‘ದೋ ಹಜಾರ್ ಬೀಸ್-ಹಠಾವೋ ನಿತೀಶ್’ ಜೈಲಿಂದಲೇ ಲಾಲು ಪ್ರಸಾದ್ ಟ್ವೀಟ್

|

Updated on: Dec 11, 2020 | 2:32 PM

ದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಇದೇ ವರ್ಷದ ನಡೆಯಲಿದೆ. ಹೊಸ ವರ್ಷದ ಆರಂಭದಲ್ಲೇ ಆರ್ ಜೆಡಿ ಚುನಾವಣಾ ಮೂಡ್​ಗೆ ಇಳಿದಿದೆ. ಜೈಲಿನಿಂದಲೇ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಚುನಾವಣ ಮಂತ್ರ ಪಟಿಸಿದ್ದಾರೆ. “ದೋ ಹಜಾರ್ ಬೀಸ್ ಹಠವೋ ನಿತೀಶ್” ಅಂತಾ ಟ್ವೀಟ್ ಮಾಡಿ ರಣರಂಗ ಸಿದ್ದಮಾಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಆಡಳಿತದಲ್ಲಿದ್ದ ಒಂದೊಂದೇ ರಾಜ್ಯಗಳನ್ನ ಕೇಸಿ ಪಡೆ ಕಳೆದುಕೊಳ್ತಿದೆ. ಇತ್ತ ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯನ್ನ ಎದುರಿಸುವ ತಂತ್ರ ಮಾಡ್ತಿವೆ. ಇದೇ ವರ್ಷ ರಾಷ್ಟ್ರರಾಜಧಾನಿ ದೆಹಲಿ […]

‘ದೋ ಹಜಾರ್ ಬೀಸ್-ಹಠಾವೋ ನಿತೀಶ್’  ಜೈಲಿಂದಲೇ ಲಾಲು ಪ್ರಸಾದ್ ಟ್ವೀಟ್
ಲಾಲು ಪ್ರಸಾದ್​ ಯಾದವ್
Follow us on

ದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಇದೇ ವರ್ಷದ ನಡೆಯಲಿದೆ. ಹೊಸ ವರ್ಷದ ಆರಂಭದಲ್ಲೇ ಆರ್ ಜೆಡಿ ಚುನಾವಣಾ ಮೂಡ್​ಗೆ ಇಳಿದಿದೆ. ಜೈಲಿನಿಂದಲೇ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಚುನಾವಣ ಮಂತ್ರ ಪಟಿಸಿದ್ದಾರೆ. “ದೋ ಹಜಾರ್ ಬೀಸ್ ಹಠವೋ ನಿತೀಶ್” ಅಂತಾ ಟ್ವೀಟ್ ಮಾಡಿ ರಣರಂಗ ಸಿದ್ದಮಾಡಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಆಡಳಿತದಲ್ಲಿದ್ದ ಒಂದೊಂದೇ ರಾಜ್ಯಗಳನ್ನ ಕೇಸಿ ಪಡೆ ಕಳೆದುಕೊಳ್ತಿದೆ. ಇತ್ತ ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯನ್ನ ಎದುರಿಸುವ ತಂತ್ರ ಮಾಡ್ತಿವೆ. ಇದೇ ವರ್ಷ ರಾಷ್ಟ್ರರಾಜಧಾನಿ ದೆಹಲಿ ಮತ್ತು ಬಿಹಾರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ರಣಕಣಕ್ಕೆ ಎಂಟ್ರಿಯಾಗ್ತಿವೆ.

