ಹಂಬ ಹಂಬ, ರಂಬ ರಂಬ, ಕಂಬ ಕಂಬ..! ಮತ್ತೆ ಟ್ರೋಲ್​ ಆದ ಮಮತಾ ಬ್ಯಾನರ್ಜಿ

ರಾಜ್ಯದ ಮೂಲೆ ಮೂಲೆಗೂ ತೆರಳಿ ಮಮತಾ ಬ್ಯಾನರ್ಜಿ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಮುರ್ಷಿದಾಬಾದ್​ನಲ್ಲಿ ಸಾರ್ವಜನಿಕ ಸಮಾವೇಶವನ್ನು ಮಮತಾ ಬ್ಯಾನರ್ಜಿ ಉದ್ಘಾಟನೆ ಮಾಡಿ ಮಾತನಾಡುವಾಗ ಅವರು ಟ್ರೋಲ್​ ಆಗಿದ್ದಾರೆ.

ಹಂಬ ಹಂಬ, ರಂಬ ರಂಬ, ಕಂಬ ಕಂಬ..! ಮತ್ತೆ ಟ್ರೋಲ್​ ಆದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

Updated on: Feb 11, 2021 | 6:55 PM

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವಾಗಲೂ ತಮ್ಮ ವಿಚಿತ್ರ ಘೋಷಣೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ ಕಾಯ್ದೆ ಬಗ್ಗೆ ‘ಸಿಎಎ, ಸಿಎಎ ಛೀ ಛೀ’ ಎಂದು ಹೇಳಿದ್ದ ವಿಡಿಯೋ ಭಾರೀ ವೈರಲ್​ ಆಗಿತ್ತು. ಈಗ ಪಶ್ಚಿಮ ಬಂಗಾಳ ಚುನಾವಣೆ (West Bengal Elections 2021) ಪ್ರಚಾರದಲ್ಲಿರುವ ಮಮತಾ ‘ಹಂಬ ಹಂಬ’ ಎನ್ನುವ ಘೋಷಣೆ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಮಮತಾ ಬ್ಯಾನರ್ಜಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಬಾರಿ ಗೆದ್ದು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕೈಗೆತ್ತಿಕೊಳ್ಳಲು ಹವಣಿಸುತ್ತಿರುವ ಬಿಜೆಪಿಯನ್ನು ತುಳಿಯಲು ಮಮತಾ ಬ್ಯಾನರ್ಜಿ ತುದಿಗಾಲಿನಲ್ಲಿದ್ದಾರೆ. ಹೀಗಾಗಿ, ರಾಜ್ಯದ ಮೂಲೆ ಮೂಲೆಗೂ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಮುರ್ಷಿದಾಬಾದ್​ನಲ್ಲಿ ಸಾರ್ವಜನಿಕ ಸಮಾವೇಶವನ್ನು ಮಮತಾ ಬ್ಯಾನರ್ಜಿ ಉದ್ಘಾಟನೆ ಮಾಡಿ ಮಾತನಾಡಿದ್ದಾರೆ.

ಈ ವೇಳೆ, ತುಂಟ ಹಸುಗಳು ನಮ್ಮ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿವೆ. ಈಗ ಅವರು ಹಂಬ ಹಂಬ, ರಂಬ ರಂಬ, ಕಂಬ ಕಂಬ, ಡುಂಬ ಡುಂಬ, ಬೊಂಬ ಬೊಂಬ ಎಂದು ಶಬ್ದ ಮಾಡುತ್ತಿವೆ. ಅವರು ನಮ್ಮ ಪಕ್ಷವನ್ನು ಬೇಗ ಬಿಟ್ಟಿದ್ದು ಒಳ್ಳೆಯದೇ ಆಯಿತು ಎಂದಿದ್ದಾರೆ. ಹಸುಗಳು ಹಂಬ ಹಂಬ ಎಂದು ಶಬ್ದ ಮಾಡುತ್ತವೆ ಎಂಬರ್ಥದಲ್ಲಿ ಈ ಮಾತನ್ನು ಮಮತಾ ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಅನೇಕ ಟ್ರೋಲ್​ಗಳು ಈ ವಿಡಿಯೋ ಕ್ಲಿಪ್​ ಬಗ್ಗೆ ಹರಿದಾಡಿವೆ. ಆ ಕುರಿತ ಕೆಲ ಟ್ರೋಲ್​ಗಳು ಇಲ್ಲಿವೆ.

 

ಇದನ್ನೂ ಓದಿ: ಚುನಾವಣೆ ಮುಗಿಯುವ ಮುನ್ನ ಮಮತಾ ಬ್ಯಾನರ್ಜಿ ಜೈ ಶ್ರೀರಾಮ್ ಘೋಷಣೆ ಕೂಗಲಿದ್ದಾರೆ: ಅಮಿತ್ ಶಾ