Haryana Shootout: ಗುರುಗ್ರಾಮ್​ನಲ್ಲಿ ಉದ್ಯಮಿ ಬಂಗಲೆ ಮೇಲೆ ಗುಂಡಿನ ಸುರಿಮಳೆ! ಪೊಲೀಸರ ಕೌಂಟರ್​ ಅಟ್ಯಾಕ್​ಗೆ ನಾಲ್ವರು ಬಲಿ

ಗುರುಗ್ರಾಮ್‌ನ ಸುಶಾಂತ್ ಲೋಕ್ ಐಷಾರಾಮಿ ಕಾಲೋನಿಯಲ್ಲಿ ಉದ್ಯಮಿಯೊಬ್ಬರ ನಿವಾಸದ ಮುಂದೆ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವೆ ಭೀಕರ ಎನ್‌ಕೌಂಟರ್ ನಡೆದಿದೆ. ಕೇವಲ 2 ನಿಮಿಷಗಳಲ್ಲಿ 60 ಕ್ಕೂ ಹೆಚ್ಚು ಸುತ್ತು ಗುಂಡಿನ ಚಕಮಕಿ ನಡೆದಿದ್ದು, ವಿದೇಶಿ ಮೂಲದ ದೀಪಕ್ ನಂದಲ್ ಗ್ಯಾಂಗ್‌ನ ನಾಲ್ವರು ಶೂಟರ್‌ಗಳು ಹತರಾಗಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ.

Haryana Shootout: ಗುರುಗ್ರಾಮ್​ನಲ್ಲಿ ಉದ್ಯಮಿ ಬಂಗಲೆ ಮೇಲೆ ಗುಂಡಿನ ಸುರಿಮಳೆ! ಪೊಲೀಸರ ಕೌಂಟರ್​ ಅಟ್ಯಾಕ್​ಗೆ ನಾಲ್ವರು ಬಲಿ
ಶೂಟೌಟ್​ನ ಚಿತ್ರ
Image Credit source: The Hindu

Updated on: Jul 11, 2026 | 1:21 PM

ಮುಖ್ಯಾಂಶಗಳು

  • ಗುರುಗ್ರಾಮ್‌ನ ಐಷಾರಾಮಿ ಸುಶಾಂತ್ ಲೋಕ್ ವಸತಿ ಪ್ರದೇಶದಲ್ಲಿ ಗುಂಡಿನ ಸುರಿಮಳೆ
  • ಕೇವಲ 120 ಸೆಕೆಂಡ್‌ಗಳಲ್ಲಿ 60 ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದ್ದು, 4 ಗ್ಯಾಂಗ್‌ಸ್ಟರ್‌ಗಳ ಹತ್ಯೆ
  • ದೀಪಕ್ ನಂದಲ್ ಎಂಬಾತ ಉದ್ಯಮಿಯ ಕೊಲೆಗೆ ಈ ಹಿಟ್‌ಮೆನ್‌ಗಳನ್ನು ಕಳುಹಿಸಿದ್ದ ಎಂಬ ಮಾಹಿತಿ

ಹರಿಯಾಣ, ಜುಲೈ 11: ರಾಜ್ಯದ ಗುರುಗ್ರಾಮ್‌ನ ಅತ್ಯಂತ ಐಷಾರಾಮಿ ವಸತಿ ಪ್ರದೇಶವಾದ ‘ಸುಶಾಂತ್ ಲೋಕ್’ ಕಾಲೋನಿಯು ಗುರುವಾರ ರಾತ್ರಿ ಭೀಕರ ರಣರಂಗವಾಗಿ ಮಾರ್ಪಟ್ಟಿತ್ತು. ವಿದೇಶದಿಂದ ಆಪರೇಟ್ ಮಾಡುತ್ತಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ್ ನಂದಲ್ ಕಳುಹಿಸಿದ್ದ ಐದು ಜನ ಶೂಟರ್‌ಗಳು ಹಾಗೂ ಹರಿಯಾಣ ಕ್ರೈಂ ಬ್ರಾಂಚ್ ಪೊಲೀಸರ ನಡುವೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ನಾಲ್ವರು ಶೂಟರ್‌ಗಳು ಮೃತಪಟ್ಟಿದ್ದಾರೆ.

ವಿದೇಶದಲ್ಲಿರುವ ದೀಪಕ್ ನಂದಲ್‌ ಕೈವಾಡ

ಗುರುವಾರ ರಾತ್ರಿ ಸುಮಾರು 9.50 ರ ಸುಮಾರಿಗೆ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಶೂಟರ್‌ಗಳು, ತಮಗೆ ಹಣ (Extortion) ನೀಡಲು ನಿರಾಕರಿಸಿದ್ದ ಪ್ರಮುಖ ಉದ್ಯಮಿ ವಿಶಾಲ್ ಬೆರಿ ಅವರ ಬಂಗಲೆಯತ್ತ ಮನಸೋಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ ಶೂಟರ್‌ಗಳ ದಾಳಿಯನ್ನು ರೆಕಾರ್ಡ್ ಮಾಡಿ ವಿದೇಶದಲ್ಲಿರುವ ದೀಪಕ್ ನಂದಲ್‌ಗೆ ಕಳುಹಿಸಲು ಒಬ್ಬಾತ ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಇಂಟೆಲಿಜೆನ್ಸ್ ಇನ್‌ಪುಟ್ ಆಧಾರದ ಮೇಲೆ ಈಗಾಗಲೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದ 30 ಕ್ಕೂ ಹೆಚ್ಚು ಪೊಲೀಸರ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿದೆ.

120 ಸೆಕೆಂಡ್, 60 ಬುಲೆಟ್!

ಪೊಲೀಸರು ಸುತ್ತುವರಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್‌ಸ್ಟರ್‌ಗಳು ಆಟೋಮ್ಯಾಟಿಕ್ ಪಿಸ್ತೂಲ್‌ಗಳಿಂದ ಪೊಲೀಸರ ಮೇಲೆಯೇ ಸತತ 40 ಕ್ಕೂ ಹೆಚ್ಚು ರೌಂಡ್ ಫೈರಿಂಗ್ ನಡೆಸಿದ್ದಾರೆ. ಪ್ರತಿಯಾಗಿ ಪೊಲೀಸರು ಲಾಂಗ್ ರೇಂಜ್ ಗನ್‌ಗಳಿಂದ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಕೇವಲ ಎರಡು ನಿಮಿಷಗಳ ಕಾಲ (120 ಸೆಕೆಂಡ್) ನಡೆದ ಈ ಭೀಕರ ಕಾಳಗದಲ್ಲಿ 60 ಕ್ಕೂ ಹೆಚ್ಚು ಸುತ್ತು ಗುಂಡುಗಳು ಸಿಡಿದ್ದು, ಅಂತಿಮವಾಗಿ ಶೂಟರ್‌ಗಳಾದ ದೀಪಾ (35), ನಿತಿನ್ (22), ಅಂಕಿತ್ (18) ಮತ್ತು 17 ವರ್ಷದ ಅಪ್ರಾಪ್ತ ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಂ ಎಂಬ ಮತ್ತೊಬ್ಬ ಶೂಟರ್ ಗಂಭೀರ ಗಾಯಗೊಂಡಿದ್ದು, ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯೂ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಐದು ಅತ್ಯಾಧುನಿಕ ಪಿಸ್ತೂಲ್ ಮತ್ತು ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಇಡೀ ಪ್ರದೇಶ ಸದ್ಯ ಪೊಲೀಸ್ ಹತೋಟಿಯಲ್ಲಿದೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಗ್ಯಾಂಗ್ ವಾರ್‌ನಿಂದ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us