ಭಾರತದ ಕಾಫಿ ರುಚಿಗೆ ಮರುಳಾದ ಸುಂದರ್ ಪಿಚ್ಚೈ; ಎಐ ಶೃಂಗಭೆಯಲ್ಲಿ ಮಲಬಾರ್ ಕಾಫಿ ಸವಿದ ಗೂಗಲ್ ಸಿಇಒ

ದೆಹಲಿಯ AI ಶೃಂಗಸಭೆಗಾಗಿ ಭಾರತ್ ಮಂಟಪದಲ್ಲಿ ಹಾಕಲಾಗಿದ್ದ ಭಾರತೀಯ ಆವಿಷ್ಕಾರಗಳ ಮಳಿಗೆಗಳನ್ನು ವೀಕ್ಷಿಸಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರನ್ನು ಭಾರತ್ ಜಿಐ ಕಾಫಿ ಶಾಪ್ ಆಕರ್ಷಿಸಿದೆ. ಭಾರತೀಯ ಜಿಐ ಟ್ಯಾಗ್ ಹೊಂದಿರುವ ಕಾಫಿ ವೆರೈಟಿಯನ್ನು ಪ್ರದರ್ಶನಕ್ಕಿಡಲಾಗಿದ್ದ ಈ ಮಳಿಗೆಯ ಮುಂದೆ ನಿಂತ ಸುಂದರ್ ಪಿಚ್ಚೈ ಮಲಬಾರ್ ಕಾಫಿಯ ರುಚಿ ನೋಡಿದ್ದಾರೆ. ಅದರ ಸುವಾಸನೆ ಮತ್ತು ರುಚಿಗೆ ಮರುಳಾದ ಸುಂದರ್ ಪಿಚ್ಚೈ "ವಾವ್!" ಎಂದು ಉದ್ಘರಿಸಿದ್ದಾರೆ.

ಭಾರತದ ಕಾಫಿ ರುಚಿಗೆ ಮರುಳಾದ ಸುಂದರ್ ಪಿಚ್ಚೈ; ಎಐ ಶೃಂಗಭೆಯಲ್ಲಿ ಮಲಬಾರ್ ಕಾಫಿ ಸವಿದ ಗೂಗಲ್ ಸಿಇಒ
Sundar Pichai Enjoyed Bharat Gi Coffee

Updated on: Feb 19, 2026 | 5:46 PM

ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಜಗತ್ತಿನ ಹಲವು ದೇಶಗಳ ನಾಯಕರು ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಉದ್ಯಮಿಗಳು ಕೂಡ ಆಗಮಿಸಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚ್ಚೈ ಕೂಡ ಎಐ ಶೃಂಗಸಭೆಗೆ ಆಗಮಿಸಿದ್ದು, ಈ ವೇಳೆ ದೆಹಲಿಯ ಭಾರತ್ ಮಂಟಪದಲ್ಲಿ ಹಾಕಲಾಗಿದ್ದ ‘ಭಾರತ್ GI’ ಕಾಫಿಯನ್ನು (Bharat GI Coffee) ಸವಿದಿದ್ದಾರೆ. ಇಲ್ಲಿ ಭಾರತದಲ್ಲಿ ಬೆಳೆಯಲಾಗುವ ಉತ್ಕೃಷ್ಟ ಗುಣಮಟ್ಟದ ಕಾಫಿ ಬೀಜಗಳಿಂದ ತಯಾರಾದ ಜಿಐ ಟ್ಯಾಗ್ ಇರುವ ಕಾಫಿ ವಿಧಗಳನ್ನು ಪ್ರದರ್ಶಿಸಲಾಗಿತ್ತು. ಗೂಗಲ್​ ಸಿಇಒ ಸುಂದರ್ ಪಿಚೈ (Sundar Pichai) ಮಲಬಾರ್ ಕಾಫಿಯನ್ನು ಕುಡಿದು ಮನಸಾರೆ ಹೊಗಳಿದ್ದಾರೆ.

ಭಾರತ್ GI ಕಾಫಿಯನ್ನು ಸವಿದ ಸುಂದರ್ ಪಿಚ್ಚೈ ನಗುತ್ತಾ “ಮಲಬಾರ್ ಅರೇಬಿಕಾ ಕಾಫಿ ನನಗೆ ಬಹಳ ಇಷ್ಟವಾಗಿದೆ” ಎಂದು ಹೇಳಿದ್ದಾರೆ. ಅವರು ಬ್ಯಾರಿಸ್ಟಾಗಳೊಂದಿಗೆ ಮಾತನಾಡುತ್ತಾ ವಿವಿಧ ಪ್ರಭೇದಗಳ ಸ್ಯಾಂಪಲ್ ನೋಡಿದ್ದಾರೆ. ಭಾರತೀಯ ಜಿಐ ಟ್ಯಾಗ್ ಹೊಂದಿರುವ ಅರಕುವಿನಿಂದ ಕೂರ್ಗ್‌ವರೆಗೆ ಭಾರತದ ಪ್ರೀಮಿಯಂ GI ಟ್ಯಾಗ್ ಹೊಂದಿದ ಕಾಫಿಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು.


ಇದನ್ನೂ ಓದಿ: AI Professional Courses: AI ಕೌಶಲ್ಯ ಹೆಚ್ಚಿಸಲು ಗೂಗಲ್​​ನಿಂದ ಹೊಸ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ

ಜಿಐ ಟ್ಯಾಗ್ ಮಾಡಲಾದ ಉತ್ಪನ್ನಗಳನ್ನು ಉತ್ತೇಜಿಸುವ ಭಾರತ್ GI ಕಾಫಿ ಭಾರತದ ವಾಣಿಜ್ಯ ಸಚಿವಾಲಯದ ರಾಷ್ಟ್ರೀಯ ಬ್ರ್ಯಾಂಡ್ ಆಗಿದೆ. ಕರ್ನಾಟಕದ ಚಿಕ್ಕಮಗಳೂರು ಅರೇಬಿಕಾ ಕಾಫಿ, ಬಾಬಾಬುಡನ್​​​ಗಿರಿ ಅರೇಬಿಕಾ ಕಾಫಿ, ಕೂರ್ಗ್ ಅರೇಬಿಕಾ ಕಾಫಿ, ಕೇರಳದ ವಯನಾಡ್ ರೋಬಸ್ಟಾ ಕಾಫಿ, ಆಂಧ್ರಪ್ರದೇಶದ ಅರಕು ಕಣಿವೆ ಅರೇಬಿಕಾ ಕಾಫಿ ಕೂಡ ಜಿಐ ಟ್ಯಾಗ್ ಹೊಂದಿದೆ.


ಫೆಬ್ರವರಿ 16 ರಿಂದ 20ರವರೆಗೆ ನಡೆಯುತ್ತಿರುವ ಐದು ದಿನಗಳ ಎಐ ಶೃಂಗಸಭೆಯು ಜಾಗತಿಕ ಬೆಳವಣಿಗೆಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Thu, 19 February 26