ಸಿಂಗಾಪುರದಲ್ಲಿ ಧಾರವಾಡ ಪೇಡಾ, ಮಾವು, ಶಿಗ್ಗಾಂವಿ ಸಿಹಿ ತಿನಿಸುಗಳಿಗೆ ಮಾರುಕಟ್ಟೆ ವಿಸ್ತರಿಸಿ: ಅನಿವಾಸಿ ಕನ್ನಡಿಗರಿಗೆ ಪ್ರಲ್ಹಾದ ಜೋಶಿ ಕರೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಿಂಗಾಪುರದ ಕನ್ನಡಿಗರಿಗೆ ಉತ್ತರ ಕರ್ನಾಟಕದ ಹೆಮ್ಮೆಯ ಖಾದ್ಯಗಳಾದ ಧಾರವಾಡ ಪೇಡಾ, ಮಾವು ಮತ್ತು ಶಿಗ್ಗಾಂವಿ ಸಿಹಿ ತಿನಿಸುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸಲು ಕರೆ ನೀಡಿದ್ದಾರೆ. 'ಬಾಕ್ಸ್ ಮಾಮಾ' ಮಂಜುನಾಥ್ ಯಶಸ್ಸನ್ನು ಶ್ಲಾಘಿಸಿದ ಸಚಿವರು, ಕರ್ನಾಟಕದಲ್ಲೇ ಅಂತರಾಷ್ಟ್ರೀಯ ಗುಣಮಟ್ಟದ ಪ್ಯಾಕೇಜಿಂಗ್‌ಗೆ ಸಲಹೆ ನೀಡಿದರು, ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಲಿದೆ.

ಸಿಂಗಾಪುರದಲ್ಲಿ ಧಾರವಾಡ ಪೇಡಾ, ಮಾವು, ಶಿಗ್ಗಾಂವಿ ಸಿಹಿ ತಿನಿಸುಗಳಿಗೆ ಮಾರುಕಟ್ಟೆ ವಿಸ್ತರಿಸಿ: ಅನಿವಾಸಿ ಕನ್ನಡಿಗರಿಗೆ ಪ್ರಲ್ಹಾದ ಜೋಶಿ ಕರೆ
ಸಚಿವ ಪ್ರಲ್ಹಾದ ಜೋಶಿ
Image Credit source: Tv9 kannada

Updated on: Nov 16, 2026 | 12:42 PM

ಸಿಂಗಾಪುರ, ನ.16: ಉತ್ತರ ಕರ್ನಾಟಕದ ಹೆಮ್ಮೆಯ ಖಾದ್ಯಗಳಾದ ಧಾರವಾಡ ಮಿಶ್ರಾ ಪೇಡಾ, ಧಾರವಾಡ ಮಾವು ಮತ್ತು ಶಿಗ್ಗಾಂವಿ ಭಾಗದ ಸಾಂಪ್ರದಾಯಿಕ ಸಿಹಿ ತಿನಿಸುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಾಲ ಮಾರುಕಟ್ಟೆ ಕಲ್ಪಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಸಿಂಗಾಪುರದ ಅನಿವಾಸಿ ಭಾರತೀಯರಿಗೆ ಕರೆ ನೀಡಿದ್ದಾರೆ. ಸೋಮವಾರ ಸಿಂಗಾಪುರಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಕನ್ನಡ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನೀಡಿದ ಹೃದಯಸ್ಪರ್ಶಿ ಸನ್ಮಾನ ಸ್ವೀಕರಿಸಿ ಸಚಿವರು ಮಾತನಾಡಿದರು.

ತಾಯ್ನಾಡಿನಿಂದ ದೂರವಿದ್ದರೂ ಸಿಂಗಾಪುರದಲ್ಲಿ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಅತ್ಯಂತ ಪ್ರೀತಿ, ಅಭಿಮಾನದಿಂದ ಪೋಷಿಸುತ್ತಿರುವ ಕನ್ನಡಿಗರ ಕಾರ್ಯ ಹೆಮ್ಮೆ ತರುವಂತಹದ್ದು ಎಂದು ಸಚಿವರು ಶ್ಲಾಘಿಸಿದರು. ಇದಕ್ಕೂ ಮುನ್ನ ಸಿಂಗಾಪುರದಲ್ಲಿ ‘ಬಾಕ್ಸ್ ಮಾಮಾ’ (Box Mama) ಸಂಸ್ಥೆಯನ್ನು ಕಟ್ಟಿ ಧಾರವಾಡ ಮಿಶ್ರಾ ಪೇಡಾ ಮತ್ತು ಮಾವಿನ ಸವಿರುಚಿಯನ್ನು ಅಲ್ಲಿನ ಜನರಿಗೆ ಉಣಬಡಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಮೂಲದ ಪಿ. ಮಂಜುನಾಥ್ ಅವರೊಂದಿಗೆ ಸಚಿವರು ಸಂವಾದ ನಡೆಸಿದರು. ಮಂಜುನಾಥ್ ಅವರು ಕಳೆದ ವರ್ಷ ಸಿಂಗಾಪುರದಲ್ಲಿ ಸುಮಾರು 10 ಟನ್‌ಗಳಷ್ಟು ಧಾರವಾಡದ ಮಾವಿನಹಣ್ಣುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದ್ದಲ್ಲದೆ, 100 ಕೆಜಿಗೂ ಹೆಚ್ಚು ಧಾರವಾಡ ಮಿಶ್ರಾ ಪೇಡಾ ಹಾಗೂ ಶಿಗ್ಗಾಂವಿಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಸಿಂಗಾಪುರ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಶಿ, ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವಂತೆ ಪ್ರೋತ್ಸಾಹಿಸಿದರು.

Loading...

ಇದನ್ನೂ ಓದಿ: 18 ವರ್ಷ ದುಡಿದರೂ ಆರ್ಥಿಕ ಅಭದ್ರತೆ; ಗೌರವಧನ, ಹೆರಿಗೆ ರಜೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.17ರಂದು ಬೃಹತ್ ಪ್ರತಿಭಟನೆ

ಉತ್ತರ ಕರ್ನಾಟಕದ ಆಹಾರ ಪದಾರ್ಥಗಳಿಗೆ ಸಿಂಗಾಪುರದಲ್ಲಿ ಹೆಚ್ಚಿನ ಬೇಡಿಕೆ ಕಂಡುಕೊಳ್ಳಲು, ಅವುಗಳನ್ನು ನಮ್ಮ ಕರ್ನಾಟಕದಲ್ಲೇ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪ್ಯಾಕೇಜಿಂಗ್ ಮಾಡುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು. ಇದರಿಂದ ಹುಬ್ಬಳ್ಳಿ, ಧಾರವಾಡ ಹಾಗೂ ಶಿಗ್ಗಾಂವಿ ಭಾಗದ ಸ್ಥಳೀಯ ಪ್ಯಾಕೇಜಿಂಗ್ ಉದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ಸ್ಥಳೀಯ ಆರ್ಥಿಕ ಚಟುವಟಿಕೆ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us