- Kannada News Photo gallery No Changes In central And Karnataka Politics Predictions By Dharwad Doll Ugadi 2025
ಈ ಬಾರಿ ಮುಂಗಾರುಗಿಂತ ಹಿಂಗಾರು ಮಳೆ ಜೋರು: ರಾಜಕೀಯ ಬಗ್ಗೆಯೂ ಬೊಂಬೆ ಯುಗಾದಿ ಭವಿಷ್ಯ!
ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಭವಿಷ್ಯ ನುಡಿಯುತ್ತವೆ. ಹನುಮನಕೊಪ್ಪ ಗ್ರಾಮದಲ್ಲಿ 1936ರಿಂದಲೂ ಈ ಭವಿಷ್ಯ ನುಡಿಯಲಾಗುತ್ತಿದ್ದು, ಬಹುತೇಕ ನಿಜವಾಗಿವೆ. ಈ ಭವಿಷ್ಯ ನಿಜವಾಗುವುದರಿಂದ ಎಲ್ಲರು ಈ ಭವಿಷ್ಯವನ್ನು ಕಾತುರದಿಂದ ಎದುರು ನೋಡುತ್ತಾರೆ. ಅದರಂತೆ ಈ ವರ್ಷದ ಯುಗಾದಿ ಭವಿಷ್ಯ ಹೊರಬಿದ್ದಿದೆ. ಈ ವರ್ಷದ ಭವಿಷ್ಯದಲ್ಲಿ ರಾಜಕೀಯದ ಬಗ್ಗೆಯೂ ಹೇಳಲಾಗಿದೆ.
Updated on: Mar 30, 2025 | 11:44 AM

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವುದು ಶತಸಿದ್ಧ ಎಂದು ಧಾರವಾಡ ತಾಲೂಕಿನ ಹನುಮನಕೊಪ್ಪ ಗೊಂಬೆ ಭವಿಷ್ಯ ನುಡಿದಿದ್ದವು. ಅದರಂತೆ ಈ ವರ್ಷವೂ ಸಹ ಯುಗಾದಿ ಭವಿಷ್ಯ ನುಡಿದಿದ್ದು, ಕಳೆದ ಹಲವು ತಿಂಗಳಿನಿಂದ ಕರ್ನಾಟಕ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ನಡೆಯುತ್ತಿವೆ. ಇದೀಗ ಈ ಸಿಎಂ ಕುರ್ಚಿ ಬಗ್ಗೆ ಸ್ಫೋಟಕ ಭವಿಷ್ಯ ಹೊರಬಿದ್ದಿದೆ.

ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಇಲ್ಲ. ಈ ಸಲವೂ ಕೇಂದ್ರ-ರಾಜ್ಯ ರಾಜಕಾರಣ ಯಥಾಸ್ಥಿತಿ ಇರಲಿದೆ. ಈ ವರ್ಷವೂ ಸಿಎಂ ಸಿದ್ದರಾಮಯ್ಯ ಕುರ್ಚಿ ಭದ್ರ ಎಂದು ಗೊಂಬೆಗಳು ಭವಿಷ್ಯ ನುಡಿದಿವೆ. ಕಳೆದ ಯುಗಾಧಿ ಭವಿಷ್ಯದಲ್ಲೂ ಸಹ ಗೊಂಬೆಗಳು ಇದೇ ಮುನ್ಸೂಚನೆ ನೀಡಿದ್ದವು.

ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ನಡೆದ ಗೊಂಬೆ ಭವಿಷ್ಯದಲ್ಲಿ ಗೋವಾ ದಿಕ್ಕಿನ ಸೇನಾಧಿಪತಿ ಗೊಂಬೆಗೆ ಧಕ್ಕೆ. ಈ ಹಿನ್ನೆಲೆ ಗೋವಾ ರಾಜ್ಯ ರಾಜಕಾರಣಕ್ಕೆ ಧಕ್ಕೆ ಆಗಲಿದೆಯಂತೆ.

ನಿನ್ನೆ(ಮಾರ್ಚ್ 29) ರಾತ್ರಿ ತುಪ್ಪರಿಹಳ್ಳ ದಂಡೆ ಮೇಲೆ ಗೊಂಬೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದು ಯುಗಾದಿ ಹಬ್ಬಂದು ಸೂರ್ಯೋದಯದ ಹೊತ್ತಿಗೆ ನೋಡುವ ಗ್ರಾಮದ ಪ್ರಮುಖರು ಆಯಾ ಗೊಂಬೆ, ಕಾಳುಗಳನ್ನು ಆಧರಿಸಿ ಭವಿಷ್ಯ ಹೇಳಲಾಗುತ್ತೆ.

ಈ ಸಲ ಮುಂಗಾರು ಮಳೆ ಕಡಿಮೆ. ಆದ್ರೆ, ಹಿಂಗಾರು ಮಳೆ ರೈತರ ಕೈ ಹಿಡಿಯಲಿದೆ. ಕೊಬ್ಬರಿ, ಶೇಂಗಾ, ಬೆಲ್ಲ, ಜೋಳಕ್ಕೆ ಒಳ್ಳೆ ದರ ಸಿಗೋ ಸಾಧ್ಯತೆ ಇದೆ ಎಂದು ಗೊಂಬೆ ಭವಿಷ್ಯದಲ್ಲಿ ತಿಳಿದುಬಂದಿದೆ.

