ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಸೂರ್ಯ ಧನು ರಾಶಿಯಲ್ಲಿ ಹಾಗೂ ಚಂದ್ರ ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಇಂದಿನ (8-1-2025) ದ್ವಾದಶ ರಾಶಿಗಳ ಫಲಾಫಲವನ್ನು ಮತ್ತು ಸಮಸ್ಯೆ ಇರುವ ರಾಶಿಗಳು ಏನು ಮಾಡಬೇಕೆಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.
ಇಂದು ದಿನಾಂಕ 8-01-2025, ಬುಧುವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ನವಮಿ, ಅಶ್ವಿನಿ ನಕ್ಷತ್ರ, ಸಿದ್ಧ ಯೋಗ, ಕೌಲವ ಕರಣ ಇರುವ ದಿನವಾಗಿದ್ದು, ರಾಹುಕಾಲ 12.25 ರಿಂದ 1.57 ರ ರೆಗೆ ರಾಹುಕಾಲ ಇರುತ್ತದೆ. ಹಾಗೆಯೇ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ ಬೆಳಗ್ಗಿನ ಜಾವ 11 ಗಂಟೆಯಿಂದ 12.26 ರ ವರೆಗೆ ಇರಲಿದೆ.
ಇಂದು ವಿಷ್ಣುವಿನ ಲಹರಿಗಳಿರತಕ್ಕಂತಹ ದಿನ. ಗಣೇಶನ ಲಹರಿಗಳಿರತಕ್ಕಂತಹ ದಿನ. ಇನ್ನು ಈ ದಿನದ ವಿಶೇಷಗಳನ್ನು ನೋಡುವುದಾದರೆ ಬೈಲಹೊಳ್ಳಿ ಜನಾರ್ದನ ರಥೋತ್ಸವ ನಡೆಯಲಿದೆ. ಹಾಗೆಯೇ ಕೂಡಲಿಯಲ್ಲಿ ಉತ್ಸವ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಶಿವಶಕ್ತಿ ಶನೈಶ್ಚರ ಶಾಂತಿ ಮಹೋತ್ಸವ ನಡೆಯುವ ದಿನ ಕೂಡ ಇದಾಗಿದೆ. ಇಂದು ರವಿ ಧನು ರಾಶಿಯಲ್ಲಿ, ಚಂದ್ರ ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ದ್ವಾದಶ ರಾಶಿಗಳ ಫಲಾಫಲ ತಿಳಿಯಲು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿಯವರ ಈ ವಿಡಿಯೋ ನೋಡಿ.
Latest Videos