Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್​ ಗೌರವ ಸಲ್ಲಿಸಿದ ಗೂಗಲ್​

|

Updated on: Apr 26, 2021 | 10:15 AM

Google Doodles: ಕೊವಿಡ್​ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಿದ ವೈಜ್ಞಾನಿಕ ಕ್ಷೇತ್ರದ ಎಲ್ಲ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬರೆಯಲಾಗಿದೆ.

Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್​ ಗೌರವ ಸಲ್ಲಿಸಿದ ಗೂಗಲ್​
ಇಂದಿನ ಗೂಗಲ್​ ಡೂಡಲ್​
Follow us on

ಜಗತ್ತಿಗೆ ಕೊರೊನಾ ಸೋಂಕು ಕಾಲಿಟ್ಟು ವರ್ಷಗಳೇ ಕಳೆದಿವೆ. ಎಲ್ಲ ರಾಷ್ಟ್ರಗಳೂ ಸಹ ಈ ಸೋಂಕಿನ ವಿರುದ್ಧ ಹೋರಾಡುತ್ತಿವೆ. ಇದನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ, ವೈರಸ್ ವಿರುದ್ಧ ಬದುಕಬೇಕು ಎಂಬ ಕಹಿ ಸತ್ಯವನ್ನು ಅರ್ಥಮಾಡಿಕೊಂಡು, ಅದರೊಟ್ಟಿಗೆ ಬದುಕಲು ಸಿದ್ಧವಾಗುತ್ತಿವೆ.

ಈ ಮಧ್ಯೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿ ವಿವಿಧ ಕ್ಷೇತ್ರಗಳ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತು ಕೊರೊನಾ ವೈರಸ್​ ವಿರುದ್ಧ ಹೋರಾಡಿದ್ದಾರೆ. ಜನರ ಸುರಕ್ಷತೆಗಾಗಿ ತಮ್ಮ ಪ್ರಾಣಗಳನ್ನೇ ಪಣಕ್ಕಿಟ್ಟುಕೊಂಡಿದ್ದಾರೆ. ಇನ್ನು ಇವರೆಲ್ಲರೊಟ್ಟಿಗೆ ಕೊರೊನಾ ವಿರುದ್ಧ ಹೋರಾಟದಲ್ಲಿ ತುಂಬ ಪ್ರಮುಖ ಪಾತ್ರ ವಹಿಸಿದ್ದು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ. ಕೊರೊನಾ ಲಸಿಕೆ ಕಂಡು ಹಿಡಿಯುವ ಮೂಲಕ ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸುತ್ತಿದೆ.
ಇದೀಗ ಈ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ, ಸರ್ಚ್ ಎಂಜಿನ್​ ದೈತ್ಯ ಗೂಗಲ್ ತನ್ನ​ ಡೂಡಲ್​ ಮೂಲಕ ಗೌರವ ಅರ್ಪಿಸಿದೆ. ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಗೌರವ ಸಲ್ಲಿಸಲು ಎನಿಮೇಟೆಡ್​ ಡೂಡಲ್​ ರಚಿಸಿದೆ. ಇದರಲ್ಲಿ ಮೊದಲ G ಒಂದು ಹಾರ್ಟ್​ ಮಾರ್ಕ್​​ನ್ನು ಕೊನೆಯಲ್ಲಿರುವ E ಗೆ ಕಳಿಸುವಂತೆ ರಚಿಸಲಾಗಿದೆ. ಕೊನೆಯಲ್ಲಿರುವ E ಯನ್ನು ವಿಜ್ಞಾನಿಗಳು ಮತ್ತು ಸಂಶೋಧಕರು ರಿಸರ್ಚ್​ ಮಾಡುತ್ತಿರುವಂತೆ ಇಡಲಾಗಿದೆ.

ಈ ಗೂಗಲ್​ ಡೂಡಲ್ ಮೇಲೆ ಕ್ಲಿಕ್​ ಮಾಡಿದರೆ, ಧನ್ಯವಾದಗಳು- ಕೊವಿಡ್​ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಿದ ವೈಜ್ಞಾನಿಕ ಕ್ಷೇತ್ರದ ಎಲ್ಲ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬರೆಯಲಾಗಿದೆ.

ಕೆಲವು ವಿಶೇಷ ಸಂದರ್ಭಗಳಲ್ಲಿ ಗೂಗಲ್​ ತನ್ನ ಡೂಡಲ್​ ಮೂಲಕ ಪ್ರಸ್ತುತಪಡಿಸುತ್ತದೆ. ಕಳೆದವರ್ಷವೂ ಸಹ ಕೊರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಟ ನಡೆಸುತ್ತಿದ್ದ ಸಿಬ್ಬಂದಿಗೆ ಡೂಡಲ್ ಗೌರವ ಅರ್ಪಿಸಿತ್ತು.

ಇದನ್ನೂ ಓದಿ: Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​

ಕೊರೊನಾ: ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಬಲಿ, ನೇಣು ಬಿಗಿದುಕೊಂಡು ಶ್ರೀರಂಗಪಟ್ಟಣದಲ್ಲಿ ಮತ್ತೊಬ್ಬ ಸಾವು

Google Says Thank You Coronavirus Helpers with a special Doodles to honor healthcare workers

Published On - 10:04 am, Mon, 26 April 21