ಲುಂಗಿ ಅಥವಾ ನೈಟಿ ಧರಿಸಿ ಅಡ್ಡಾಡುವಂತಿಲ್ಲ ಎಂದು ನಿವಾಸಿಗಳಿಗೆ ಸೂಚನೆ ನೀಡಿದ ಗ್ರೇಟರ್ ನೋಯ್ಡಾದ ಹೌಸಿಂಗ್ ಸೊಸೈಟಿ

|

Updated on: Jun 14, 2023 | 2:12 PM

ಸೊಸೈಟಿ ಕೈಗೊಂಡಿರುವ ಉತ್ತಮ ನಿರ್ಧಾರ ಇದಾಗಿದ್ದು, ಇದನ್ನು ಎಲ್ಲರೂ ಗೌರವಿಸಬೇಕು, ವಿರೋಧಿಸಲು ಏನೂ ಇಲ್ಲ. ಮಹಿಳೆಯರು ನೈಟಿಗಳನ್ನು ಧರಿಸಿ ತಿರುಗಾಡಿದರೆ ಅದು ಪುರುಷರಿಗೆ ಅನಾನುಕೂಲವಾಗಿರುತ್ತದೆ. ಪುರುಷರು ಲುಂಗಿಗಳನ್ನು ಧರಿಸಿದರೆ ಅದು ಮಹಿಳೆಯರಿಗೆ ಅನಾನುಕೂಲವಾಗಿರುತ್ತದೆ

ಲುಂಗಿ ಅಥವಾ ನೈಟಿ ಧರಿಸಿ ಅಡ್ಡಾಡುವಂತಿಲ್ಲ ಎಂದು ನಿವಾಸಿಗಳಿಗೆ ಸೂಚನೆ ನೀಡಿದ ಗ್ರೇಟರ್ ನೋಯ್ಡಾದ ಹೌಸಿಂಗ್ ಸೊಸೈಟಿ
ವೈರಲ್ ಆಗಿರುವ ನೋಟಿಸ್
Follow us on

ನೋಯ್ಡಾ: ಸಾಮಾನ್ಯ ಪ್ರದೇಶಗಳು ಮತ್ತು ಉದ್ಯಾನವನಗಳಲ್ಲಿ ಸುತ್ತಾಡುವಾಗ ಇಂತಿಂಥ ಉಡುಗೆ ಮಾತ್ರ ಧರಿಸಬೇಕು ಎಂದು ಗ್ರೇಟರ್ ನೋಯ್ಡಾದ (Greater Noida) ಸೊಸೈಟಿ ನಿವಾಸಿಗಳ ಕಲ್ಯಾಣ ಸಂಘ (RWA) ತನ್ನ ನಿವಾಸಿಗಳನ್ನು ಒತ್ತಾಯಿಸಿದೆ. ಹಿಮ್ಸಾಗರ್ ಅಪಾರ್ಟ್‌ಮೆಂಟ್ AOA ಜೂನ್ 10 ರಂದು ಹೊರಡಿಸಿದ ಸುತ್ತೋಲೆಯೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲುಂಗಿ ಮತ್ತು ನೈಟಿ ಧರಿಸಿ ತಮ್ಮ ಫ್ಲಾಟ್‌ಗಳಿಂದ ಹೊರಬರದಂತೆ ನಿವಾಸಿಗಳಿಗೆ ನೋಟಿಸ್‌ನಲ್ಲಿ ವಿನಂತಿಸಲಾಗಿದೆ. ಆದಾಗ್ಯೂ, ಜನರ ವೈಯಕ್ತಿಕ ಉಡುಗೆ ಆಯ್ಕೆಯ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಈ ಸೂಚನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸೊಸೈಟಿಯ ಆವರಣದಲ್ಲಿ ಅಡ್ಡಾಡುವಾಗ ಧರಿಸಬೇಕಾದ ಡ್ರೆಸ್ ಕೋಡ್ ಶೀರ್ಷಿಕೆಯೊಂದಿಗೆ ನೋಟಿಸ್ ಅನ್ನು ಗ್ರೇಟರ್ ನೋಯ್ಡಾದ Phi-2 ನಲ್ಲಿರುವ ಹಿಮ್ಸಾಗರ್ ಸೊಸೈಟಿಯ RWA ಹೊರಡಿಸಿದೆ. ಈ ನೋಟಿಸ್ ಪ್ರಕಾರ, ನೀವು ಯಾವುದೇ ಸಮಯದಲ್ಲಿ ಸೊಸೈಟಿ ಆವರಣದಲ್ಲಿ ತಿರುಗಾಡಿದಾಗ, ನಿಮ್ಮ ನಡವಳಿಕೆಯನ್ನು ವಿರೋಧಿಸಲು ಯಾರಿಗಾದರೂ ಯಾವುದೇ ಅವಕಾಶವನ್ನು ನೀಡದಂತೆ ನಿಮ್ಮ ನಡವಳಿಕೆ ಮತ್ತು ಉಡುಗೆ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ನಿಮ್ಮೆಲ್ಲರಿಂದ ನಿರೀಕ್ಷಿಸಲಾಗಿದೆ. ಆದುದರಿಂದ ಎಲ್ಲರೂ ಲುಂಗಿ ಮತ್ತು ನೈಟಿ ಧರಿಸಿ ಮನೆಯಂಗಳದಲ್ಲಿ ಓಡಾಡದಂತೆ ವಿನಂತಿಸಲಾಗಿದೆ.

