Maharashtra: ಪತಿ ಆಫೀಸಿನಿಂದ ಬರುವಾಗ ಪಾನಿಪುರಿ ತಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಈಗೆರಡು ದಿನಗಳ ಹಿಂದೆ ಗಹಿನಿನಾಥ್​ ಆಫೀಸಿನಿಂದ ಮನೆಗೆ ಬರುವಾಗ ಪಾನಿಪುರಿ ಪಾರ್ಸೆಲ್​ ತಂದಿದ್ದರು. ಅದನ್ನು ನೋಡಿ ಖುಷಿಯಿಂದ ತಿನ್ನುವುದನ್ನು ಬಿಟ್ಟು ಪ್ರತೀಕ್ಷಾ, ನನ್ನನ್ನು ಕೇಳದೆ ಪಾನಿಪುರಿ ಯಾಕೆ ತಂದಿರಿ ಎಂದು ಪ್ರಶ್ನಿಸಿದ್ದಳು.

Maharashtra: ಪತಿ ಆಫೀಸಿನಿಂದ ಬರುವಾಗ ಪಾನಿಪುರಿ ತಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಪಾನಿಪುರಿ
Follow us
TV9 Web
| Updated By: Lakshmi Hegde

Updated on: Sep 01, 2021 | 12:41 PM

ಪತಿ ತನ್ನನ್ನು ಕೇಳದೆ ಪಾನಿಪುರಿ (Panipuri) ತಂದ ಎಂದು ಕೋಪಗೊಂಡ ಪತ್ನಿ ಆತನೊಂದಿಗೆ ಸಿಕ್ಕಾಪಟೆ ಜಗಳ ಆಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಮಹಾರಾಷ್ಟ್ರ (Maharashtra)ದಲ್ಲಿ ನಡೆದಿದೆ. ತನ್ನನ್ನು ಕೇಳದೆ ಪಾನಿಪುರಿ ತಂದ ಎಂಬ ಕಾರಣಕ್ಕೆ ಆಕೆ ಜಗಳ ಶುರು ಮಾಡಿದ್ದರು. ಇಬ್ಬರ ನಡುವಿನ ವಾಗ್ವಾದ ತೀವ್ರರೂಪಕ್ಕೆ ಏರಿ, ಕೊನೆಗೆ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಇದೀಗ ಭಾರತಿ ಯೂನಿವರ್ಸಿಟಿ ಪೊಲೀಸ್​ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರತೀಕ್ಷಾ ಸರ್ವದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಆಕೆಯ ಪತಿ ಗಹಿನಿನಾಥ್​ ಸರ್ವದೆ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಗಹಿನಿನಾಥ್​ ಅವರ ಹುಟ್ಟೂರು ಸೋಲಾಪುರ. 2019ರಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ. ಗಹಿನಿನಾಥ್​ ಶಿಕ್ಷಣವಂತರಾಗಿದ್ದು, ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗಹಿನಿನಾಥ್​ ಮತ್ತು ಪ್ರತೀಕ್ಷಾ ಇಬ್ಬರೂ ಮದುವೆಯಾದ ನಂತರ ಪದೇಪದೆ ಜಗಳವಾಡುತ್ತಿದ್ದರು. ಇತ್ತೀಚೆಗಷ್ಟೇ ಇವರಿಬ್ಬರೂ ಅಂಬೇಗಾಂವ್​ ಏರಿಯಾದಲ್ಲಿ ವಾಸಿಸಲು ಶುರು ಮಾಡಿದ್ದರು.

ಈಗೆರಡು ದಿನಗಳ ಹಿಂದೆ ಗಹಿನಿನಾಥ್​ ಆಫೀಸಿನಿಂದ ಮನೆಗೆ ಬರುವಾಗ ಪಾನಿಪುರಿ ಪಾರ್ಸೆಲ್​ ತಂದಿದ್ದರು. ಅದನ್ನು ನೋಡಿ ಖುಷಿಯಿಂದ ತಿನ್ನುವುದನ್ನು ಬಿಟ್ಟು ಪ್ರತೀಕ್ಷಾ, ನನ್ನನ್ನು ಕೇಳದೆ ಪಾನಿಪುರಿ ಯಾಕೆ ತಂದಿರಿ ಎಂದು ಪ್ರಶ್ನಿಸಿದ್ದಳು. ಅಷ್ಟೇ ಅಲ್ಲ ಜಗಳವನ್ನೂ ಪ್ರಾರಂಭಿಸಿದ್ದಲ್ಲದೆ, ಆ ಪಾನಿಪುರಿಯನ್ನು ತಿನ್ನಲೂ ಇಲ್ಲ. ಮರುದಿನ ಬೆಳಗ್ಗೆ ಗಹಿನಿನಾಥ್​ ಕೆಲಸಕ್ಕೆ ಹೋಗುವಾಗ ತಿಂಡಿಯನ್ನೂ ಮಾಡಿಕೊಡಲಿಲ್ಲ. ಆಕೆ ಅದಾಗಲೇ ವಿಷಯುಕ್ತ ಮಾತ್ರೆ ಸೇವಿಸಿದ್ದಳು. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇಷ್ಟಾದ ಮೇಲೆ ಪ್ರತೀಕ್ಷಾಳ ತಂದೆ ಪ್ರಕಾಶ್​ ಪಿಸೆ ಗಹಿನಿನಾಥ್​ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ಅಂಪೈರ್ ವೈಡ್ ನೀಡದೇ ಇರುವುದಕ್ಕೆ ಕೋಪಗೊಂಡು ಪಿಚ್​ನಿಂದ ದೂರ ಹೋಗಿ ನಿಂತ ಪೊಲಾರ್ಡ್; ವಿಡಿಯೊ ನೋಡಿ

ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ರೈತರಿಗೆ ತೊಟ್ಟು ನೀರು ಸಿಗ್ತಿರಲಿಲ್ಲ; 3 ವರ್ಷ ನಂತರ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ‌!

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು