ಇಂಫಾಲ್/ಗುವಾಹಟಿ: ಶುಕ್ರವಾರ ಮಣಿಪುರದ (Manipur) ಚುರಾಚಂದ್‌ಪುರ (Churachandpur) ಜಿಲ್ಲೆಯಲ್ಲಿ ಜಿಮ್ ಮತ್ತು ಕ್ರೀಡಾ ಸೌಲಭ್ಯವನ್ನು ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಅವರ ಕಾರ್ಯಕ್ರಮದ ಸ್ಥಳವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಘಟನೆ ನಂತರ ಇಂದು ಶುಕ್ರವಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಪ್ರದೇಶದಲ್ಲೀಗ ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಚುರಾಚಂದ್‌ಪುರ ಆಡಳಿತ ಇಡೀ ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಿದೆ. ಸದ್ಯ ಪರಿಸ್ಥಿತಿ ಸಹಜವಾಗಿದ್ದರೂ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಶಾಂತಿ ಭಂಗ, ಸಾರ್ವಜನಿಕ ನೆಮ್ಮದಿಗೆ ಭಂಗ ಮತ್ತು ಮಾನವ ಜೀವ ಮತ್ತು ಆಸ್ತಿಗಳಿಗೆ ಗಂಭೀರ ಅಪಾಯ ಎಂಬ ಪೊಲೀಸ್ ವರದಿಯನ್ನು ಉಲ್ಲೇಖಿಸಿ ದೊಡ್ಡ ಸಭೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚುರಾಚಂದ್‌ಪುರ ಜಿಲ್ಲೆಯ ಹೆಚ್ಚುವರಿ ಉಪ ಆಯುಕ್ತ ಎಸ್. ತಿಯೆನ್ಲಾಲ್ ಜಾಯ್ ಘಾಂಗ್ಟೆ ಹೇಳಿದ್ದಾರೆ.
Manipur | Mob set fire to an open gym constructed at PT Sports Complex in New Lamka, Churachandpur District yesterday which was to be inaugurated by CM N Biren Singh. The mob also vandalised the public meeting venue at Sadhbhav Mandap.
Following the incident, Internet has been… pic.twitter.com/tMh4gZpI8c
— ANI (@ANI) April 28, 2023
ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದಕ್ಕಾಗಿ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು ಕರೆದಿರುವ ಸಂಪೂರ್ಣ ಸ್ಥಗಿತಗೊಳಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ನೆಟ್‌ವರ್ಕಿಂಗ್ ಸೈಟ್‌ಗಳ ಮೂಲಕ ಸಾರ್ವಜನಿಕರನ್ನು ಸಜ್ಜುಗೊಳಿಸುವ ಸಾಧ್ಯತೆಯನ್ನು ಈ ಆದೇಶವು ಉಲ್ಲೇಖಿಸಿದೆ. ಚುರಾಚಂದ್‌ಪುರ ಹೊರತುಪಡಿಸಿ, ಫೆರ್ಜಾಲ್ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಆ ಕ್ಷೇತ್ರದ ಶಾಸಕರು ಓಪನ್ ಏರ್ ಜಿಮ್ ಉದ್ಘಾಟನೆ ಮಾಡುವಂತೆ ಮನವಿ ಮಾಡಿದರು. ಆದರೆ ಕೆಲವು ಸಮಾಜ ವಿರೋಧಿಗಳು ಬಂದು ಧ್ವಂಸ ಮಾಡಿದ್ದಾರೆ.ಇಂತಹವರ ಬೆದರಿಕೆಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.ಜಿಮ್ ದುರಸ್ತಿ ಮಾಡಿದ ನಂತರ ಬನ್ನಿ, ಇಂದು ಬರಬೇಡಿ ಎಂದು ಶಾಸಕರು ಮನವಿ ಮಾಡಿದ್ದಾರೆ. ಸ್ಥಳೀಯ ಬುಡಕಟ್ಟು ಜನಾಂಗದವರು ಎಂದರೆ ಯಾರು? ಅವರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ, ಅವರು ಅಭಿವೃದ್ಧಿ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.
ಸಿಂಗ್ ಇಂದು ಭೇಟಿ ನೀಡಲಿರುವ ಸಭಾಂಗಣದೊಳಗೆ ಕುರ್ಚಿಗಳನ್ನು ಮುರಿದು ಆಸ್ತಿಯನ್ನು ಹಾನಿಗೊಳಿಸಿದ ಕಿಡಿಗೇಡಿಗಳು ಕ್ರೀಡಾ ಸಾಮಗ್ರಿಗಳು ಮತ್ತು ಕಾರ್ಯಕ್ರಮ ನಡೆಯುವ ಮೈದಾನಕ್ಕೂ ಬೆಂಕಿ ಹಚ್ಚಿದ್ದಾರೆ.ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಬಿಜೆಪಿ ಸರ್ಕಾರದ ಮೀಸಲು ಮತ್ತು ಸಂರಕ್ಷಿತ ಅರಣ್ಯಗಳು ಮತ್ತು ಜೌಗು ಪ್ರದೇಶಗಳಂತಹ ಪ್ರದೇಶಗಳ ಸಮೀಕ್ಷೆಯನ್ನು ಆಕ್ಷೇಪಿಸಿರುವ ಸ್ಥಳೀಯ ಬುಡಕಟ್ಟು ಮುಖಂಡರ ವೇದಿಕೆಯು ಇಂದು ಜಿಲ್ಲೆಯಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಬಂದ್‌ಗೆ ಕರೆ ನೀಡಿದೆ.
ರೈತರು ಮತ್ತು ಇತರ ಬುಡಕಟ್ಟು ನಿವಾಸಿಗಳ ಮೀಸಲು ಅರಣ್ಯ ಪ್ರದೇಶಗಳನ್ನು ತೆರವುಗೊಳಿಸಲು ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರತಿಭಟಿಸಿ ಸರ್ಕಾರಕ್ಕೆ ಪುನರಾವರ್ತಿತ ಜ್ಞಾಪಕ ಪತ್ರಗಳನ್ನು ಸಲ್ಲಿಸಿದ್ದರೂ, ಸರ್ಕಾರ ಜನರ ಸಂಕಷ್ಟಗಳನ್ನು ಪರಿಹರಿಸುವಲ್ಲಿ ಇಚ್ಛೆ ಅಥವಾ ಪ್ರಾಮಾಣಿಕತೆಯ ಯಾವುದೇ ಲಕ್ಷಣವನ್ನು ತೋರಿಸಿಲ್ಲ ಎಂದು ವೇದಿಕೆ ಹೇಳಿದೆ.
ಕುಕಿ ಸ್ಟೂಡೆಂಟ್ಸ್ ಆರ್ಗನೈಸೇಶನ್ ಕೂಡ ವೇದಿಕೆಗೆ ಬೆಂಬಲವಾಗಿ ನಿಂತಿದೆ. ಬುಡಕಟ್ಟು ಜನರ ಬಗ್ಗೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಧಾರ್ಮಿಕ ಕೇಂದ್ರಗಳನ್ನು ಕೆಡವುವುದು ಮತ್ತು ಅಕ್ರಮವಾಗಿ ಬುಡಕಟ್ಟು ಗ್ರಾಮಗಳನ್ನು ಹೊರಹಾಕುವುದು ಸೇರಿದಂತೆ ಬುಡಕಟ್ಟು ಹಕ್ಕುಗಳನ್ನು ದುರ್ಬಲಗೊಳಿಸುವುದನ್ನು ಕುಕಿ ವಿದ್ಯಾರ್ಥಿಗಳ ಸಂಘಟನೆ ಖಂಡಿಸುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಅತೀಕ್ ಅಹ್ಮದ್, ಅಶ್ರಫ್ನ್ನು ಮಾಧ್ಯಮದ ಮುಂದೆ ಕರೆ ತಂದಿದ್ದು ಯಾಕೆ?: ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ
ಸರ್ಕಾರವು ಈ ತಿಂಗಳ ಆರಂಭದಲ್ಲಿ ಮಣಿಪುರದಲ್ಲಿ ಮೂರು ಚರ್ಚ್‌ಗಳನ್ನು ನೆಲಸಮಗೊಳಿಸಿದ್ದು, ಅದು ಅಕ್ರಮವಾಗಿ ನಿರ್ಮಿಸಿದ್ದು ಎಂದು ಹೇಳಿದೆ.
ನಂತರ ಸ್ಥಳೀಯ ಸಂಸ್ಥೆಯೊಂದು ಮಣಿಪುರ ಹೈಕೋರ್ಟ್ ಮೊರೆ ಹೋಗಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂವಿ ಮುರಳೀಧರನ್ ಅವರ ಪೀಠ ಇದರ ವಿಚಾರಣೆ ನಡೆಸಿದ್ದು,ದಾಖಲೆಗಳು, ನೀತಿ ನಿರ್ಧಾರಗಳು ಮತ್ತು ಅಕ್ರಮ ನಿರ್ಮಾಣಗಳ ವಿರುದ್ಧ ವ್ಯವಹರಿಸುವಾಗ ಸುಪ್ರೀಂಕೋರ್ಟ್‌ನ ನಿರ್ದೇಶನಗಳ ಆಧಾರದ ಮೇಲೆ ಜನರನ್ನು ಚರ್ಚ್‌ಗಳಿಂದ ಹೊರಹಾಕಲಾಗಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Fri, 28 April 23