ಬಿಹಾರದಲ್ಲಿ ಬಿಜೆಪಿ, ಜೆಡಿಯು ದೋಸ್ತಿ ವಿರುದ್ಧ ಕಾಂಗ್ರೆಸ್ ಆರ್ ಜೆಡಿ ಮೈತ್ರಿಯಾಗಿ ಚುನಾವಣೆ ಎದುರಿಸಲಿವೆ. ಚುನಾವಣೆ ಘೋಷಣೆಯಾಗುವ ಮೊದಲೇ ಚುನಾವಣಾ ಅಖಾಡಕ್ಕೆ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಇಳಿದಿದೆ. ಈಗಿನಿಂದ ಚುನಾವಣಾ ಅಜೆಂಡಾವನ್ನು ಸೆಟ್ ಮಾಡ್ತಿವೆ. ಮೇವು ಹಗರಣದಲ್ಲಿ ಜೈಲು ಸೇರಿರುವ ಲಾಲು ಪ್ರಸಾದ್ ಯಾದವ್ ಜೈಲಲ್ಲೇ ಕುಳಿತು ಬಿಹಾರದ ಎಲೆಕ್ಷನ್ ಸ್ಲೋಗನ್ ರೆಡಿ ಮಾಡಿದ್ದಾರೆ. ಬಿಜೆಪಿ, ಜೆಡಿಯು ಮೈತ್ರಿ ನಾಯಕ ಸಿಎಂ ನಿತೀಶ್ ಕುಮಾರ್ ವಿರುದ್ಧ ಸ್ಲೋಗನ್ ರೆಡಿ ಮಾಡಿ ತಮ್ಮ ಆರ್ಜೆಡಿ ಕಾರ್ಯಕರ್ತರಿಗೆ ಹೋರಾಟಕ್ಕೆ ಅಣಿಯಾಗುವಂತೆ ಕರೆ ನೀಡಿದ್ದಾರೆ.

ಜೈಲಲ್ಲೇ ಲಾಲು ಪ್ರಸಾದ್ ಯಾದವ್ ಟ್ವೀಟ್ ಮಾಡಿ ನಿತೀಶ್ ಕುಮಾರ್ ವಿರುದ್ಧ ಎರಡು ಸಾಲುಗಳನ್ನು ಬರೆದಿದ್ದಾರೆ. “ದೋ ಹಝಾರ್ ಬೀಸ್ ಹಠಾವೋ ನಿತೀಶ್ ” ಎಂದು ಕರೆ ನೀಡಿದ್ದಾರೆ. ಲಾಲು ಪ್ರಸಾದ್ ಈ ಒಂದು ಟ್ವೀಟ್ ಬಿಹಾರ್ ನಲ್ಲಿ ಸಂಚಲನ ಮೂಡಿಸಿದ್ದು, ಅಧಿಕಾರ ಕಳೆದುಕೊಂಡಿರುವ ಆರ್ ಜೆಡಿ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ಆರ್ ಜೆಡಿ ಬೆಂಬಲದೊಂದಿಗೆ ಜೆಡಿಯುನ ನಿತೀಶ್ ಸಿಎಂ ಆಗಿದ್ರು. ಬಳಿಕ ಆರ್ ಜೆಡಿ ಜೊತೆ ಮೈತ್ರಿ ಕಡಿದುಕೊಂಡು ನಿತೀಶ್ ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗಿದ್ದಾರೆ. ಮೈತ್ರಿಗೆ ದ್ರೋಹ ಎಸಗಿದ್ದಾರೆ ಎಂಬ ಅಸ್ತ್ರದೊಂದಿಗೆ ಆರ್ ಜೆಡಿ ಚುನಾವಣೆ ಅಣಿಯಾಗ್ತಿದೆ.

ಬಿಹಾರದಲ್ಲಿ ಪ್ರತಿ ಎಲೆಕ್ಷನ್​ನಲ್ಲೂ ಒಂದಲ್ಲ ಒಂದು ಹೆಳಿಕೆಗಳು ಸಂಚಲನ ಮೂಡಿಸುತ್ತವೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ನಿತೀಶ್ ಕುಮಾರ್ ಡಿಎನ್​ಎ ಬಗ್ಗೆ ಮಾತನಾಡಿದ್ರು. ಇದನ್ನೇ ಅಸ್ತ್ರವನ್ನಾಗಿದ್ದ ಆರ್ ಜೆ ಡಿ – ಜೆಡಿಯು ಮೈತ್ರಿ ಬಿಜೆಪಿಗೆ ಮಣ್ಣು ಮುಕ್ಕಿಸಿದ್ವು. ಈ ಬಾರಿ ಮಾತ್ರ ಹಳೆ ಗೆಳೆಯ ನಿತೀಶ್ ಕುಮಾರ್ ರನ್ನು ಸೋಲಿಸಲು ಜೈಲಿನಿಂದಲೇ ಲಾಲು ಪ್ರಸಾದ್ ಯಾದವ್ ಸ್ಲೋಗನ್ ರೆಡಿ ಮಾಡಿ ಕಾರ್ಯಕರ್ತರಿಗೆ ಹುರಿದುಂಬಿಸಿದ್ದಾರೆ.

Published On - 10:12 am, Sun, 5 January 20