ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಕೈ ತಗಾದೆ; ಬೆಂಗಳೂರು ಸೇರಿದಂತೆ 21 ನಗರಗಳಲ್ಲಿ ಇಂದು 21 ಪತ್ರಿಕಾಗೋಷ್ಠಿ; ಯಾವ್ಯಾವ ಮುಖಂಡರು ಮಾತನಾಡಲಿದ್ದಾರೆ, ಇಲ್ಲಿದೆ ಪಟ್ಟಿ
Congress Press Conferences on Women's Reservation Bill: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಆಡಳಿತ ಸರ್ಕಾರದ ತಂತ್ರಗಳನ್ನು ಬಯಲಿಗೆಳೆಯಲು ಕಾಂಗ್ರೆಸ್ ಪಕ್ಷ ಇಂದು ವಿವಿಧೆಡೆ ಪತ್ರಿಕಾಗೋಷ್ಠಿಗಳನ್ನು ನಡೆಸಲಿದೆ. ಬೆಂಗಳೂರು ಸೇರಿದಂತೆ 21 ನಗರಗಳಲ್ಲಿ ಕಾಂಗ್ರೆಸ್ನಿಂದ 21 ಪತ್ರಿಕಾಗೋಷ್ಠಿಗಳು ನಡೆಯಲಿವೆ. ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪತ್ರಿಕಾಗೋಷ್ಠಿಗಳ ಪಟ್ಟಿ ನೀಡಿದ್ದಾರೆ. ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೋದಿ ಸರ್ಕಾರ ಮಾಡಿರುವ ವಂಚನೆಯನ್ನು ಬಹಿರಂಗಪಡಿಸಲು ಈ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ ಎಂದು ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 25: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ವಿಚಾರದಲ್ಲಿ ಆಡಳಿತ ಸರ್ಕಾರದ ತಂತ್ರಗಳನ್ನು ಬಯಲಿಗೆಳೆಯಲು ಕಾಂಗ್ರೆಸ್ ಪಕ್ಷ ಇಂದು ವಿವಿಧೆಡೆ ಪತ್ರಿಕಾಗೋಷ್ಠಿಗಳನ್ನು ನಡೆಸಲಿದೆ. ಬೆಂಗಳೂರು ಸೇರಿದಂತೆ 21 ನಗರಗಳಲ್ಲಿ ಕಾಂಗ್ರೆಸ್ನಿಂದ 21 ಪತ್ರಿಕಾಗೋಷ್ಠಿಗಳು ನಡೆಯಲಿವೆ. ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ (X platform) ಪತ್ರಿಕಾಗೋಷ್ಠಿಗಳ ಪಟ್ಟಿ ನೀಡಿದ್ದಾರೆ.
ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೋದಿ ಸರ್ಕಾರ ಮಾಡಿರುವ ವಂಚನೆಯನ್ನು ಬಹಿರಂಗಪಡಿಸಲು ಈ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ ಎಂದು ಪವನ್ ಖೇರಾ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ವಕ್ತಾರೆ ಅಮೃತಾ ಧವನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಈ ಎಲ್ಲಾ 21 ಸುದ್ದಿಗೋಷ್ಠಿಗಳಲ್ಲಿ ಮಾತನಾಡುವವರು ಎಲ್ಲರೂ ಮಹಿಳಾ ಕಾಂಗ್ರೆಸ್ ವಕ್ತಾರರೇ.
