Gold Rate Today: ಬಂಗಾರದ ಬೆಲೆ ನಿನ್ನೆಗಿಂತಲೂ ಇಂದು ಹೆಚ್ಚು; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..

|

Updated on: May 08, 2021 | 10:28 AM

ಇನ್ನು ದೇಶದಲ್ಲಿ ಒಟ್ಟಾರೆ ನೋಡುವುದಾದರೆ ಇಂದು 10 ಗ್ರಾಂ. 22 ಕ್ಯಾರೆಟ್​ ಚಿನ್ನದ ದರ 44,810 ರೂ. ಇದೆ. ಹಾಗೇ 100 ಗ್ರಾಂ.ಗೆ 4,48,100 ರೂ.ಆಗಿದೆ.   24 ಕ್ಯಾರೆಟ್​​ನ 10 ಗ್ರಾಂ. ಚಿನ್ನದ ದರ 45,810 ಆಗಿದ್ದು, ಈ ಬೆಲೆ ನಿನ್ನೆ 45,800 ರೂ. ಇತ್ತು.

Gold Rate Today: ಬಂಗಾರದ ಬೆಲೆ ನಿನ್ನೆಗಿಂತಲೂ ಇಂದು ಹೆಚ್ಚು; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..
ಪ್ರಾತಿನಿಧಿಕ ಚಿತ್ರ
Follow us on

ದೇಶದಲ್ಲಿ ಕೊರೊನಾ ಎರಡನೇ ಅಲೆ ಸಿಕ್ಕಾಪಟೆ ಹಾನಿಯನ್ನುಂಟು ಮಾಡುತ್ತಿದೆ. ಮತ್ತೆ ಒಂದೊಂದೇ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಲಾಕ್​ಡೌನ್ ಮೊರೆ ಹೋಗುತ್ತಿವೆ. ಈ ಮಧ್ಯೆ ಚಿನ್ನದ ಬೆಲೆಯಲ್ಲೂ ಒಂದೇ ಸಮ ಏರಿಕೆಯಾಗುತ್ತಿದೆ. ಶನಿವಾರ (ಮೇ 8) ಕೂಡ ಬಂಗಾರದ ಬೆಲೆ ಹೆಚ್ಚಾಗಿದ್ದು 10 ಗ್ರಾಂ. 22 ಕ್ಯಾರೆಟ್​​ ಚಿನ್ನದ ಬೆಲೆ ಬೆಂಗಳೂರಿನಲ್ಲಿ 44,510 ರೂಪಾಯಿಯೇ ಏರಿದೆ. ನಿನ್ನೆ ಬೆಂಗಳೂರಿನಲ್ಲಿ 44,500 ರೂ. ಇತ್ತು. ಇಂದೀಗ 10 ರೂ.ಏರಿಕೆಯಾಗಿದೆ. ಹಾಗೇ ಬೆಂಗಳೂರಿನಲ್ಲಿ 100 ಗ್ರಾಂ. 22 ಕ್ಯಾರೆಟ್​ ಚಿನ್ನದ ದರ ನಿನ್ನೆಗಿಂತ 100 ರೂ.ಏರಿಕೆಯಾಗಿದ್ದು 4,45,100 ರೂ. ಆಗಿದೆ. ಇನ್ನು ಬೆಳ್ಳಿ ದರ ನೋಡುವುದಾದರೆ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ದರ 71.50 ರೂ. ಇದೆ. ಹಾಗೇ 10 ಗ್ರಾಂಗೆ 715ರೂ. ಇದ್ದು ನಿನ್ನೆಗಿಂತ 1 ರೂ.ಕಡಿಮೆಯಾಗಿದೆ. ಅಲ್ಲಿಗೆ 1 ಕೆಜಿ ಬೆಳ್ಳಿ ದರ 100 ರೂ.ಕಡಿಮೆಯಾಗಿದ್ದು, 71,500 ರೂಪಾಯಿ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ರಾಜ್ಯ ರಾಜಧಾನಿಯಲ್ಲಿ 24 ಕ್ಯಾರೆಟ್​ ಚಿನ್ನದ ಬೆಲೆ ಇಂದು 10 ರೂ. ಹೆಚ್ಚಾಗಿದ್ದು, 10 ಗ್ರಾಂ.ಗೆ 48,560 ರೂ. ಇದೆ. ನಿನ್ನೆ 48,550 ರೂ. ಇತ್ತು. ಹಾಗೇ ಬೆಂಗಳೂರಿನಲ್ಲಿ 100 ಗ್ರಾಂ. 24 ಕ್ಯಾರೆಟ್​ ಚಿನ್ನದ ಬೆಲೆ ನಿನ್ನೆಗಿಂತ 100 ರೂ. ಹೆಚ್ಚಾಗಿದ್ದು, 4,85,600ಕ್ಕೆ ಏರಿಕೆ ಕಂಡಿದೆ.

ಏಪ್ರಿಲ್​ ಮೊದಲವಾರದಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಿತ್ತು. ಕೊನೇ ವಾರದಲ್ಲಿ ಒಂದೆರಡು ದಿನ ಇಳಿಕೆಯಾಗಿದ್ದರೂ ಇದೀಗ ಕೆಲವು ದಿನಗಳಿಂದ ಮಮ್ಮೆ ಬಂಗಾರದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೂ ಸಹ ಕಳೆದ ಬಾರಿ ಆಗಸ್ಟ್​ನಲ್ಲಿ ಬಂಗಾರದ ಬೆಲೆ 56,000 ರೂ.ಗೆ ಏರಿಕೆಯಾಗಿತ್ತು. ಆ ದರಕ್ಕೆ ಹೋಲಿಸಿದರೆ, ಈಗ ಸುಮಾರು 9000 ರೂ.ಕಡಿಮೆಯೇ ಇದೆ.

ಇನ್ನು ದೇಶದಲ್ಲಿ ಒಟ್ಟಾರೆ ನೋಡುವುದಾದರೆ ಇಂದು 10 ಗ್ರಾಂ. 22 ಕ್ಯಾರೆಟ್​ ಚಿನ್ನದ ದರ 44,810 ರೂ. ಇದೆ. ಹಾಗೇ 100 ಗ್ರಾಂ.ಗೆ 4,48,100 ರೂ.ಆಗಿದೆ.   24 ಕ್ಯಾರೆಟ್​​ನ 10 ಗ್ರಾಂ. ಚಿನ್ನದ ದರ 45,810 ಆಗಿದ್ದು, ಈ ಬೆಲೆ ನಿನ್ನೆ 45,800 ರೂ. ಇತ್ತು. 100 ಗ್ರಾಂ. 24 ಕ್ಯಾರೆಟ್​ ಚಿನ್ನದ ಬೆಲೆ 4,58,100 ರೂಪಾಯಿ ಆಗಿದೆ. ಬೆಳ್ಳಿಯ ದರ ಚೆನ್ನೈ, ಹೈದರಾಬಾದ್​, ಭುವನೇಶ್ವರ್​ ಸೇರಿ ಕೆಲವು ನಗರಗಳಲ್ಲಿ 10 ಗ್ರಾಂ.ಗೆ 761 ರೂ. ಇರುವುದು ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲೂ 10 ಗ್ರಾಂ.ಗೆ 715 ರೂಪಾಯಿಯೇ ಇದೆ.

ದೇಶದ ವಿವಿಧ ಮಹಾನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ:
ನಗರ                      22 ಕ್ಯಾರೆಟ್                     24 ಕ್ಯಾರೆಟ್
ಚೆನ್ನೈ                      44,980 ರೂ.                     49,070 ರೂ.
ಮುಂಬೈ                  44,810 ರೂ.                      45,810 ರೂ.
ದೆಹಲಿ                      45,920 ರೂ.                     49,960 ರೂ.
ಕೋಲ್ಕತ್ತ                 46,860 ರೂ.                     49,650 ರೂ.
ಹೈದರಾಬಾದ್​         44,510 ರೂ.                      48,560 ರೂ.
ಕೇರಳ                       44,510 ರೂ.                      48,560 ರೂ.
ಪುಣೆ                          44,810 ರೂ.                      45,810 ರೂ.
ಅಹ್ಮದಾಬಾದ್        47,070 ರೂ.                       49,070 ರೂ.
ಲಖನೌ                     45,920 ರೂ.                        49,960 ರೂ.

Published On - 10:18 am, Sat, 8 May 21