ದೆಹಲಿ ಜೂನ್ 03: ಆಗ್ನೇಯ ದೆಹಲಿಯ (Delhi) ಸರಿತಾ ವಿಹಾರ್‌ನಲ್ಲಿ ಸೋಮವಾರ ತಾಜ್ ಎಕ್ಸ್‌ಪ್ರೆಸ್ (Taj Express) ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ (Fire) ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ತಾಜ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ನಮಗೆ ಸಂಜೆ 4.24 ಕ್ಕೆ ಕರೆ ಬಂದಿತು. ಎಂಟು ಅಗ್ನಿಶಾಮಕ ಟೆಂಡರ್‌ಗಳು ದೌಡಾಯಿಸಿದ್ದು ಬೆಂಕಿಯನ್ನು ನಂದಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (DFS) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿದ ವರದಿಗಳು ಇಲ್ಲಿಯವರೆಗೆ ಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
#WATCH | Delhi: A fire broke out in two coaches of Taj Express between Tughlakabad – Okhla. All passengers are safe: CPRO, Northern Railway
A total of 6 fire tenders were rushed to the site. There is no injury or harm to any person, said DCP Railway pic.twitter.com/GG4417ssJh
— ANI (@ANI) June 3, 2024
ಮಾಧ್ಯಮದಲ್ಲಿನ ವರದಿಗಳ ಪ್ರಕಾರ, 2280 ತಾಜ್ ಎಕ್ಸ್‌ಪ್ರೆಸ್ ರೈಲು ಓಖ್ಲಾ-ತುಘಲಕಾಬಾದ್ ಬ್ಲಾಕ್ ವಿಭಾಗವನ್ನು ತಲುಪಿದಾಗ, ನಾಲ್ಕು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಸುರಕ್ಷತೆಯ ದೃಷ್ಟಿಯಿಂದ ರೈಲಿನ ಉಳಿದ ಬೋಗಿಗಳನ್ನು ಬೇರ್ಪಡಿಸಲಾಯಿತು. ಅದೇ ಸಮಯದಲ್ಲಿ, ಬೆಂಕಿಯ ಸುದ್ದಿ ತಿಳಿದ ತಕ್ಷಣ, ಡಿಆರ್‌ಎಂ ದೆಹಲಿ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: ಪಾಕ್ ISI ಪರ ಬೇಹುಗಾರಿಕೆ: ಬ್ರಹ್ಮೋಸ್ ಮಾಜಿ ಎಂಜಿನಿಯರ್ ನಿಶಾಂತ್ ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ
ಇತ್ತೀಚೆಗೆ ಮುಂಬೈನಿಂದ ಗೋರಖ್‌ಪುರಕ್ಕೆ ಹೋಗುತ್ತಿದ್ದ ಗೋದಾನ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿತ್ತು. ರೈಲು ಮುಂಬೈನಿಂದ ಹೊರಟು ಮಹಾರಾಷ್ಟ್ರದ ನಾಸಿಕ್ ರಸ್ತೆ ನಿಲ್ದಾಣದ ಬಳಿ ತಲುಪಿದಾಗ ಗೋಡಾನ್ (ಮುಂಬೈ ಎಲ್‌ಟಿಟಿ–ಗೋರಖ್‌ಪುರ) ಎಕ್ಸ್‌ಪ್ರೆಸ್‌ನ ಕೊನೆಯ ಲಗೇಜ್ ಬೋಗಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಅವಘಡದ ಬಗ್ಗೆ ಮಾಹಿತಿ ಬಂದ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ರೈಲಿನ ಉಳಿದ ಭಾಗವನ್ನು ಲಗೇಜ್ ವಿಭಾಗದಿಂದ ಬೇರ್ಪಡಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Mon, 3 June 24