ್ (EPIC) ಸಿದ್ಧಪಡಿಸಿದ ವರದಿಯಲ್ಲಿ ಹೇಳಲಾಗಿದೆ. ಆತಂಕದ ವಿಷಯ ಎಂದರೆ ಭಾರತದಲ್ಲಿ ಉನ್ನತ ಮಟ್ಟದ ವಾಯು ಮಾಲಿನ್ಯವು ಕಾಲಾನಂತರದಲ್ಲಿ ಭೌಗೋಳಿಕವಾಗಿ ವಿಸ್ತರಿಸಿದೆ ಎಂದು ಇಪಿಐಸಿ ವರದಿ ಹೇಳಿದೆ. ಉದಾಹರಣೆಗೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಗಣನೀಯವಾಗಿ ಹದಗೆಟ್ಟಿದೆ ಎಂದು ಅದು ಹೇಳಿದೆ.

ಅಪಾಯಕಾರಿ ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು 2019 ರಲ್ಲಿ ಆರಂಭಿಸಿದ ಭಾರತದ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮವನ್ನು (NCAP) ಶ್ಲಾಘಿಸುತ್ತಾ, EPIC ವರದಿಯು ಎನ್ ಸಿಎಪಿ ಗುರಿಗಳನ್ನು ಸಾಧಿಸುವುದು ಮತ್ತು ಉಳಿಸಿಕೊಳ್ಳುವುದು ದೇಶದ ಒಟ್ಟಾರೆ ಜೀವಿತಾವಧಿಯನ್ನು 1.7 ವರ್ಷಗಳು ಮತ್ತು ನವದೆಹಲಿಯಲ್ಲಿರುವವರ 3.1 ವರ್ಷಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

2024 ರ ವೇಳೆಗೆ ಕೈಗಾರಿಕಾ ಹೊರಸೂಸುವಿಕೆ ಮತ್ತು ವಾಹನಗಳ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಮೂಲಕ ಎನ್ ಸಿಎಪಿ ಅತೀಹೆಚ್ಚು ಪೀಡಿತ 102 ನಗರಗಳಲ್ಲಿ ಮಾಲಿನ್ಯವನ್ನು ಶೇ 20 -30 ಕಡಿತಗೊಳಿಸಲಿದ್ದು ಸಾರಿಗೆ ಇಂಧನಗಳು ಮತ್ತು ಸುಡುವಿಕೆ ಮತ್ತು ಧೂಳಿನ ಮಾಲಿನ್ಯವನ್ನು ತಗ್ಗಿಸುವ ಕಠಿಣ ನಿಯಮಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಇದು ಉತ್ತಮ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಹ ಒಳಗೊಂಡಿರುತ್ತದೆ.

ಪಿಎಂ 2.5 (PM2.5) ಎಂದು ಕರೆಯಲ್ಪಡುವ ಶ್ವಾಸಕೋಶಕ್ಕೆ ಹಾನಿಕಾರಕ ವಾಯುವಿನಿಂದ ಹರಡುವ ಕಣಗಳ ಸಾಂದ್ರತೆಯ ಆಧಾರದ ಮೇಲೆ ಗಾಳಿಯ ಗುಣಮಟ್ಟದ ಮಟ್ಟವನ್ನು ಅಳೆಯುವ ಸ್ವಿಸ್ ಗುಂಪಿನ ಐಕ್ಯೂಏರ್ ಪ್ರಕಾರ ಹೊಸ ದೆಹಲಿ 2020 ರಲ್ಲಿ ಸತತ ಮೂರನೇ ವರ್ಷ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ.

ಕಳೆದ ವರ್ಷ ಕೊರೊನಾವೈರಸ್ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಬೇಸಿಗೆಯಲ್ಲಿ ದಾಖಲೆಯ ಕೆಲವು ಶುದ್ಧ ಗಾಳಿಯನ್ನು ಉಸಿರಾಡಿದ ನವದೆಹಲಿಯ 2 ಕೋಟಿ ನಿವಾಸಿಗಳು, ಹತ್ತಿರದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಅವಶೇಷಗಳ ತೀವ್ರ ಹೆಚ್ಚಳದಿಂದಾಗಿ ಚಳಿಗಾಲದಲ್ಲಿ ವಿಷಕಾರಿ ವಾಯುವಿನಿಂದಾಗಿ ಸಮಸ್ಯೆ ಅನುಭವಿಸಬೇಕಾಗಿ ಬಂತು.

ಇಪಿಐಸಿ ಸಂಶೋಧನೆಗಳ ಪ್ರಕಾರ ನೆರೆಯ ಬಾಂಗ್ಲಾದೇಶವು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಮಟ್ಟಕ್ಕೆ ಗಾಳಿಯ ಗುಣಮಟ್ಟವನ್ನು ಸುಧಾರಿಸಿದರೆ ಸರಾಸರಿ ಜೀವಿತಾವಧಿಯನ್ನು 5.4 ವರ್ಷಗಳಷ್ಟು ಹೆಚ್ಚಿಸಬಹುದು.

ಜೀವಿತಾವಧಿ ಸಂಖ್ಯೆಯನ್ನು ನಿರ್ಧರಿಸಲು ಇಪಿಐಸಿ ದೀರ್ಘಾವಧಿಯ ವಾಯು ಮಾಲಿನ್ಯದ ವಿವಿಧ ಹಂತಗಳಿಗೆ ಒಡ್ಡಿಕೊಂಡ ಜನರ ಆರೋಗ್ಯವನ್ನು ಹೋಲಿಸಿದೆ ಮತ್ತು ಫಲಿತಾಂಶಗಳನ್ನು ಭಾರತದ ವಿವಿಧ ಸ್ಥಳಗಳಿಗೆ ಮತ್ತು ಇತರೆಡೆಗಳಿಗೆ ಅನ್ವಯಿಸಿ ನೋಡಿದೆ.

ಇದನ್ನೂ ಓದಿ:  LPG Cylinder Price: ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ 25 ರೂಪಾಯಿ ಏರಿಕೆ; ಗ್ಯಾಸ್​ ಬಲುಭಾರ

ಇದನ್ನೂ ಓದಿ:  ಉಡುಪಿಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಇಳಿಕೆ; ಇಂದಿನಿಂದ ಶಾಲೆ ಆರಂಭ

(Air pollution likely to reduce the life expectancy of 40 percent of Indians by more than 9 years)

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು