ಈ ಹೂವುಗಳನ್ನೆಂದೂ ಮುಟ್ಟಬೇಡಿ.. ಸುವಾಸನೆಯನ್ನು ತೆಗೆದುಕೊಳ್ಳಲೇಬೇಡಿ; ಜೀವವೇ ಹೋಗಬಹುದು !

|

Updated on: Apr 06, 2021 | 4:39 PM

Hogweed Plants: ಈ ಸಸ್ಯ ಇಷ್ಟೊಂದು ವಿಷಕಾರಿಯಾಗಲು ಮುಖ್ಯಕಾರಣ ಇದರಲ್ಲಿರುವ ಫ್ಯೂರಾನೊಕೌಮರಿನ್ಸ್ ಎಂಬ ರಾಸಾಯನಿಕ. ಮನುಷ್ಯರಿಗೆ ಮಾರಕವಾದರೂ ಇದು ಪರಿಸರಕ್ಕೆ ಹಾನಿಕಾರಕವಲ್ಲ.

ಈ ಹೂವುಗಳನ್ನೆಂದೂ ಮುಟ್ಟಬೇಡಿ.. ಸುವಾಸನೆಯನ್ನು ತೆಗೆದುಕೊಳ್ಳಲೇಬೇಡಿ; ಜೀವವೇ ಹೋಗಬಹುದು !
ಹೊಗ್ಡವ
Follow us on

ನೀವು ಹಾಗ್ವೀಡ್​ ಸಸ್ಯ.. ಅದರ ಹೂವುಗಳನ್ನು ನೋಡಿದ್ದೀರಾ? ತುಂಬ ಚೆಂದನೆಯ ಹೂವುಗಳು ಇವು. ಗೊಂಚಲಾಗಿ ಬಿಡುವ ಹೂವುಗಳನ್ನು ನೋಡಿದರೆ ಒಂದು ಸಲ ಹೋಗಿ ಮುಟ್ಟಬೇಕು, ಸುವಾಸನೆಯನ್ನು ತೆಗೆದುಕೊಳ್ಳಬೇಕು ಎನ್ನಿಸದೆ ಇರದು. ಆದರೆ ಅದನ್ನು ಎಂದಿಗೂ ಮಾಡಬೇಡಿ. ಅಂದರೆ ಹೂವನ್ನು ಕೈಯಲ್ಲಿ ಹಿಡಿದುಕೊಳ್ಳಬೇಡಿ, ಅದನ್ನು ಮೂಗಿನ ಬಳಿ ತಂದು ಸುವಾಸನೆ ತೆಗೆದುಕೊಳ್ಳಬೇಡಿ…

ನಾವಿದನ್ನು ಸುಮ್ಮನೆ ಹೇಳುತ್ತಿಲ್ಲ. ಹಾಗ್ವೀಡ್ ಸಸ್ಯ, ಅದರ ಹೂವುಗಳನ್ನು ಮುಟ್ಟುವುದು, ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಜೀವವೇ ಹೋಗಬಹುದು. ಇದೇ ಕಾರಣಕ್ಕೆ ಹಾಗ್ವಿಡ್​ ಸಸ್ಯಗಳಿಗೆ ಕಿಲ್ಲರ್​ ಟ್ರೀ ಎಂಬ ಹೆಸರು ಬಂದಿದೆ. ಒಂದೇ ಕ್ಷಣದಲ್ಲಿ ಜೀವ ತೆಗೆದುಬಿಡುವ ಸಾಮರ್ಥ್ಯ ಇದಕ್ಕಿದೆ.

ಐದು ಎಸಳುಗಳನ್ನು ಹೊಂದಿರುವ ಹಾಗ್ವೀಡ್ ಹೂವುಗಳು ಅತ್ಯಂತ ಸುಂದರ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದರಲ್ಲಿ ವಿಷಕಾರಿ ದ್ರವ ಯಥೇಚ್ಛವಾಗಿ ಇರುತ್ತದೆ. ಈ ವಿಷ ಜೀವವನ್ನೇ ತೆಗೆಯುವಷ್ಟು ತೀಕ್ಷ್ನವಾಗಿರುತ್ತದೆ. ಹಾಗಾಗಿ ಅದನ್ನು ಮುಟ್ಟಿದರೆ ನಮ್ಮ ದೇಹಕ್ಕೆ ಆ ದ್ರವ ತಗುಲಿದರೆ ಕೈ ಸುಟ್ಟು ಹೋಗುತ್ತದೆ. ಅದರ ಸುವಾಸನೆಯನ್ನು ಆಳವಾಗಿ ತೆಗೆದುಕೊಂಡರೆ ವಿಷಕಾರಿ ಅಂಶ ದೇಹದೊಳಗೆ ಹೋದರೆ ಅಸ್ವಸ್ಥರಾಗಬೇಕಾಗುತ್ತದೆ. ಅಷ್ಟೇ ಅಲ್ಲ, ಪ್ರಾಣ ಹೋಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗ್ವೀಡ್ ಹೂವು, ಗಿಡಗಳಿಂದ ಸ್ಪರ್ಶದಿಂದ ನೀವೇನಾದರೂ ಅಸ್ವಸ್ಥರಾದರೆ ಚೇತರಿಸಿಕೊಳ್ಳಲು ತುಂಬ ದಿನಗಳೇ ಬೇಕಾಗುತ್ತದೆ.

ಈ ಸಸ್ಯ ಇಷ್ಟೊಂದು ವಿಷಕಾರಿಯಾಗಲು ಮುಖ್ಯಕಾರಣ ಇದರಲ್ಲಿರುವ ಫ್ಯೂರಾನೊಕೌಮರಿನ್ಸ್ ಎಂಬ ರಾಸಾಯನಿಕ. ಮನುಷ್ಯರಿಗೆ ಮಾರಕವಾದರೂ ಇದು ಪರಿಸರಕ್ಕೆ ಹಾನಿಕಾರಕವಲ್ಲ. ವಾತಾವರಣದಲ್ಲಿನ ಆಮ್ಲಜನಕ ಮತ್ತು ಕಾರ್ಬನ್​ ಡೈ ಆಕ್ಸೈಡ್​ ಸಮತೋಲನದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ದರೋಡೆ ಕೇಸ್​ಗಳು ಹೆಚ್ಚುತ್ತಿವೆ, ರಾತ್ರಿ ಮನೆಯಲ್ಲಿ ಮಲಗಲೂ ಭಯವಾಗುತ್ತದೆ: ಯು.ಟಿ.ಖಾದರ್

MS Dhoni: ಮಹೇಂದ್ರ ಸಿಂಗ್ ಧೋನಿ ಮುಂದಿವೆ ಮೂರು ದಾಖಲೆಗಳು; ಐಪಿಎಲ್ 2021ರಲ್ಲೂ ಮಾಡ್ತಾರಾ ಧೋನಿ ಧಮಾಕ?

 

Giant Hogweed Plant is most dangerous poisonous plants

Published On - 4:38 pm, Tue, 6 April 21