ಧಾರವಾಡದ ಹನುಮನಕೊಪ್ಪದಲ್ಲಿ ಯುಗಾದಿ ಹಬ್ಬದ ದಿನದ ಭವಿಷ್ಯ ನುಡಿಯಲಾಗುವುದು. ಈ ಭವಿಷ್ಯದಲ್ಲಿ ರಾಜ್ಯ-ದೇಶದ ಬಗ್ಗೆ ಹೇಳಲಾಗುವುದು. ಈ ಭವಿಷ್ಯ ನಿಜವಾಗುವುದರಿಂದ ಎಲ್ಲರು ಈ ಭವಿಷ್ಯವನ್ನು ಕಾತುರದಿಂದ ಎದುರು ನೋಡುತ್ತಾರೆ

ಯುಗಾದಿ ಅಮವಾಸ್ಯೆಯಂದು ತುಪ್ಪರಿ ಹಳ್ಳದಲ್ಲಿ ಒಂದು ಆಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕೀಯದ ಭವುಷ್ಯ ನುಡಿಯುವ ಗೊಂಬೆಗಳನ್ನು ಇಡಲಾಗುವುದು. ನಾಲ್ಕೂ ದಿಕ್ಕಿಗೆ ಅನ್ನದ ಉಂಡೆ ಇಟ್ಟು ಎಲ್ಲಾ ಮಳೆಯ ಹೆಸರಿನಲ್ಲಿ ಎಲೆಗಳನ್ನು ಹಾಕಲಾಗುವುದು. ಹಿಂಗಾರು ಬೆಳೆಯ ಧಾನ್ಯಗಳನ್ನು ಇಡಲಾಗುವುದು, ಬಳಿಕ ಎತ್ತು, ಚಕ್ಕಡಿ ಆಕೃತಿಯನ್ನು ಮಾಡಿ ಇಡಲಾಗುವುದು. ಮಾರನೇಯ ದಿನ ಬೆಳಗ್ಗೆ ಎಲ್ಲಾ ಗೊಂಬೆಗಳನ್ನು ನೋಡಿದಾಗ ಯಾವುದಾದರೂ ಗೊಂಬೆಗೆ ಹಾನಿಯಾಗಿದ್ದರೆ ಅದರ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

ಇಂದಿರಾ ಗಾಂಧಿ ಹತ್ಯೆಯ ಸಮಯದಲ್ಲಿ ದೊಡ್ಡ ಗೊಂಬೆಗೆ ಹಾನಿಯಾಗಿತ್ತು, ಆವಾಗ ರಾಜಕೀಯದ ಉನ್ನತ ಸ್ಥಾನದಲ್ಲಿ ಇರುವವರು ಸಾಯುತ್ತಾರೆ ಎಂಬ ಭವಿಷ್ಯ ನೀಡಿತ್ತು, ಆ ವರ್ಷ ಇಂದಿರಾಗಾಂಧಿ ಸಾವನ್ನಪ್ಪಿದ್ದರು. ಯಡಿಯೂರಪ್ಪ ಅಧಿಕಾರ ಬಿಟ್ಟು ಕೆಳಗಿಳಿದ ವರ್ಷ ಕೂಡ ರಾಜಕೀಯ ಗೊಂಬೆ ತಲೆಗಕೆಳಗಾಗಿತ್ತು, ಅದರಂತೆ ಆ ವರ್ಷ ಯಡಿಯೂರಪ್ಪ ತಮ್ಮ ಸ್ಥಾನದಿಂದ ಕೆಳಗಿಳಿದ್ದರು.

ಕಳೆದ ವರ್ಷ ಅಂದ್ರೆ 2024ರ ಯುಗಾದಿ ಭವಿಷ್ಯದಲ್ಲಿ ರೈತರಿಗೆ ಸಂಕಷ್ಟ ಕಾದಿದೆ ಎಂದು ಭವಿಷ್ಯ ನುಡಿದಿತ್ತು. ಇದರ ಜೊತೆ ಕೇಂದ್ರ ಹಾಗೂ ರಾಜ್ಯದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಬೊಂಬೆಗಳು ತೋರಿಸಿಲ್ಲ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವುದು ಶತಸಿದ್ಧ ಎಂದು ಭವಿಷ್ಯ ನುಡಿದ್ದವು. ಅದರಂತೆ ಸಿಎಂ ಮೂರನೇ ಬಾರಿ ಪ್ರಧಾನಿಯಾದರು.

ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿ 1936ರಿಂದಲೂ ಈ ಭವಿಷ್ಯ ನುಡಿಯಲಾಗುತ್ತಿದ್ದು, ಬಹುತೇಕ ನಿಜವಾಗಿವೆ. ಹೀಗಾಗಿ ಪ್ರತಿ ವರ್ಷದ ಯುಗಾದಿಯಂದು ಈ ಗೊಂಬೆ ಭವಿಷ್ಯಕ್ಕಾಗಿ ಎದುರು ನೋಡುತ್ತಾರೆ.



















