ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ರೈತರಿಗೆ ತೊಟ್ಟು ನೀರು ಸಿಗ್ತಿರಲಿಲ್ಲ; 3 ವರ್ಷ ನಂತರ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ‌!

13 ಹಳ್ಳಿಗಳ ಒಣ ಭೂಮಿಗೆ ನೀರಾವರಿ ಕಲ್ಪಿಸುವ ಅಚನೂರು ಏತ‌ನೀರಾವರಿ ಯೋಜನೆಗೆ ಕೊನೆಗೂ ರಾಜ್ಯ ಸರ್ಕಾರ‌ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಈ ಯೋಜನೆಗಾಗಿ ರಾಜ್ಯ ಸರ್ಕಾರದ 346 ಕೋಟಿ ರೂಪಾಯಿ ಅನುಮೋದನೆ ಲಭಿಸಿದೆ. 

ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ರೈತರಿಗೆ ತೊಟ್ಟು ನೀರು ಸಿಗ್ತಿರಲಿಲ್ಲ; 3 ವರ್ಷ ನಂತರ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ‌!
ಅಚನೂರು ಏತ ನೀರಾವರಿ ಯೋಜನೆ
Follow us
TV9 Web
| Updated By: preethi shettigar

Updated on: Sep 01, 2021 | 11:55 AM

ಬಾಗಲಕೋಟೆ: ಘಟಪ್ರಭಾ ನದಿ ಪಕ್ಕದಲ್ಲೇ ಹರಿಯುತ್ತಿದ್ದರೂ ಸುತ್ತಮುತ್ತಲ ಜಮೀನಿಗೆ ಹನಿ ನೀರು ಹರಿಯುತ್ತಿರಲಿಲ್ಲ. ಪಕ್ಕದಲ್ಲೇ ನದಿ ತುಂಬಿ ಹರಿಯುವುದನ್ನು ರೈತರು ನೋಡಿಕೊಂಡೆ ಮನದಲ್ಲಿ ಸಂಕಟಪಡುತ್ತಿದ್ದರು. ಈ ನೀರು ನಮ್ಮ ಜಮೀನಿಗೆ ಬರುವುದು ಯಾವಾಗ ಎಂದು ಕನಸು ಕಾಣುತ್ತಿದ್ದರು. ಈ ಮಧ್ಯೆ ಮೂರು ವರ್ಷದಿಂದ ರೈತರು ನೀರಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಆದರೆ ರೈತರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಯೋಜನೆಗೆ ಸದ್ಯ ಸರಕಾರದಿಂದ ಅನುಮೋದನೆ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ. ಸುಮಾರು 8 ಕಿ.ಮೀ ಅಂತರದಲ್ಲಿಯೇ ಆಲಮಟ್ಟಿ ಜಲಾಶಯ ಇದ್ದರೂ ಕೂಡಾ ಬಾಗಲಕೋಟೆ ತಾಲ್ಲೂಕಿನ 13 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿರಲಿಲ್ಲ. ಸುಮಾರು ಮೂರು ದಶಕಗಳಿಂದ ನೀರಾವರಿ ಯೋಜನೆ ಕಲ್ಪಿಸುವಂತೆ ಈ ಭಾಗದ ರೈತರು ಬೇಡಿಕೆಕೊಂಡಿದ್ದರು. ಹಲವು ಹೋರಾಟಗಳನ್ನು ಕೂಡ ಮಾಡಿದ್ದರು ಕಳೆದ ಮೂರು ವರ್ಷಗಳಿಂದ ಅಚನೂರು ಏತನೀರಾವರಿ ಹೋರಾಟ ಸಮಿತಿ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಲೇ ಇದ್ದರು. ಆದರೀಗ ರೈತರ ಹೋರಾಟಕ್ಕೆ ಕಡೆಗೂ ಪ್ರತಿಫಲ ಸಿಕ್ಕಿದೆ.

