ದೆಹಲಿ: ಚೀನಾ ಹೆಸರು ಕೇಳಿದ್ರೆ ಸಾಕು ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಉರಿದುರಿದು ಬೀಳ್ತಿವೆ. ಇನ್ನು ಉತ್ಪಾದನಾ ವಲಯದ ದೈತ್ಯ ಚೀನಾಗೆ ಕೊರೊನಾ ವೈರಸ್ ವಿಲನ್ ಪಟ್ಟಕಟ್ಟಿದೆ. ಯಾಕಂದ್ರೆ ತನ್ನ ಪ್ರಜೆಗಳಿಗೆ ಸರಿಯಾಗಿ ಆಹಾರ ಪದ್ಧತಿ ಕಲಿಸದ ರಾಷ್ಟ್ರದಿಂದ ಏನೇನೋ ವಿಪತ್ತು ನಡೆದು ಹೋಗಿದೆ. ಚೀನಿಯರ ಆಹಾರ ಪದ್ಧತಿಯಿಂದಲೇ ಇವತ್ತಿನ ಸಂದಿಗ್ಧ ಸ್ಥಿತಿ ಎದುರಾಗಿರೋದು. ಹೀಗಾಗಿ ರಿವೇಂಜ್ ತೆಗೆದುಕೊಳ್ಳಲು ಜಗತ್ತಿನ ಪ್ರತಿ ರಾಷ್ಟ್ರವೂ ಕಾಯ್ತಾ ಇದೆ.
‘ಡ್ರ್ಯಾಗನ್’ ನಾಡಿನ ಕಂಪನಿಗಳಿಗೆ ಗಾಳ!
ಕೊರೊನಾ ಅಟ್ಯಾಕ್ ಆದಾಗಿನಿಂದ ಚೀನಾ ಗ್ರಹಚಾರ ನೆಟ್ಟಗಿಲ್ಲ. ಅದಕ್ಕಿಂತ ಹೆಚ್ಚಾಗಿ ಚೀನಾದ ಕಂಪನಿಗಳೀಗ ಬರ್ಬಾದ್ ಆಗಿವೆ. ಹೀಗಾಗಿ ಚೀನಾದಿಂದ ಕಾಲುಕೀಳಲು ಚೀನಿ ಕಂಪನಿಗಳು ಸಿದ್ಧವಾಗಿವೆ. ಭಾರತವೇ ನಮಗೆ ಬೆಸ್ಟ್ ಅನ್ನೋದು ಚೀನಿ ಕಂಪನಿಗಳಿಗೆ ಅರಿವಾದಂತಿದೆ. ಭಾರತದಲ್ಲಿ ನೆಲೆಯೂರಲು ಚೀನಿ ಕಂಪನಿಗಳು ಸಿದ್ಧವಾಗಿವೆ. ಇನ್ನು ಹೀಗೆ ವಲಸೆ ಬರುವ ಕಂಪನಿಗಳಿಗೆ ಭಾರತದಲ್ಲಿ ಉದ್ಯಮ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಸಕಲ ವ್ಯವಸ್ಥೆ ಮಾಡಲು ಮುಂದಾಗಿದೆ. 10 ಮೆಗಾ ಕ್ಲಸ್ಟರ್ಪ್ಲ್ಯಾನ್ ರೆಡಿಯಾಗಿದ್ದು 9 ರಾಜ್ಯಗಳ ಪೈಕಿ 10 ನಗರಗಳಲ್ಲಿ ಭರದ ಸಿದ್ಧತೆ ನಡೆದಿದೆ. ಹಾಗಾದ್ರೆ ಚೀನಿ ಕಂಪನಿಗಳಿಗೆ ಗಾಳ ಹಾಕಲು ಪ್ಲ್ಯಾನ್ ಹೇಗೆ ರೆಡಿಯಾಗಿದೆ ಅನ್ನೋದನ್ನ ನೋಡೋದಾದ್ರೆ.
ಚೀನಾಗೆ ಗುನ್ನಾ?
ಗ್ರೇಟರ್ ನೋಯ್ಡಾ ಪ್ರದೇಶವನ್ನು ದೇಶದ ಎಲೆಕ್ಟ್ರಾನಿಕ್ಸ್ ಹಬ್ ಮಾಡಲು ಚಿಂತನೆ ನಡೆದಿದೆ. ಔಷಧ ತಯಾರಿಕಾ ವಲಯಕ್ಕೆ ಮುತ್ತಿನನಗರಿ ಹೈದರಾಬಾದ್ ಆಯ್ಕೆಯಾಗಿದೆ. ಆಟೋಮೊಬೈಲ್ ಉದ್ಯಮಕ್ಕೆ ಪುಣೆ ಮತ್ತು ಔರಂಗಾಬಾದ್ ಸೆಲೆಕ್ಟ್ ಆಗಿದ್ದರೆ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಕೂಡ ಮೆಗಾ ಕ್ಲಸ್ಟರ್ ಲಿಸ್ಟ್ನಲ್ಲಿವೆ. ಇನ್ನೂ ಗುಜರಾತ್ನ ವಡೋದರ, ನೆಲ್ಲೂರು ಹಾಗೂ ಅಹಮದಾಬಾದ್ಗೂ ಸ್ಥಾನ ಸಿಕ್ಕಿದೆ. ಆಂಧ್ರದ ತಿರುಪತಿ, ನೆಲ್ಲೂರಿಗೂ ಚೀನಾ ಕಂಪನಿಗಳು ಬರಲು ಸಿದ್ಧವಾಗಿವೆ.
ಒಟ್ನಲ್ಲಿ ವಿದೇಶಿ ನೇರ ಬಂಡವಾಳ ಸೆಳೆಯುವ ಜೊತೆಗೆ, ಬ್ರಾಂಡ್ ಇಂಡಿಯಾ ಹವಾ ಕ್ರಿಯೇಟ್ ಮಾಡೋಕೆ ಕೇಂದ್ರಸರ್ಕಾರ ಸಿದ್ಧವಾಗಿದೆ. ಇನ್ನೂ ಭಾರತದಲ್ಲಿ 22 ಮಿಲಿಯನ್ ಚದರ ಅಡಿ ಕೈಗಾರಿಕಾ ಜಾಗ ರೆಡಿಯಾಗಿದೆ. ಈ ಜಾಗವನ್ನು ಬಳಸಿಕೊಂಡು ಚೀನಾದಿಂದ ಬರುವ ಕೈಗಾರಿಕೆಗಳಿಂದ ಉತ್ಪಾದನಾ ವಲಯ ಸೃಷ್ಟಿಸಬಹುದು. ಭಾರತದಲ್ಲಿ ಉದ್ಯಮ ನಡೆಸುವುದು ಮೊದಲಿಗಿಂತ ಸುಲಭವಾಗಿದೆ. ಉದ್ಯಮ ಸರಳೀಕರಣದಲ್ಲಿ ಭಾರತದ ಬೆಸ್ಟ್ ಆಗಿದ್ದು, ಹಣದ ಉಳಿತಾಯವೂ ಆಗಲಿದೆ. ಚೀನಿ ಕಂಪನಿಗಳು ಎಂಟ್ರಿಯಾದ್ರೆ ಭಾರತದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಲಿದೆ.
Published On - 12:33 pm, Sun, 17 May 20