ಗಗನಸಖಿ ಗೀತಿಕಾ ಆತ್ಮಹತ್ಯೆ ಪ್ರಕರಣ: ಹರ್ಯಾಣ ಬಿಜೆಪಿ ಶಾಸಕ ಗೋಪಾಲ್ ಕಾಂಡಾ ಖುಲಾಸೆ

ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರ್ಯಾಣ ಬಿಜೆಪಿ ಶಾಸಕ ಗೋಪಾಲ್ ಗೋಯಲ್ ಕಾಂಡಾ ಅವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ಗಗನಸಖಿ ಗೀತಿಕಾ ಆತ್ಮಹತ್ಯೆ ಪ್ರಕರಣ: ಹರ್ಯಾಣ ಬಿಜೆಪಿ ಶಾಸಕ ಗೋಪಾಲ್ ಕಾಂಡಾ ಖುಲಾಸೆ
ಗೋಪಾಲ್ ಕಾಂಡಾ

Updated on: Jul 25, 2023 | 11:54 AM

ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರ್ಯಾಣ ಬಿಜೆಪಿ ಶಾಸಕ ಗೋಪಾಲ್ ಗೋಯಲ್ ಕಾಂಡಾ(Gopal Goyal Kanda) ಅವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಹಿಂದೆ ಕಾಂಡದ ಎಂಡಿಎಲ್‌ಆರ್ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದ ಮಾಜಿ ಗಗನಸಖಿ ಗೀತಿಕಾ ಅವರು ಆಗಸ್ಟ್ 5, 2012 ರಂದು ವಾಯುವ್ಯ ದೆಹಲಿಯ ಅಶೋಕ್ ವಿಹಾರ್ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಪ್ರಕರಣದಿಂದ ಗೂಪಾಲ್ ಹೆಸರು ಕೈಬಿಟ್ಟು ಕೋರ್ಟ್ ತೀರ್ಪು ನೀಡಿದೆ. ಗೋಪಾಲ್ ಕಾಂಡ ಪ್ರಸ್ತುತ ಸಿರ್ಸಾದ ಶಾಸಕರಾಗಿದ್ದಾರೆ. ಈ ಪ್ರಕರಣದಲ್ಲಿ ಕಾಂಡಾ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.

ಮತ್ತಷ್ಟು ಓದಿ: ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: ಸಂತೋಷ್ ರಾವ್ ನಿರ್ದೋಷಿ, 11 ವರ್ಷ ಬಳಿಕ ತೀರ್ಪು ನೀಡಿದ ಸಿಬಿಐ ಕೋರ್ಟ್

ಆತ್ಮಹತ್ಯೆಗೆ ಪ್ರಚೋದನೆ, ಕ್ರಿಮಿನಲ್ ಬೆದರಿಕೆ ಹಾಗೂ ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಹರ್ಯಾಣದ ಮಾಜಿ ಸಚಿವ ಈಗಿನ ಶಾಸಕ ಗೋಪಾಲ್ ಕಾಂಡಾ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಗೀತಿಕಾ ಶರ್ಮಾ ಸೂಸೈಡ್​ ನೋಟ್​ನಲ್ಲಿ ತನ್ನ ಸಾವಿಗೆ ಸಿರ್ಸಾ ಶಾಸಕ ಗೋಪಾಲ್​ ಕಾಂಡಾ ಹಾಗೂ ಎಚ್​ಆರ್ ಮ್ಯಾನೇಜರ್ ಅರುಣಾ ಚಡ್ಡಾ ಕಾರಣ ಎಂದು ಬರೆದಿದ್ದರು.

ಭಾರತ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಗೋಪಾಲ್ ಅವರನ್ನು 2012ರ ಆಗಸ್ಟ್ 2 ರಂದು ಬಂಧಿಸಲಾಗಿತ್ತು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