Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 8ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 8ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 8ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Jan 08, 2025 | 1:09 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮನೆಯ ಸದಸ್ಯರು ನಿಮ್ಮ ವರ್ತನೆಯಿಂದ ತುಂಬ ಸಂತುಷ್ಟರಾಗಲಿದ್ದಾರೆ. ಹಣ್ಣು, ಡ್ರೈಫ್ರೂಟ್ಸ್ ಇಂಥವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ ತರುವ, ಅಥವಾ ಸಂಬಂಧಿಗಳು, ಸ್ನೇಹಿತರಿಗೆ ಉಡುಗೊರೆಯಾಗಿ ನೀಡುವ ಸಾಧ್ಯತೆಗಳಿವೆ. ಇನ್ನು ಈ ದಿನದ ಮತ್ತೊಂದು ಮುಖ್ಯ ವಿಚಾರ ಏನೆಂದರೆ, ತಂದೆ- ತಾಯಿಗೆ ಅಥವಾ ತಂದೆ- ತಾಯಿ ಸಮಾನರಾದವರಿಗೆ ಬಹಳ ಇಷ್ಟವಾದ ಸ್ಥಳಕ್ಕೆ ಕರೆದೊಯ್ಯಲಿದ್ದೀರಿ. ಅದಕ್ಕಾಗಿ ಬಹಳ ಹೆಚ್ಚಿನ ವೆಚ್ಚ ಅಂತೇನೂ ಆಗದೆ ತುಂಬ ಕಡಿಮೆ ಖರ್ಚಿನಲ್ಲಿ ಒಳ್ಳೆ ಮನರಂಜನೆ, ಸಂತೋಷ ಪಡೆಯುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರು ಕಿರು ಪ್ರವಾಸಕ್ಕೆ ತೆರಳುವಂಥ ಸಾಧ್ಯತೆ ಇದೆ. ನಿಮ್ಮ ಬಾಂಧವ್ಯ ಇನ್ನಷ್ಟು ಗಾಢವಾಗಲಿದೆ. ಭವಿಷ್ಯದ ಬಗ್ಗೆ ಇರುವ ಕನಸುಗಳನ್ನು ಹಂಚಿಕೊಳ್ಳಲಿದ್ದೀರಿ. ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದು ಈ ದಿನ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಈ ದಿನ ಬಹಳ ಖುಷಿಖುಷಿಯಾಗಿ ಇರಲಿದ್ದೀರಿ. ಕೆಲವರನ್ನು ನೀವಾಗಿಯೇ ಮನೆಗೆ ಬರುವಂತೆ ಆಹ್ವಾನಿಸಬಹುದು. ಇನ್ನು ನಿಮ್ಮ ಆಹ್ವಾನದ ಮೇಲೆ ಮನೆಗೆ ಬರುವಂಥ ಸಂಬಂಧಿಕರು, ಸ್ನೇಹಿತರ ಜತೆಗೆ ಹೊರಗೆ ಹೋಗುವ, ಪಾರ್ಟಿ ಮಾಡುವ ಆಲೋಚನೆ ಬರಲಿದೆ. ನೀವು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ವಾಹನದಲ್ಲಿ ಪ್ರಯಾಣಿಸುವ ಅಥವಾ ನೀವೇ ಚಾಲನೆ ಮಾಡುವಂಥ ಅವಕಾಶಗಳು ದೊರೆಯಬಹುದು. ಬಹಳ ಜನ ಗುಂಪಾಗಿ ಸೇರಿರುವ ಕಡೆಗಳಲ್ಲಿ ಒಂದೇ ವಿಚಾರವಾಗಿ ಬಹಳ ಚರ್ಚೆಗಳು ನಡೆಯಲಿವೆ. ನೀವೇ ಇಟ್ಟು, ಮರೆತು ಹೋಗಿದ್ದ ಕಾಗದ- ಪತ್ರಗಳು, ವಸ್ತುಗಳು ಸಿಗುವ ಸಾಧ್ಯತೆಗಳಿವೆ. ಮನೆಯಲ್ಲಿನ ಕರ್ಟನ್ ಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬದಲಾಯಿಸುವುದಕ್ಕೆ ಈ ದಿನ ಖರೀದಿ ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರು ದೊಡ್ಡ ಮೊತ್ತದ ವೆಚ್ಚವನ್ನು ಮಾಡಿ, ಅದಮ್ಮಿ ಇಎಂಐ ಆಗಿ ಪರಿವರ್ತಿಸುವ ಯೋಗ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಮಾನಸಿಕವಾಗಿ ಗಟ್ಟಿಯಾಗಿ ಇರುವುದು ನಿಮಗೆ ಈ ದಿನ ಸವಾಲಾಗಿ ಪರಿಣಮಿಸಲಿದೆ. ಏಕೆಂದರೆ ಹಳೆ ಪ್ರೇಮ ವಿಚಾರಗಳು ನಿಮ್ಮನ್ನು ವಿಪರೀತ ಕಾಡಲಿವೆ. ನಿಮಗೆ ಫೋನ್ ಮಾಡಿ ಬೆದರಿಕೆ ಹಾಕುವ ಸಾಧ್ಯತೆಗಳು ಸಹ ಇವೆ. ಇಂಥ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದು ನಿಮ್ಮ ಕೈಯಲ್ಲಿ ಇದೆ. ಸಣ್ಣ-ಪುಟ್ಟ ಸುಳ್ಳುಗಳು ಎಂದು ಸಹ ಹೇಳುವುದಕ್ಕೆ ಹೋಗಬೇಡಿ. ಯಾರಿಗೂ ಅತಿಯಾದ ಸಲುಗೆ ಕೊಡುವುದಕ್ಕೆ ಹೋಗಬೇಡಿ. ಹಳೆ ನೆನಪುಗಳನ್ನು ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಸಿಕ್ಕಿ ಹಾಕಿಕೊಳ್ಳಬೇಡಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಒಂದು ವೇಳೆ ಇದ್ದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆಗಳಿವೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಸಂಗಾತಿ ಜೊತೆಗೆ ಇದೇ ವಿಚಾರವಾಗಿ ಮನಸ್ತಾಪ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಯಾವುದೇ ಮುಖ್ಯ ವಿಚಾರದ ಮೇಲೆ ಮನೆಯಿಂದ ಹೊರಡುವ ಮೊದಲು ಒಮ್ಮೆ ಮನಸ್ಸಿನಲ್ಲಿ ಈಶ್ವರನನ್ನು ಸ್ಮರಿಸಿಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಈ ದಿನ ಮುಖ್ಯವಾದ ವ್ಯಕ್ತಿಯೊಬ್ಬರು ಪರಿಚಯ ಆಗಲಿದ್ದಾರೆ ಅಥವಾ ಆಧ್ಯಾತ್ಮಿಕ ವ್ಯಕ್ತಿಯೊಬ್ಬರು ನಿಮ್ಮ ಮನೆಗೋ ಅಥವಾ ಸ್ನೇಹಿತರ ಮನೆಗೋ ಬರಬಹುದು. ಅಲ್ಲಿ ನೀವು ಅವರನ್ನು ಭೇಟಿ ಆಗಿ, ಮಾತುಕತೆ ನಡೆಸುವುದರಿಂದಾಗಿ ಅಧ್ಯಾತ್ಮದ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕೆಲವು ಪೂಜೆ- ಪುನಸ್ಕಾರಗಳನ್ನು ಮಾಡಿಸಬೇಕು ಎಂದು ತೀರ್ಮಾನ ಮಾಡಬಹುದು ಅಥವಾ ಹಣವನ್ನು ದೇಣಿಗೆಯಾಗಿ ಧರ್ಮ ಕಾರ್ಯಗಳಿಗಾಗಿ ನೀಡಬಹುದು. ಇನ್ನು ಈ ದಿನ ಮನೆಯಲ್ಲಿ ಹಿರಿಯರ ಜತೆಗೆ ಬಾಂಧವ್ಯ ಗಟ್ಟಿ ಆಗಲಿದೆ. ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಸಿ, ಮನೆಗೆ ತರಲಿದ್ದೀರಿ. ನೀವು ಈ ಹಿಂದೆ ಯಾರಿಗೆ ನೆರವು ನೀಡಿದ್ದಿರೋ ಅವರು ಈಗ ನಿಮ್ಮ ಅಗತ್ಯಕ್ಕೆ ಸಹಾಯವನ್ನು ಮಾಡಲಿದ್ದಾರೆ. ಈ ದಿನ ಮನೆಯಲ್ಲಿ ಧಾರ್ಮಿಕ ಪ್ರವಚನಗಳ ಶ್ರವಣ, ಪಠಣ ಮಾಡುವುದಕ್ಕೆ ಸಾಧ್ಯವಾದರೆ ಮಾಡಿ. ಇದರಿಂದ ಮನಸ್ಸಿಗೆ ಮತ್ತಷ್ಟು ಪ್ರಶಾಂತತೆ ಸಿಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನೆಯ ಖಾತೆ, ಕಂದಾಯ, ಸರ್ವೇ ನಂಬರ್ ಅಥವಾ ಒತ್ತುವರಿ ಆರೋಪ ಹೀಗೆ ಯಾವುದೇ ವಿಚಾರ ನಿಮ್ಮ ಎದುರಿಗೆ ನಿಂತಲ್ಲಿ ಕೂಡಲೇ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಆಲೋಚನೆ ಮಾಡುವುದು ಹಾಗೂ ಯೋಜನೆ ರೂಪಿಸುವುದು ಮುಖ್ಯವಾಗುತ್ತದೆ. ಏನು ಆದೀತು, ಎಲ್ಲರಿಗೂ ಆಗಿದ್ದು ನನಗೂ ಆಗಲಿದೆ ಎಂಬ ಉಡಾಫೆ ಮಾಡಬೇಡಿ. ಕೊನೆಗೆ ತೀರಾ ಸಣ್ಣ- ಪುಟ್ಟದು ಅಂತನ್ನದೆ ಯಾವುದೇ ವಿಚಾರದಲ್ಲಿ ಮುಂಜಾಗ್ರತೆ ಏನು ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿ. ಒಂದು ವೇಳೆ ನೀವು ಮನೆಯ ಹೊರಗಿನ ಊಟ- ತಿಂಡಿಗಳನ್ನು ಹೆಚ್ಚಾಗಿ ಮಾಡುವವರಾಗಿದ್ದಲ್ಲಿ ಗ್ಯಾಸ್ಟ್ರಿಕ್, ಎದೆಯುರಿ ಇಂಥ ಸಮಸ್ಯೆಗಳು ಕಾಡಬಹುದು. ಕೆಲವರು ಹೇಳಿದ್ದನ್ನೇ ಹೇಳಿ ತಲೆ ಚಿಟ್ಟು ಹಿಡಿಯುವಂತೆ ಮಾಡಲಿದ್ದಾರೆ. ನಿಮ್ಮ ಕೆಲಸ ಮಾಡಿಕೊಡುತ್ತೀನಿ ಎಂದು ಇತರರಿಗೆ ಮಾತು ನೀಡುವ ಮೊದಲು ಅವರ ಸ್ವಭಾವದ ಬಗ್ಗೆ ತಿಳಿದುಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಭಾರೀ ಓಡಾಟ ನಡೆಸಲಿದ್ದೀರಿ. ಜತೆಗೆ ಖರ್ಚು ಸಹ ಆಗಲಿದೆ. ಇಷ್ಟೆಲ್ಲ ಮಾಡಿದ ನಂತರವೂ ನಿಮಗೆ ಈ ದಿನ ನೀವಂದುಕೊಂಡಂತೆ ಯಾವುದೇ ಕೆಲಸಗಳು ಸಾಗುವುದಿಲ್ಲ. ಯಾರನ್ನೋ ಕಾಯುವುದಕ್ಕೆ ಅಂತಲೇ ಹೆಚ್ಚಿನ ಸಮಯ ಹೊರಟು ಹೋಗಬಹುದು. ಅಥವಾ ಯಾರಾದರೂ ಕೆಲವೇ ನಿಮಿಷದಲ್ಲಿ ಬಂದು ಬಿಡೋಣ ಎಂದು ಹೇಳಿ, ಕರೆದುಕೊಂಡು ಹೋಗಿ, ನಿಮಗೆ ಬಹಳ ಹೊತ್ತು ಸಮಯ ಹೋಗುವಂತೆ ಮಾಡಬಹುದು. ಇನ್ನು ಪ್ರಯಾಣಕ್ಕೆ ಸಿದ್ಧವಾಗಿ ಹೊರಡಬೇಕು ಅನ್ನುವಷ್ಟರಲ್ಲಿ ಅದು ರದ್ದಾಗಬಹುದು. ಅಥವಾ ಏನೋ ಅನಿವಾರ್ಯ ಕಾರಣಗಳಿಗಾಗಿ ನೀವೇ ಅದನ್ನು ರದ್ದು ಮಾಡುವ ಸಾಧ್ಯತೆ ಇದೆ. ಇತರರನ್ನು ನೆಚ್ಚಿಕೊಂಡು, ಮುಖ್ಯವಾದ ಯಾವ ಕೆಲಸವನ್ನು ಈ ದಿನ ಹಾಕಿಕೊಳ್ಳಬೇಡಿ. ಮಕ್ಕಳ ಆರೋಗ್ಯದ ಬಗ್ಗೆ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಇಷ್ಟು ಸಮಯ ಮಾಡಿಕೊಂಡು ಬಂದ ವ್ಯವಹಾರ ಹಾಗೂ ವ್ಯಾಪಾರ ಒಂದು ಕಡೆ ಇರಲಿ, ಇನ್ನು ಮುಂದೆ ಬೇರೆ ರೀತಿಯಲ್ಲಿ ಆಲೋಚನೆ ಮಾಡಬೇಕು ಎಂದೆನಿಸುವುದಕ್ಕೆ ಶುರು ಆಗುತ್ತದೆ. ಅದೇ ಕಾರಣದಿಂದಾಗಿ ನಿಮ್ಮಲ್ಲಿ ಯಾರು ಸ್ವಂತವಾಗಿ ವ್ಯಾಪಾರ- ವ್ಯವಹಾರ ಮಾಡುತ್ತಿರುವಿರೋ ಅಂಥವರಿಗೆ ಅದರ ವಿಸ್ತರಣೆಗೆ ಹೊಸ ಆಲೋಚನೆಗಳು ಹೊಳೆಯಲಿವೆ. ಬ್ಯಾಂಕ್ ನಿಂದ ಸಾಲ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಸಂಬಂಧಿಕರ ಪೈಕಿ ಕೆಲವರನ್ನು ಅಥವಾ ಒಬ್ಬಿಬ್ಬರನ್ನು ವ್ಯಾಪಾರದ ಸಲುವಾಗಿಯೇ ಜತೆಯಲ್ಲಿ ಇರಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಈ ಮಧ್ಯೆ ಕುಟುಂಬದ ಸದಸ್ಯರ ಬಳಕೆಗಾಗಿ ವಾಹನಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕಾಗಿಯೇ ಈ ದಿನ ಶೋರೂಮ್ ಗಳಿಗೆ ಭೇಟಿ ನೀಡಿ, ಅಡ್ವಾನ್ಸ್ ನೀಡುವ ಸಾಧ್ಯತೆ ಕೂಡ ಇದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮಹತ್ತರ ಬದಲಾವಣೆ ಬಗ್ಗೆ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ನೀವು