13 ಹಳ್ಳಿಗಳ ಒಣ ಭೂಮಿಗೆ ನೀರಾವರಿ ಕಲ್ಪಿಸುವ ಅಚನೂರು ಏತ‌ನೀರಾವರಿ ಯೋಜನೆಗೆ ಕೊನೆಗೂ ರಾಜ್ಯ ಸರ್ಕಾರ‌ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಈ ಯೋಜನೆಗಾಗಿ ರಾಜ್ಯ ಸರ್ಕಾರದ 346 ಕೋಟಿ ರೂಪಾಯಿ ಅನುಮೋದನೆ ಲಭಿಸಿದೆ.  ಮೂರು ವರ್ಷಗಳಲ್ಲಿ ಈ ಯೋಜನೆ ಅಂತ್ಯವಾಗಲಿದ್ದು, ಆ ಮೂಲಕ ಬಾಗಲಕೋಟೆ ತಾಲ್ಲೂಕಿನ 13 ಹಳ್ಳಿಗಳ‌ 20880 ಎಕರೆ ಒಣಭೂಮಿ ನೀರಾವರಿ ಭೂಮಿಯಾಗಲಿವೆ. ಈ ಬಗ್ಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ನೀರಾವರಿ ಇಲ್ಲದ ಕಾರಣ ತೊಗರಿ, ಶೆಂಗಾ, ಸೂರ್ಯಕಾಂತಿ ಸೇರಿದಂತೆ ಕೇವಲ‌ ಮಳೆಯಾಶ್ರಿತ ಬೆಳೆಯನ್ನು ಬೆಳೆಯುತ್ತಿದ್ದರು. ತೀರಾ ನದಿ ಪಕ್ಕದಲ್ಲಿ ಮಾತ್ರ ಕಬ್ಬು, ತರಕಾರಿ ಬೆಳೆಯುತ್ತಿದ್ದರು. ಇನ್ಮುಂದೆ ಯೋಜನೆ ಮುಗಿದ ಬಳಿಕ ಕಬ್ಬು, ತರಕಾರಿ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಬಹುದು.

ರೈತರ ಹೋರಾಟಕ್ಕೆ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಸಾತ್ ನೀಡಿದ್ದು, ಕೊನೆಗೂ ರೈತರ ಬೇಡಿಕೆ ಈಡೇರಿಕೆಗೆ ದಿನಗಣನೆ ಪ್ರಾರಂಭವಾಗಿವೆ. ಈ ಮೂಲಕ ಬಾಗಲಕೋಟೆ ತಾಲ್ಲೂಕಿನ 13 ಗ್ರಾಮಗಳಾದ ಬೆನಕಟ್ಟಿ, ಮನ್ನಿಕಟ್ಟಿ, ಭಗವತಿ, ಮುಡಪುಜಿ, ಕಡ್ಲಿಮಟ್ಟಿ, ಅಚನೂರು, ಹಳ್ಳೂರ, ಬೇವೂರು, ಸಂಗಾಪೂರ, ಬಿಲ್ ಕೆರೂರು, ಭೈರಮಟ್ಟಿ, ಶಿರೂರು, ತಿಮ್ಮಾಪುರ ಗ್ರಾಮಗಳ ಜಮೀನುಗಳು ನೀರಾವರಿ ಆಗಲಿವೆ. ಇದರ ಜೊತೆಗೆ ಇದೇ ಯೋಜನೆಯಡಿಯಲ್ಲಿ ಭಗವತಿ, ಹಳ್ಳೂರು, ಬೇವೂರು ಮತ್ತು ಸಂಗಾಪೂರ ಗ್ರಾಮಗಳಲ್ಲಿನ ನಾಲ್ಕು ಕೆರೆಗಳು ತುಂಬಲಿವೆ.

1.7 ಟಿಎಮ್​ಸಿ ನೀರು ಈ ಯೋಜನೆಗೆ ಹಂಚಿಕೆಯಾಗಲಿದೆ. ಇನ್ನು ರೈತರ ಹೋರಾಟಕ್ಕೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಪ್ರಯತ್ನವೂ ಕೂಡಾ ಸಾಕಷ್ಟಿದೆ. ಹೀಗಾಗಿ ಈ ಭಾಗದ ರೈತರು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿರುವ ಆಚನೂರು ಏತ ನೀರಾವರಿ ಯೋಜನೆ ನಿಗದಿತ ಸಮಯದಲ್ಲಿ ಮುಕ್ತಾಯಗೊಳ್ಳಬೇಕು. ಕಾಲಹರಣ ಆಗಬಾರದು. ಆದಷ್ಟು ಬೇಗ ಟೆಂಡರ್ ಕರೆದು ಯೋಜನೆಯ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಡೆಸಬೇಕೆಂದು ರೈತರು ಒತ್ತಾಯ ಮಾಡಿದರು.

ವರದಿ: ರವಿ ಮೂಕಿ

ಇದನ್ನೂ ಓದಿ: ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ

ಇದು ಸ್ವಾತಂತ್ರ್ಯ ಹೋರಾಟವೇನೂ ಅಲ್ಲ, ಹೋರಾಡುವುದಾದರೆ ಕೊವಿಡ್ ವಿರುದ್ಧ ಹೋರಾಡಿ: ಬಿಜೆಪಿ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್