ಮಧ್ಯಪ್ರದೇಶದಲ್ಲಿ ಮೆಗಾ ರ‍್ಯಾಲಿ: ಎಲ್ಲಾ ಖಾತರಿಗಳನ್ನು ಪೂರೈಸುವ ಭರವಸೆ ನೀಡಿದ ಪ್ರಧಾನಿ ಮೋದಿ

|

Updated on: Sep 25, 2023 | 3:25 PM

PM Modi in Madhya Pradesh: ಅವರ ಉದ್ದೇಶಗಳು ಸರಿ ಇಲ್ಲ. ಒಮ್ಮೆ ಅವರಿಗೆ ಅವಕಾಶ ಸಿಕ್ಕರೆ, ಘಮಾಂಡಿಯಾ ಮೈತ್ರಿಯು ತಾಯಂದಿರು ಮತ್ತು ಸಹೋದರಿಯರಿಗೆ ದ್ರೋಹ ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.  ಕಾಂಗ್ರೆಸ್ ಈಗ ಅರ್ಬನ್ ನಕ್ಸಲರಿಂದ ನಡೆಸಲ್ಪಡುತ್ತದೆ. ಘೋಷಣೆಗಳಿಂದ ಹಿಡಿದು ನೀತಿ ರೂಪಿಸುವವರೆಗೆ ಕಾಂಗ್ರೆಸ್ ಈಗ ಎಲ್ಲವನ್ನೂ ಅರ್ಬನ್ ನಕ್ಸಲರಿಗೆ ಹೊರಗುತ್ತಿಗೆ ನೀಡುವ ಕಂಪನಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಮೆಗಾ ರ‍್ಯಾಲಿ: ಎಲ್ಲಾ ಖಾತರಿಗಳನ್ನು ಪೂರೈಸುವ ಭರವಸೆ ನೀಡಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಭೋಪಾಲ್ ಸೆಪ್ಟೆಂಬರ್  25 : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಸೋಮವಾರ) ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿಯ (BJP) ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು , ಪ್ರತಿಪಕ್ಷಗಳ ಘಮಾಂಡಿಯಾ (ಅಹಂಕಾರಿ) ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಮತದಾರರನ್ನು ಓಲೈಸಲಿರುವ ಈ ದೊಡ್ಡ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.  ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಹೊಸ ಶಾಸನವನ್ನು ಉಲ್ಲೇಖಿಸಿದ ಅವರು ಘಮಾಂಡಿಯಾ ಒಕ್ಕೂಟವು ಮಹಿಳಾ ಮೀಸಲಾತಿ ಮಸೂದೆಯನ್ನು ಇಷ್ಟವಿಲ್ಲದೆ ಬೆಂಬಲಿಸಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದಾಗ್ಯೂ, ಮಸೂದೆ ರಾಷ್ಟ್ರಪತಿಗಳ ಅನುಮೋದನೆಗೆ ಬಾಕಿ ಇದೆ.

ಅವರ ಉದ್ದೇಶಗಳು ಸರಿ ಇಲ್ಲ. ಒಮ್ಮೆ ಅವರಿಗೆ ಅವಕಾಶ ಸಿಕ್ಕರೆ, ಘಮಾಂಡಿಯಾ ಮೈತ್ರಿಯು ತಾಯಂದಿರು ಮತ್ತು ಸಹೋದರಿಯರಿಗೆ ದ್ರೋಹ ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.  ಕಾಂಗ್ರೆಸ್ ಈಗ ಅರ್ಬನ್ ನಕ್ಸಲರಿಂದ ನಡೆಸಲ್ಪಡುತ್ತದೆ. ಘೋಷಣೆಗಳಿಂದ ಹಿಡಿದು ನೀತಿ ರೂಪಿಸುವವರೆಗೆ ಕಾಂಗ್ರೆಸ್ ಈಗ ಎಲ್ಲವನ್ನೂ ಅರ್ಬನ್ ನಕ್ಸಲರಿಗೆ ಹೊರಗುತ್ತಿಗೆ ನೀಡುವ ಕಂಪನಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.