ಯಾವುದೇ ವೇಳಾಪಟ್ಟಿ ಹಾಕಿಕೊಂಡರೂ ಅದರಂತೆ ಪೂರ್ಣವಾಗಿ ಕೆಲಸ ಆಗುವುದು ಕಷ್ಟ. ಆದರೆ ಸಂತೋಷವಾಗಿ ಅಥವಾ ಮನಸ್ಸಿಗೆ ಸಮಾಧಾನ ಆಗುವಂಥ ಕೆಲವು ಕೆಲಸಗಳಂತೂ ಖಂಡಿತಾ ಮಾಡಲಿದ್ದೀರಿ. ಇನ್ನು ಈ ದಿನ ಮನೆಗೆ ಹತ್ತಿರದ ಸಂಬಂಧಿಕರು ಬರಲಿದ್ದಾರೆ. ಅವರ ಆರೋಗ್ಯದ ವಿಚಾರಕ್ಕೋ ಅಥವಾ ಅವರ ಮಕ್ಕಳ ಮದುವೆ, ಶಿಕ್ಷಣ ಇತ್ಯಾದಿಗಳಿಗಾಗಿ ನೀವು ಓಡಾಡಬೇಕಾಗುತ್ತದೆ. ಇನ್ನು ಇದೇ ವೇಳೆ ಕೆಲವು ಸ್ನೇಹಿತರು ನಿಮಗೆ ಕರೆ ಮಾಡಬಹುದು ಹಾಗೂ ತಮ್ಮ ಜತೆಗೆ ಬರುವಂತೆ ಕೇಳಿಕೊಳ್ಳಬಹುದು. ಮೇಲು ನೋಟಕ್ಕೆ ಹಾಗೂ ಒಂದೇ ಸಲಕ್ಕೆ ಹಲವರನ್ನು ಸಮಾಧಾನ ಪಡಿಸಬಹುದು ಎಂದು ನಿಮಗೆ ಅನಿಸಬಹುದಾದರೂ ಸಮಯ ನೀಡುವುದು ಕಷ್ಟ ಆಗಲಿದೆ. ಈ ದಿನ ಮಹಿಳೆಯರು ಊಟ- ತಿಂಡಿ ಮಾಡಿ ಹಾಕುವುದರಲ್ಲಿಯೇ ಹೈರಾಣಾಗಲಿದ್ದೀರಿ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬಿಸಿ ಪದಾರ್ಥಗಳ ಬಗ್ಗೆ ಜಾಗ್ರತೆ ವಹಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಬಹಳ ನಿರೀಕ್ಷೆ ಇಟ್ಟುಕೊಂಡು, ಹಂಚಿಕೊಂಡ ಸಂಗತಿಗಳಿಗೆ ನಿರೀಕ್ಷಿತ ಮಟ್ಟದ ಪ್ರತಿಸ್ಪಂದನೆ ದೊರೆಯದೆ ಬೇಸರ ಕಾಡಬಹುದು. ನಿಮಗಾಗಿ ಸಮಯ ಮಾಡಿಕೊಂಡು, ಕೆಲವು ಕೆಲಸಗಳನ್ನು ಮಾಡುವುದಕ್ಕೆ ಯೋಜನೆ ರೂಪಿಸಿದಾಗಲೇ ನಿಮ್ಮ ಮೇಲೆ ವಿಪರೀತ ಜವಾಬ್ದಾರಿಗಳು ಬರಲಿವೆ. ಅದನ್ನು ನಿಭಾಯಿಸುವುದು ಒತ್ತಡವಾಗಿ ಪರಿಣಮಿಸುತ್ತದೆ. ಇದರ ಜತೆಗೆ ಖರ್ಚು- ವೆಚ್ಚಗಳು ಹೆಚ್ಚಾಗಿ, ಸಾಲ ಮಾಡಲೇಬೇಕು ಎಂಬಂಥ ಸನ್ನಿವೇಶ ಎದುರಾಗಲಿದೆ. ಇದು ಸಿಟ್ಟಾಗಿ ಪರಿಣಮಿಸಿ, ನಿಮಗೆ ಬಹಳ ಆಪ್ತರಾದವರು, ಸಂಗಾತಿ ಅಥವಾ ಸ್ನೇಹಿತರ ಮೇಲೆ ಕೂಗಾಟ- ಕಿರುಚಾಟ ಮಾಡಬಹುದು. ಇನ್ನು ದೇಹದ ತೂಕ ಹೆಚ್ಚಾಗಿರುವವರು ಅದರ ನಿರ್ವಹಣೆಗೆ ಗಮನ ನೀಡಿ. ಒಂದು ವೇಳೆ ಈ ದಿನ ವೈದ್ಯರನ್ನು ಭೇಟಿ ಆಗಬೇಕು ಎಂಬ ಉದ್ದೇಶ ಇದ್ದಲ್ಲಿ ಅದನ್ನು ಮುಂದೆ ಹಾಕಬೇಡಿ. ಕುಟುಂಬಸ್ಥರು ನಿಮ್ಮ ಜತೆ ಮಾತನಾಡುವಾಗ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