Financial Changes: ಪಿಎಫ್​ನಿಂದ ಎಲ್​ಪಿಜಿ ದರದ ತನಕ ಸೆಪ್ಟೆಂಬರ್ 1ರಿಂದ 5 ಪ್ರಮುಖ ಬದಲಾವಣೆಗಳಿವು

Sep 01, 2021 | 11:20 AM
TV9kannada Web Team

| Edited By: Srinivas Mata

Sep 01, 2021 | 11:20 AM

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

1 / 6
ಪಾಸಿಟಿವ್​ ಪೇಮೆಂಟ್ ಆಫ್ ಚೆಕ್ 
ಅತಿದೊಡ್ಡ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಇಂದಿನಿಂದ ಜಾರಿ ಆಗುವಂತೆ 50,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಚೆಕ್ ಪಾವತಿಗೆ ಕಡ್ಡಾಯವಾಗಿ ಪಾಸಿಟಿವ್ ಪೇ ನಿಯಮವನ್ನು ಅನುಸರಿಸಲು ಆರಂಭಿಸುತ್ತದೆ. ಹೊಸ ನಿಯಮದ ಪ್ರಕಾರವಾಗಿ, ಖಾತೆದಾರರು ಪಾವತಿಸುವವರ ಹೆಸರು, ದಿನಾಂಕ, ಮೊತ್ತದಂತಹ ಚೆಕ್​ಗೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಒಂದು ವೇಳೆ ಬ್ಯಾಂಕ್‌ಗೆ ಮಾಹಿತಿ ತಲುಪದಿದ್ದರೆ ನಿಮ್ಮ ಖಾತೆಯಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇದ್ದರೂ ಮತ್ತು ಇತರ ಎಲ್ಲ ಅಂಶಗಳು ಸರಿಯಾಗಿದ್ದರೂ ಚೆಕ್ ಅನ್ನು ವಿಲೇವಾರಿ ಮಾಡಲ್ಲ. 2020 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿ, ನೋಟಿಸ್ ನೀಡಿತ್ತು. ಈ ಮೂಲಕವಾಗಿ ಚೆಕ್​ ನೀಡುವವರ ವಿವರಗಳನ್ನು ಪರಿಶೀಲಿಸಿ, ಬ್ಯಾಂಕ್ ವಂಚನೆಯನ್ನು ತಡೆಗಟ್ಟಲು ನೆರವಾಗುವ ಕಾರ್ಯವಿಧಾನ ಇದಾಗಿದೆ. ಇದು ಜನವರಿ 1, 2021ರಂದು ಜಾರಿಗೆ ಬಂದಿತು. ನಿಯಮ ಜಾರಿಗೆ ಬಂದ ನಂತರ ಭಾರತದ ಹಲವು ಪ್ರಮುಖ ಬ್ಯಾಂಕ್​ಗಳು ಈ ಫೀಚರ್ ಅಳವಡಿಸಿಕೊಂಡಿವೆ ಮತ್ತು ಜಾರಿಗೆ ತಂದಿವೆ. ಇತ್ತೀಚೆಗೆ ಈ ಫೀಚರ್ ಅಳವಡಿಸಿಕೊಂಡ ಬ್ಯಾಂಕ್ ಆಕ್ಸಿಸ್ ಬ್ಯಾಂಕ್.

ಪಾಸಿಟಿವ್​ ಪೇಮೆಂಟ್ ಆಫ್ ಚೆಕ್ ಅತಿದೊಡ್ಡ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಇಂದಿನಿಂದ ಜಾರಿ ಆಗುವಂತೆ 50,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಚೆಕ್ ಪಾವತಿಗೆ ಕಡ್ಡಾಯವಾಗಿ ಪಾಸಿಟಿವ್ ಪೇ ನಿಯಮವನ್ನು ಅನುಸರಿಸಲು ಆರಂಭಿಸುತ್ತದೆ. ಹೊಸ ನಿಯಮದ ಪ್ರಕಾರವಾಗಿ, ಖಾತೆದಾರರು ಪಾವತಿಸುವವರ ಹೆಸರು, ದಿನಾಂಕ, ಮೊತ್ತದಂತಹ ಚೆಕ್​ಗೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಒಂದು ವೇಳೆ ಬ್ಯಾಂಕ್‌ಗೆ ಮಾಹಿತಿ ತಲುಪದಿದ್ದರೆ ನಿಮ್ಮ ಖಾತೆಯಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇದ್ದರೂ ಮತ್ತು ಇತರ ಎಲ್ಲ ಅಂಶಗಳು ಸರಿಯಾಗಿದ್ದರೂ ಚೆಕ್ ಅನ್ನು ವಿಲೇವಾರಿ ಮಾಡಲ್ಲ. 2020 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿ, ನೋಟಿಸ್ ನೀಡಿತ್ತು. ಈ ಮೂಲಕವಾಗಿ ಚೆಕ್​ ನೀಡುವವರ ವಿವರಗಳನ್ನು ಪರಿಶೀಲಿಸಿ, ಬ್ಯಾಂಕ್ ವಂಚನೆಯನ್ನು ತಡೆಗಟ್ಟಲು ನೆರವಾಗುವ ಕಾರ್ಯವಿಧಾನ ಇದಾಗಿದೆ. ಇದು ಜನವರಿ 1, 2021ರಂದು ಜಾರಿಗೆ ಬಂದಿತು. ನಿಯಮ ಜಾರಿಗೆ ಬಂದ ನಂತರ ಭಾರತದ ಹಲವು ಪ್ರಮುಖ ಬ್ಯಾಂಕ್​ಗಳು ಈ ಫೀಚರ್ ಅಳವಡಿಸಿಕೊಂಡಿವೆ ಮತ್ತು ಜಾರಿಗೆ ತಂದಿವೆ. ಇತ್ತೀಚೆಗೆ ಈ ಫೀಚರ್ ಅಳವಡಿಸಿಕೊಂಡ ಬ್ಯಾಂಕ್ ಆಕ್ಸಿಸ್ ಬ್ಯಾಂಕ್.

