ವಿವಿಧ ರಾಜ್ಯಗಳಲ್ಲಿ ರಜಾದಿನಗಳ ಕಾರಣದಿಂದಾಗಿ 2021ರ ಸೆಪ್ಟೆಂಬರ್ನಲ್ಲಿ 12 ದಿನಗಳವರೆಗೆ ಬ್ಯಾಂಕ್ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ಪಟ್ಟಿಯಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳ ಅಧಿಕೃತ ರಜಾದಿನಗಳು ಒಳಗೊಂಡಿವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆದರೆ ಎಲ್ಲ ಬ್ಯಾಂಕ್ಗಳು ಸಾರ್ವಜನಿಕ ರಜಾದಿನಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ದೇಶದಾದ್ಯಂತ ಬ್ಯಾಂಕ್ಗಳು ಗೆಜೆಟೆಡ್ ರಜಾದಿನಗಳನ್ನು ಅನುರಿಸುತ್ತವೆ. ಮೂರು ಬ್ರಾಕೆಟ್ ಅಡಿಯಲ್ಲಿ ಆರ್ಬಿಐ ರಜಾದಿನಗಳನ್ನು ವಿಭಾಗ ಮಾಡಿದೆ – ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನ; ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಬ್ಯಾಂಕ್ಗಳ ಖಾತೆಗಳ ಮುಕ್ತಾಯ.
ಸೆಪ್ಟೆಂಬರ್ 8ನೇ ತಾರೀಕಿನಂದು ಶ್ರೀಮಂತ ಶಂಕರದೇವರ ತಿಥಿಯಂದು ಗುವಾಹತಿಯಲ್ಲಿ ಬ್ಯಾಂಕ್ಗೆ ರಜಾ. ಸೆಪ್ಟೆಂಬರ್ 9 ಮತ್ತು ಸೆಪ್ಟೆಂಬರ್ 20ರಂದು ಕ್ರಮವಾಗಿ ಗ್ಯಾಂಗ್ಟಕ್‌ನಲ್ಲಿ ತೀಜ್ (ಹರಿತಾಳಿಕಾ) ಮತ್ತು ಇಂದ್ರಜಾತ್ರಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು. ಈ ತಿಂಗಳ ಪ್ರಮುಖ ರಜಾದಿನವೆಂದರೆ ಗಣೇಶ ಚತುರ್ಥಿ ಸೆಪ್ಟೆಂಬರ್ 10ರಿಂದ ಆರಂಭವಾಗಲಿದ್ದು, ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿಯಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ. ಗಣೇಶ ಚತುರ್ಥಿಯ ಎರಡನೇ ದಿನ ಪಣಜಿಯಲ್ಲಿ ಮತ್ತು ಇತರ ಸ್ಥಳಗಳಲ್ಲಿ ಎರಡನೇ ಶನಿವಾರದಂದು ಬ್ಯಾಂಕ್ಗಳು ಮುಚುತ್ತವೆ. ಸೆಪ್ಟೆಂಬರ್ 17ರಂದು ರಾಂಚಿಯಲ್ಲಿ ಕರ್ಮ ಪೂಜೆಯ ಪ್ರಯುಕ್ತ ಬ್ಯಾಂಕ್ಗಳು ಮುಚ್ಚುತ್ತವೆ. ಸೆಪ್ಟೆಂಬರ್ 21ರಂದು ಶ್ರೀ ನಾರಾಯಣ ಗುರು ಸಮಾಧಿ ದಿನದಂದು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ಗಳು ಕಾರ್ಯ ನಿರ್ವಹಿಸಲ್ಲ. ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ.
ಸೆಪ್ಟೆಂಬರ್ 5: ಭಾನುವಾರ ಸೆಪ್ಟೆಂಬರ್ 8: ಶ್ರೀಮಂತ ಸಂಕರದೇವರ ತಿಥಿ ಸೆಪ್ಟೆಂಬರ್ 9: ತೀಜ್ (ಹರಿತಾಳಿಕ) ಸೆಪ್ಟೆಂಬರ್ 10: ಗಣೇಶ ಚತುರ್ಥಿ/ಸಂವತ್ಸರಿ (ಚತುರ್ಥಿ ಪಕ್ಷ)/ವಿನಾಯಕರ್ ಚತುರ್ಥಿ/ವರಸಿದ್ಧಿ ವಿನಾಯಕ ವ್ರತ ಸೆಪ್ಟೆಂಬರ್ 11: ಎರಡನೇ ಶನಿವಾರ/ಗಣೇಶ ಚತುರ್ಥಿ (2ನೇ ದಿನ) ಸೆಪ್ಟೆಂಬರ್ 12: ಭಾನುವಾರ ಸೆಪ್ಟೆಂಬರ್ 17: ಕರ್ಮ ಪೂಜೆ ಸೆಪ್ಟೆಂಬರ್ 19: ಭಾನುವಾರ ಸೆಪ್ಟೆಂಬರ್ 20: ಇಂದ್ರಜಾತ್ರೆ ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನ ಸೆಪ್ಟೆಂಬರ್ 25: ನಾಲ್ಕನೇ ಶನಿವಾರ ಸೆಪ್ಟೆಂಬರ್ 26: ಭಾನುವಾರ
ಈ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಆನ್‌ಲೈನ್ ಮೋಡ್ ಮೂಲಕ ವಹಿವಾಟು ನಡೆಸಬಹುದು.
ಇದನ್ನೂ ಓದಿ: Financial Changes: ಪಿಎಫ್ನಿಂದ ಎಲ್ಪಿಜಿ ದರದ ತನಕ ಸೆಪ್ಟೆಂಬರ್ 1ರಿಂದ 5 ಪ್ರಮುಖ ಬದಲಾವಣೆಗಳಿವು
(Bank Holidays In September 2021 Bank Will Shut For 12 Days Here Is The Details)