ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಆದಾಯವು ಆಗಸ್ಟ್ ತಿಂಗಳಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ 30ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. 2021ರ ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.16 ಲಕ್ಷ ಕೋಟಿ ರೂಪಾಯಿ ಆಗಿತ್ತು. "2021ರ ಆಗಸ್ಟ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯವು 1,12,020 ಕೋಟಿ ರೂಪಾಯಿ. ಇದರಲ್ಲಿ ಸಿಜಿಎಸ್‌ಟಿ 20,522 ಕೋಟಿ ರೂಪಾಯಿ., ಎಸ್‌ಜಿಎಸ್‌ಟಿ 26,605 ಕೋಟಿ ರೂಪಾಯಿ., ಐಜಿಎಸ್‌ಟಿ 56,247 ಕೋಟಿ ರೂಪಾಯಿ (ಇದರಲ್ಲಿ 26,884 ಕೋಟಿ ರೂಪಾಯಿ ಸರಕುಗಳ ಆಮದಿನ ಮೇಲೆ ಸಂಗ್ರಹ ಆಗಿದ್ದು ಸಹ ಸೇರಿದೆ). ಇನ್ನು ಸೆಸ್ 8,646 ಕೋಟಿ ರೂಪಾಯಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ. 646 ಕೋಟಿ ಸೇರಿದಂತೆ) ಸಂಗ್ರಹ ಆಗಿದೆ.