ಸೊಸೈಟಿ ಕೈಗೊಂಡಿರುವ ಉತ್ತಮ ನಿರ್ಧಾರ ಇದಾಗಿದ್ದು, ಇದನ್ನು ಎಲ್ಲರೂ ಗೌರವಿಸಬೇಕು, ವಿರೋಧಿಸಲು ಏನೂ ಇಲ್ಲ. ಮಹಿಳೆಯರು ನೈಟಿಗಳನ್ನು ಧರಿಸಿ ತಿರುಗಾಡಿದರೆ ಅದು ಪುರುಷರಿಗೆ ಅನಾನುಕೂಲವಾಗಿರುತ್ತದೆ. ಪುರುಷರು ಲುಂಗಿಗಳನ್ನು ಧರಿಸಿದರೆ ಅದು ಮಹಿಳೆಯರಿಗೆ ಅನಾನುಕೂಲವಾಗಿರುತ್ತದೆ, ಆದ್ದರಿಂದ ನಾವು ಪರಸ್ಪರ ಗೌರವಿಸಬೇಕು ಎಂದು ಆರ್‌ಡಬ್ಲ್ಯೂಎ ಅಧ್ಯಕ್ಷ ಸಿಕೆ ಕಲ್ರಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ನೋಟಿಸ್ ನ್ನು ನೋಡಿ ಕೆಲವರು ಈ ಕ್ರಮವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಇದನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ ಚೆನ್ನೈ ಆಸ್ಪತ್ರೆ, ಏಮ್ಸ್‌ಗೆ ಕರೆದೊಯ್ಯುವಂತೆ ಬಿಜೆಪಿ ಒತ್ತಾಯ

ನೈಟಿ ಮತ್ತು ಲುಂಗಿ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವುದು ಸೂಕ್ತವಲ್ಲ, ಇದನ್ನು ಈ ದಿನಗಳಲ್ಲಿ ಹಳೇ ಮನಸ್ಥಿತಿ ಎಂದು ಹೇಳಿದರೂ ಕೆಲವು ಡ್ರೆಸ್ಸಿಂಗ್ ಪ್ರೋಟೋಕಾಲ್ಗಳನ್ನು ಅನುಸರಿಸಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಕ್ಷಮಿಸಿ, ಅವರು ಕಾರ್ಟೂನ್ ಮುದ್ರಿತ ಬಾಕ್ಸರ್ ಶಾರ್ಟ್ಸ್ ಮತ್ತು ಪ್ರಿಂಟ್‌ಗಳಲ್ಲಿ ನೈಟ್ ಸೂಟ್‌ಗಳನ್ನು ನಿಷೇಧಿಸಬೇಕಾಗಿತ್ತು. ಚೆಕ್, ಪ್ರಿಂಟ್ ಇರುವ ಸ್ಪೋರ್ಟ್ಸ್ ಉಡುಗೆಯನ್ನೂ ನಿಷೇಧಿಸಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