21 Cities. 21 Women leaders. 1 Agenda – to expose the treachery by the Modi govt in the name of #WomenReservation. pic.twitter.com/NpEoMnRvtz
— Pawan Khera 🇮🇳 (@Pawankhera) September 24, 2023
ಕರ್ನಾಟಕದಲ್ಲಿ ತಮ್ಮ ಮೊನಚು ಭಾಷಣಗಳಿಂದ ಖ್ಯಾತರಾಗಿರುವ ಭವ್ಯಾ ನರಸಿಂಹಮೂರ್ತಿ ಅವರ ಗೋವಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಹರ್ಯಾಣ ಮತ್ತು ಪಂಜಾಬ್ ಕಾಂಗ್ರೆಸ್ ಘಟಕಗಳಿಂದ ಚಂಡೀಗಡದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಗಳಾಗಲಿವೆ. ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ನಾಗಪುರ ನಗರಗಳಲ್ಲಿ ಸುದ್ದಿಗೋಷ್ಠಿಗಳು ನಡೆಯುತ್ತವೆ.
ಇದನ್ನೂ ಓದಿ: ಕಾವೇರಿ ನೀರು ವಿವಾದ: ಮಧ್ಯಸ್ಥಿಕೆ ವಹಿಸುವಂತೆ ನರೇಂದ್ರ ಮೋದಿಗೆ ದೇವೇಗೌಡ ಪತ್ರ
21 ನಗರಗಳಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವವರ ಪಟ್ಟಿ
- ಅಹ್ಮದಾಬಾದ್, ಗುಜರಾತ್: ರಜನಿ ಪಾಟೀಲ್
- ಬೆಂಗಳೂರು: ಅಮೃತಾ ಧವನ್
- ಭುವನೇಶ್ವರ್, ಒಡಿಶಾ: ರಂಜೀತ್ ರಂಜನ್
- ಚಂಡೀಗಡ, ಹರ್ಯಾಣ: ರಾಧಿಕಾ ಖೇರಾ
- ಚಂಡೀಗಡ, ಪಂಜಾಬ್: ಶೋಭಾ ಓಜಾ
- ಚೆನ್ನೈ, ತಮಿಳುನಾಡು: ಲಾವಣ್ಯ ಬಲ್ಲಾಳ್ ಜೈನ್
- ಡೆಹರಾಡೂನ್, ಉತ್ತರಾಖಂಡ್: ಪ್ರಿಯಾಂಕಾ ಸಿಂಗ್
- ಗೋವಾ: ಭವ್ಯಾ ನರಸಿಂಹಮೂರ್ತಿ
- ಗುವಾಹಟಿ, ಅಸ್ಸಾಂ: ಮಹಿಮಾ ಸಿಂಗ್
- ಹೈದರಾಬಾದ್: ನೆಟ್ಟಾ ಡಿಸೋಜಾ
- ಜೈಪುರ್, ರಾಜಸ್ಥಾನ್: ಅಲ್ಕಾ ಲಂಬಾ
- ಜಮ್ಮು: ರಿತು ಚೌಧರಿ
- ಕೋಲ್ಕತಾ: ಆರಾಧನಾ ಮಿಸ್ರ ಮೋನ
- ಲಕ್ನೋ, ಉತ್ತರಪ್ರದೇಶ: ಸುಪ್ರಿಯಾ ಶ್ರೀನಾತೆ
- ಮುಂಬೈ: ಡಾ. ಅಮೀ ಯಗ್ನಿಕ್
- ನಾಗಪುರ್, ಮಹಾರಾಷ್ಟ್ರ: ಅನುಮಾ ಆಚಾರ್ಯ
- ಪಾಟ್ನಾ, ಬಿಹಾರ: ಸುಜಾತಾ ಪೌಲ್
- ರಾಂಚಿ, ಜಾರ್ಖಂಡ್: ಡಾ. ರಾಗಿಣಿ ನಾಯಕ್
- ಶಿಮ್ಲಾ, ಹಿಮಾಚಲಪ್ರದೇಶ: ಡಾಲಿ ಶರ್ಮಾ
- ಶ್ರೀನಗರ್, ಜಮ್ಮು ಕಾಶ್ಮೀರ: ಡಾ. ಶಮಾ ಮೊಹಮದ್
- ವಿಜಯವಾಡ, ಆಂದ್ರಪ್ರದೇಶ: ಪಂಖುರಿ ಪಾಠಕ್
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