ಮಧ್ಯಪ್ರದೇಶದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ. ಎಲ್ಲಾ ಭರವಸೆಗಳನ್ನು ಈಡೇರಿಸುವುದು ಮೋದಿಯವರ ಗ್ಯಾರಂಟಿ.ಕಾಂಗ್ರೆಸ್‌ಗಿಂತ ಭಿನ್ನವಾಗಿ ತನ್ನ ಪಕ್ಷವು ನೀಡುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಮಹಿಳೆಯರಿಗಾಗಿ ಏನನ್ನೂ ಮಾಡಲಿಲ್ಲ. ನಾವು ಶೌಚಾಲಯಗಳನ್ನು ನಿರ್ಮಿಸಿದೆವು. ಉಜ್ವಲ ಯೋಜನೆಯಂತಹ ಮಹಿಳಾ ಕೇಂದ್ರಿತ ಯೋಜನೆಗಳನ್ನು ಜಾರಿಗೆ ತಂದೆವು. ಬಿಜೆಪಿ ಅಭಿವೃದ್ಧಿಗಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಮತಕ್ಕಾಗಿ ಕೆಲಸ ಮಾಡುತ್ತದೆ.
ಕಾಂಗ್ರೆಸ್ ಮಧ್ಯಪ್ರದೇಶವನ್ನು ಹಲವು ವರ್ಷಗಳ ಕಾಲ ಆಳಿತು. ಆದರೆ ರಾಜ್ಯದಲ್ಲಿ ಯುವಕರು ದುರಾಡಳಿತ, ಭ್ರಷ್ಟಾಚಾರ ಮತ್ತು ಕಳಪೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಂಡಿದ್ದಾರೆ. ಅವರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾಡಿದ ಪ್ರತಿಯೊಂದು ಯೋಜನೆಗೆ ವಿರುದ್ಧವಾಗಿದ್ದಾರೆ. ಭವಿಷ್ಯದ ಬಗ್ಗೆ ಯಾವುದೇ ಚಿಂತನೆಯಿಲ್ಲ. ಕಾಂಗ್ರೆಸ್ ಮಧ್ಯಪ್ರದೇಶವನ್ನು ಬೀಮಾರು (ಅನಾರೋಗ್ಯ) ರಾಜ್ಯವನ್ನಾಗಿ ಮಾಡಿದೆ.

ಆರ್ಥಿಕ ಬೆಳವಣಿಗೆ, ಆರೋಗ್ಯ ಮತ್ತು ಶಿಕ್ಷಣದ ವಿಷಯದಲ್ಲಿ ಹಿಂದುಳಿದಿವೆ ಎಂದು ಸೂಚಿಸಲು ಬೀಮಾರು ಪದ ಬಳಸಲಾಗುತ್ತದೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳನ್ನು ಉಲ್ಲೇಖಿಸುವಾಗಲೂ ಈ ಪದ ಬಳಕೆಯಾಗುತ್ತದೆ.

ಕಾಂಗ್ರೆಸ್ ಮತಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಉಳಿಸಿಕೊಂಡಿದೆ. ಅವರು ಭಾರತವನ್ನು 20 ನೇ ಶತಮಾನಕ್ಕೆ ಹಿಂತಿರುಗಿಸಲು ಬಯಸಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ತುಷ್ಟೀಕರಣದ ಇತಿಹಾಸ ಹೊಂದಿರುವ ವಂಶಾಡಳಿತ ಪಕ್ಷವಾಗಿದೆ. ಇದು ತುಕ್ಕು ಹಿಡಿದ ಕಬ್ಬಿಣದಂತಿದೆ, ಅದು ಮಳೆಯಲ್ಲಿ ಇಟ್ಟರೆ ಅದು ಹಾಳಾಗಿ ಹೋಗುತ್ತದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ಅನ್ಯಾಯ ತಪ್ಪಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುವುದೇ ಪರಿಹಾರ; ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ನಾಯಕರು ಬೆಳ್ಳಿ ಚಮಚಗಳೊಂದಿಗೆ ಹುಟ್ಟಿದ್ದಾರೆ. ಬಡವರ ಸಮಸ್ಯೆಗಳು ಅವರಿಗೆ ಸಾಹಸ ಪ್ರವಾಸವಾಗಿದೆ. ಬಡವರ ಕಾಲೋನಿಗಳು ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಬಡ ರೈತರ ಹೊಲಗಳು ಕಾಂಗ್ರೆಸ್ ನಾಯಕರಿಗೆ ವಿಡಿಯೊ ಚಿತ್ರೀಕರಣದ ಸ್ಥಳಗಳಾಗಿವೆ. ಜಗತ್ತು ಕೇಂದ್ರ ಸರ್ಕಾರದ ಉಪಕ್ರಮಗಳನ್ನು ಶ್ಲಾಘಿಸಿದಾಗಲೂ ಕಾಂಗ್ರೆಸ್ ಪ್ರತಿಯೊಂದು ನಡೆಯನ್ನೂ ಟೀಕಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Mon, 25 September 23