2 / 6
ಉಳಿತಾಯ ಖಾತೆ ಮೇಲಿನ ಬಡ್ಡಿಯಲ್ಲಿ ಇಳಿಕೆ

ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಪ್ಟೆಂಬರ್ 1, 2021ರಿಂದ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಲಿದೆ. ಹೊಸ ಬಡ್ಡಿ ದರ ವಾರ್ಷಿಕ ಶೇ 2.90ರಷ್ಟು ಈಗಾಗಲೇ ಇರುವ ಮತ್ತು ಹೊಸ ಉಳಿತಾಯ ಖಾತೆಗಳಿಗೆ 100 ಕೋಟಿ ರೂಪಾಯಿ ತನಕ ಠೇವಣಿ ಹೊಂದಿರುವವರಿಗೆ ಅನ್ವಯವಾಗುತ್ತದೆ. ಈ ವರೆಗೆ ದೊರೆಯುತ್ತಿದ್ದ ಶೇ 3ರ ಬಡ್ಡಿ ದರದ ಬದಲು ಶೇ 2.90 ಸಿಗುತ್ತದೆ. ಬಹುತೇಕ ಎಲ್ಲ ಪ್ರಮುಖ ಬ್ಯಾಂಕ್​ಗಳು ಬಡ್ಡಿದರವನ್ನು ಶೇ 2.6 ಅಥವಾ ಶೇ 2.7ಕ್ಕೆ ಇಳಿಸಿವೆ.

3 / 6
ಸಾಂದರ್ಭಿಕ ಚಿತ್ರ

If EPF Contribution More Than Rs 2.5 Lakh How It Will Be Taxed Here Is An Explainer

4 / 6
ಮಾರುತಿ ಕಾರಿನ ಬೆಲೆ ಹೆಚ್ಚಳ

ಮಾರುತಿ ಸುಜುಕಿ ಕಂಪೆನಿಯು ದೇಶದ ಅರ್ಧದಷ್ಟು ಆಟೋಮೊಬೈಲ್ ಮಾರಾಟವನ್ನು ಹೊಂದಿದೆ. ಇನ್​ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಸೆಪ್ಟೆಂಬರ್​ನಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗಿದೆ. ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯು ಕಳೆದ ಶುಕ್ರವಾರ ರೆಗ್ಯುಲೇಟರ್ (ನಿಯಂತ್ರಕ) ಫೈಲಿಂಗ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದು, ಸರಾಸರಿ 10,000 ರೂಪಾಯಿಯಿಂದ 15,000 ರೂಪಾಯಿ ಹೆಚ್ಚಳ ಆಗಬಹುದು. ಸೆಪ್ಟೆಂಬರ್ 2021ರಲ್ಲಿ ಬೆಲೆ ಏರಿಕೆಯನ್ನು ಎಲ್ಲ ಮಾಡೆಲ್​ಗಳಿಗೂ ಅನ್ವಯಿಸುವಂತೆ ಮಾಡಲು ಯೋಜಿಸಲಾಗಿದೆ. ಮಾರುತಿ ಸುಜುಕಿ ಈ ಏರಿಕೆಯ ಪ್ರಮಾಣವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ. ಜುಲೈ ತಿಂಗಳಿನಲ್ಲಿ ಕಂಪೆನಿಯು ಕೆಲವು ಸಿಎನ್‌ಜಿ ವೇರಿಯಂಟ್ ಕಾರುಗಳ ಬೆಲೆಯನ್ನು ಹೆಚ್ಚಿಸಿತು. ಈಗ ಎಲ್ಲ ಕಾರುಗಳ ಎಲ್ಲ ವೇರಿಯಂಟ್ ಮತ್ತು ಮಾಡೆಲ್​ಗಳ ಬೆಲೆಯಲ್ಲಿ ಹೆಚ್ಚಾಗುತ್ತವೆ.

5 / 6
ಸಾಂದರ್ಭಿಕ ಚಿತ್ರ

Central Government Saved LPG Subsidy Rs 27255 Crore During Covid 19

6 / 6

Follow us on

Most Read Stories

Click on your DTH Provider to Add TV9 Kannada