Foxconn: ತೆಲಂಗಾಣದಲ್ಲೇ ಫಾಕ್ಸ್​​ಕಾನ್ ಉತ್ಪಾದನಾ ಘಟಕ; ಕಂಪನಿಯ ಅಧ್ಯಕ್ಷ ಯಾಂಗ್ ಲಿಯು ಸ್ಪಷ್ಟನೆ

|

Updated on: Mar 06, 2023 | 4:50 PM

ತೆಲಂಗಾಣದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಬೇಕೇ, ಬೇಡವೇ ಎಂಬ ಬಗ್ಗೆ ಫಾಕ್ಸ್​ಕಾನ್ ದ್ವಂದ್ವ ನಿಲುವು ತಳೆದಿದೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ಗೊಂದಲಗಳಿಗೆ ಕಂಪನಿ ಬರೆದಿರುವ ಪತ್ರ ತೆರೆ ಎಳೆದಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Foxconn: ತೆಲಂಗಾಣದಲ್ಲೇ ಫಾಕ್ಸ್​​ಕಾನ್ ಉತ್ಪಾದನಾ ಘಟಕ; ಕಂಪನಿಯ ಅಧ್ಯಕ್ಷ ಯಾಂಗ್ ಲಿಯು ಸ್ಪಷ್ಟನೆ
ಫಾಕ್ಸ್​​ಕಾನ್ ಟೆಕ್ನಾಲಜಿ ಗ್ರೂಪ್​​ನ ಅಧ್ಯಕ್ಷ ಯಾಂಗ್ ಲಿಯು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಿದ್ದಾಗಿನ ಚಿತ್ರ
Follow us on

ಹೈದರಾಬಾದ್: ತೆಲಂಗಾಣದ (Telangana) ಕೊಂಗರ ಕಲಾನ್​ನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಬದ್ಧವಾಗಿರವುದಾಗಿ ತೈವಾನ್​​ನ ಎಲೆಕ್ಟ್ರಾನಿಕ್ಸ್ ಕಂಪನಿ ಫಾಕ್ಸ್​​ಕಾನ್ (Foxconn) ಸೋಮವಾರ ತಿಳಿಸಿದೆ. ಈ ವಿಚಾರವಾಗಿ ಫಾಕ್ಸ್​​ಕಾನ್ ಟೆಕ್ನಾಲಜಿ ಗ್ರೂಪ್​​ನ ಅಧ್ಯಕ್ಷ ಯಾಂಗ್ ಲಿಯು (Young Liu) ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್​ಗೆ ಪತ್ರ ಬರೆದಿದ್ದಾರೆ. ಕೊಂಗರ ಕಲಾನ್​ನಲ್ಲಿ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು. ಘಟಕವು ಶೀಘ್ರದಲ್ಲೇ ಕಾರ್ಯಾಚರಿಸುವಂತೆ ಮಾಡಲು ರಾಜ್ಯದ ಸಹಾಯ ಬೇಕಿದೆ ಎಂದು ಪತ್ರದಲ್ಲಿ ಯಾಂಗ್ ಲಿಯು ಮನವಿ ಮಾಡಿದ್ದಾರೆ ಎಂಬುದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ.

ತೆಲಂಗಾಣದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಬೇಕೇ, ಬೇಡವೇ ಎಂಬ ಬಗ್ಗೆ ಫಾಕ್ಸ್​ಕಾನ್ ದ್ವಂದ್ವ ನಿಲುವು ತಳೆದಿದೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ಗೊಂದಲಗಳಿಗೆ ಕಂಪನಿ ಬರೆದಿರುವ ಪತ್ರ ತೆರೆ ಎಳೆದಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಲಿಯು ಹಾಗೂ ಅವರ ತಂಡವು ಕಳೆದ ವಾರ ತೆಲಂಗಾಣ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಭೇಟಿಯಾಗಿತ್ತು.

‘ನಿಮ್ಮ ಜತೆ (ತೆಲಂಗಾಣ ಮುಖ್ಯಮಂತ್ರಿ) ಮಾರ್ಚ್ 2ರಂದು ನಡೆದಿದ್ದ ಸಭೆಯಲ್ಲಿ ಚರ್ಚಿಸಿರುವಂತೆ, ಕೊಂಗರ ಕಲಾನ್​ನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಫಾಕ್ಸ್​​​ಕಾನ್ ಬದ್ಧವಾಗಿದೆ. ಕೊಂಗರ ಕಲಾನ್​ ಉತ್ಪಾದನಾ ಘಟಕವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕಾರ್ಯಾಚರಿಸುವಂತೆ ಮಾಡಲು ನಿಮ್ಮ ಸಹಕಾರ ಬಯಸುತ್ತೇವೆ’ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಲಿಯು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Axis My India CSI Survey: ಶೇ. 72ರಷ್ಟು ಜನರಿಗಿದೆ ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆ

ಚಂದ್ರಶೇಖರ್ ರಾವ್ ಅವರನ್ನು ತೈವಾನ್​ಗೆ ಅತಿಥಿಯಾಗಿ ಆಹ್ವಾನಿಸುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವುದನ್ನು ಎದುರುನೋಡುತ್ತಿದ್ದೇನೆ ಎಂದೂ ಲಿಯು ಬರೆದಿದ್ದಾರೆ.


ರಾವ್ ಹಾಗೂ ಲಿಯು ಮಾರ್ಚ್ 2ರಂದು ಪ್ರಗತಿ ಭವನದಲ್ಲಿ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಲಂಗಾಣದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಫಾಕ್ಸ್​ಕಾನ್ ಒಪ್ಪಂದ ಮಾಡಿಕೊಂಡಿತ್ತು. ಇದರಿಂದ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