AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG Cylinder Price: ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ 25 ರೂಪಾಯಿ ಏರಿಕೆ; ಗ್ಯಾಸ್​ ಬಲುಭಾರ

ಎಲ್‌ಪಿಜಿ ಅಡುಗೆ ಸಿಲಿಂಡರ್ ಬೆಲೆ ಜನವರಿ 1ರಿಂದ ಸೆಪ್ಟೆಂಬರ್ 1ರವರೆಗೆ 190 ರೂಪಾಯಿ ಹೆಚ್ಚಳವಾಗಿದೆ. ಈಗ ಬೆಂಗಳೂರಿನಲ್ಲಿ 862 ರೂ ಇದ್ದ ಅಡುಗೆ ಸಿಲಿಂಡರ್ ಬೆಲೆ 887 ರೂ.ಗೆ ಏರಿಕೆಯಾಗಿದೆ.

LPG Cylinder Price: ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ 25 ರೂಪಾಯಿ ಏರಿಕೆ; ಗ್ಯಾಸ್​ ಬಲುಭಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Sep 01, 2021 | 11:00 AM

Share

ಬೆಲೆ ಏರಿಕೆಯಿಂದ ನಿರಂತರ ಹೊಡೆತ ಅನುಭವಿಸುತ್ತಿರುವ ಜನ ಸಾಮಾನ್ಯರಿಗೆ ಮತ್ತೊಮ್ಮೆ ಗಾಯದ ಮೇಲೆ ಬರೆ ಎಳೆಯಲಾಗಿದೆ. ಕೊರೊನಾ ಬಂದ ಮೇಲಂತೂ ಆದಾಯ ಕಡಿಮೆ, ಖರ್ಚು ಜಾಸ್ತಿ ಎಂಬ ಪರಿಸ್ಥಿತಿಯಲ್ಲಿರುವ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸೆಪ್ಟೆಂಬರ್​ ತಿಂಗಳ ಮೊದಲ ದಿನವೇ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು ಪ್ರತಿ ಸಿಲಿಂಡರ್​ಗೆ 25 ರೂಪಾಯಿಯಂತೆ ಏರಿಕೆ ಮಾಡಲಾಗಿದೆ.

ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್​ಪಿಜಿ) ಸಿಲಿಂಡರ್ ಬೆಲೆಯ ಏರಿಕೆ ಆದೇಶವು ಇಂದಿನಿಂದಲೇ (ಸೆಪ್ಟೆಂಬರ್ 1, 2021) ಜಾರಿಗೆ ಬರಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗೆ ಈಗ  884.50 ರೂಪಾಯಿ ನೀಡಬೇಕಿದೆ. ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಹದಿನೈದು ದಿನಗಳ ಹಿಂದೆಯಷ್ಟೇ ಅಂದರೆ ಆಗಸ್ಟ್ 17 ರಿಂದ ಜಾರಿಗೆ ಬರುವ ರೀತಿಯಲ್ಲಿ ಪ್ರತಿ ಸಿಲಿಂಡರ್​ಗೆ 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಅಲ್ಲದೇ ಈ ಹಿಂದೆ ಜುಲೈ 1ನೇ ತಾರೀಕಿನಂದು ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂಪಾಯಿ ಹೆಚ್ಚಿಸಲಾಗಿತ್ತು.

ಎಲ್‌ಪಿಜಿ ಅಡುಗೆ ಸಿಲಿಂಡರ್ ಬೆಲೆ ಜನವರಿ 1ರಿಂದ ಸೆಪ್ಟೆಂಬರ್ 1ರವರೆಗೆ 190 ರೂಪಾಯಿ ಹೆಚ್ಚಳವಾಗಿದೆ. ಈಗ ಬೆಂಗಳೂರಿನಲ್ಲಿ 862 ರೂ ಇದ್ದ ಅಡುಗೆ ಸಿಲಿಂಡರ್ ಬೆಲೆ 887 ರೂ.ಗೆ ಏರಿಕೆಯಾಗಿದೆ. 15 ದಿನಗಳ ಅಂತರದಲ್ಲಿ 50 ರೂಪಾಯಿ ಏರಿಕೆಯಾಗಿರುವುದು ಜನ ಸಾಮಾನ್ಯರನ್ನು ಚಿಂತೆಗೆ ನೂಕಿದೆ.

14.2 ಕೆಜಿ ಎಲ್​ಪಿಜಿ ಸಿಲಿಂಡರ್ ಪರಿಷ್ಕೃತ ಬೆಲೆ ಹೀಗಿದೆ:

ದೆಹಲಿ: ಹಳೆಯ ದರ – 859.50; ಹೊಸ ದರ – 884.5 ಮುಂಬೈ: ಹಳೆಯ ದರ – 859.50; ಹೊಸ ದರ – 884.5 ಚೆನ್ನೈ: ಹಳೆಯ ದರ – 875.50; ಹೊಸ ದರ – 900.5 ಲಕ್ನೋ: ಹಳೆಯ ದರ – 897.5; ಹೊಸ ದರ – 922.5 ಅಹಮದಾಬಾದ್: ಹಳೆಯ ದರ – 866.50; ಹೊಸ ದರ – 891.5 ಭೋಪಾಲ್: ಹಳೆಯ ದರ – 840.50; ಹೊಸ ದರ – 890.5

ಇದನ್ನೂ ಓದಿ: LPG Cylinder: ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಪ್ರಮುಖ ನಗರಗಳಲ್ಲಿ ಬೆಲೆ ವಿವರ ಹೀಗಿದೆ 

LPG Cashback Offer: ಪೇಟಿಎಂ ಮೂಲಕ ಎಲ್​ಪಿಜಿ ಸಿಲಿಂಡರ್​ ಬುಕ್​ ಮಾಡಿ 2700 ರೂ. ತನಕ ಕ್ಯಾಶ್​ಬ್ಯಾಕ್ ಪಡೆಯಿರಿ

(LPG Cylinder Price hiked by Rs 25 here is what you need to know)

Published On - 10:49 am, Wed, 1 September 21