Axis My India CSI Survey: ಶೇ. 72ರಷ್ಟು ಜನರಿಗಿದೆ ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆ

ಭಾರತದಲ್ಲಿ ಶೇ. 72ರಷ್ಟು ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆ ಇದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಸಿಎಸ್​ಐ ಸಮೀಕ್ಷೆ ಹೇಳಿದೆ.

Axis My India CSI Survey: ಶೇ. 72ರಷ್ಟು ಜನರಿಗಿದೆ ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆ
ನರೇಂದ್ರ ಮೋದಿ
Follow us
|

Updated on: Mar 06, 2023 | 2:35 PM

ಭಾರತದಲ್ಲಿ ಶೇ. 72ರಷ್ಟು ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆ ಇದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಸಿಎಸ್​ಐ ಸಮೀಕ್ಷೆ ಹೇಳಿದೆ. ಕೋವಿಡ್ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಸರ್ಕಾರದ ದೊಡ್ಡ ಸಾಧನೆಗಳಾಗಿವೆ ಎಂದು ಸಮೀಕ್ಷೆ ತಿಳಿಸಿದೆ. 10124 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಶೇ. 65 ಗ್ರಾಮೀಣ ಭಾರತದವರಾಗಿದ್ದರೆ, ಶೇ. 35 ನಗರದ ಮಂದಿಯಾಗಿದ್ದಾರೆ.

ಶೇ. 37ರಷ್ಟು ಮಂದಿ ಒಂದು ಗಂಟೆಗಳಿಗಿಂತ ಹೆಚ್ಚು ಸಮಯ ಓಟಿಟಿಯಲ್ಲಿ ಕಳೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಣಕಾಸು ಸಚಿವರು ಮಂಡಿಸಿದ 2023 ರ ಕೇಂದ್ರ ಬಜೆಟ್ ಶೇ.52ರಷ್ಟು ತೃಪ್ತಿಕರವಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಮುಂದಿನ 3 ತಿಂಗಳಲ್ಲಿ ಸೆನ್ಸೆಕ್ಸ್ 70,000 ದಾಟಲಿದೆ ಎಂದು ಶೇ.43 ಮಂದಿ ನಂಬಿದ್ದಾರೆ ಒಟ್ಟಾರೆ ಮನೆಯ ಖರ್ಚು ಶೇ. 58 ಕ್ಕೆ ಹೆಚ್ಚಾಗಿದೆ, ಅಗತ್ಯ ಉತ್ಪನ್ನಗಳ ಬಳಕೆಯು ಶೇ.36 ಗೆ ಹೆಚ್ಚಿದೆ, ಆರೋಗ್ಯ ಸಂಬಂಧಿತ ವಸ್ತುಗಳ ಬಳಕೆ ಶೇ.35 ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಆಕ್ಸಿಸ್ ಮೈ ಇಂಡಿಯಾ ಭಾರತದ ಜನರ ನಾಡಿ ಮಿಡಿತವನ್ನು ಅಳೆಯಲು ಪ್ರಯತ್ನಿಸುತ್ತಿದೆ. 2023 ರ ಬಜೆಟ್ ಘೋಷಣೆಯ ಬಗ್ಗೆ ಜನರ ಭಾವನೆಗಳು ಸಕಾರಾತ್ಮಕವಾಗಿವೆ ಎಂದು ಮಾರ್ಚ್ ವರದಿ ಬಹಿರಂಗಪಡಿಸುತ್ತದೆ ಮತ್ತು ಒಟ್ಟಾರೆಯಾಗಿ, ಎಲ್ಲಾ ಅಡೆತಡೆಗಳ ವಿರುದ್ಧ ದೇಶದ ದೃಢವಾದ ಹೋರಾಟದ ಕಾರಣದಿಂದಾಗಿ 2023 ರಲ್ಲಿ ಆರ್ಥಿಕತೆಯು ಬೆಳವಣಿಗೆಯು ಉತ್ತಮವಾಗುತ್ತದೆ ಎನ್ನುವ ಆಶಾವಾದಿ ಭಾವನೆಯನ್ನು ತೋರಿಸಿದ್ದಾರೆ.

ಹಾಗೆಯೇ, 72% ಜನರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಭಾವಿಸಿದ್ದಾರೆ ಮತ್ತು ಕೋವಿಡ್ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಬಿಜೆಪಿ ಸರ್ಕಾರದ ಕೆಲವು ಪ್ರಮುಖ ಸಾಧನೆಗಳಾಗಿವೆ.

ವಿಟಮಿನ್‌ಗಳು, ಪರೀಕ್ಷೆಗಳು, ಆರೋಗ್ಯಕರ ಆಹಾರದಂತಹ ಆರೋಗ್ಯ ಸಂಬಂಧಿತ ವಸ್ತುಗಳ ಖರೀದಿಯು ಹೆಚ್ಚಿದ್ದರೂ, ಅಗತ್ಯ ಮತ್ತು ಅನಿವಾರ್ಯವಲ್ಲದ ಖರ್ಚುಗಳ ಕಡೆಗೆ ಜನರ ಒಲವು ಸ್ವಲ್ಪ ಕಡಿಮೆಯಾಗಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10124 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