ಎಚ್​ಡಿಎಫ್​ಸಿ ನೆಟ್, ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ; ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ ಗ್ರಾಹಕರು

|

Updated on: Mar 30, 2021 | 6:59 PM

ಇಂದು ಕೂಡ ಎಚ್​​ಡಿಎಫ್​ಸಿ ಬ್ಯಾಂಕ್​ ಗ್ರಾಹಕರು ತುಂಬ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇದು ಹಣಕಾಸು ವರ್ಷದ ಅಂತ್ಯ. ಈಗಲೇ ನೆಟ್​ ಬ್ಯಾಂಕಿಂಗ್​ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕೈಕೊಟ್ಟಿವೆ. ವ್ಯವಹಾರಕ್ಕೆ ತುಂಬ ತೊಡಕಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.

ಎಚ್​ಡಿಎಫ್​ಸಿ ನೆಟ್, ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ; ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ ಗ್ರಾಹಕರು
HDFC ಬ್ಯಾಂಕ್ 18 ವರ್ಷದೊಳಗಿನ ಯಾವುದೇ ಮಕ್ಕಳಿಗಾಗಿ ಕಿಡ್ಸ್ ಅಡ್ವಾಂಟೇಜ್ ಅಕೌಂಟ್ ತೆರೆಯಬಹುದು. ಆದರೆ ಪಾಲಕರು ಅಥವಾ ಪೋಷಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಈ ಉಳಿತಾಯ ಖಾತೆಯು ರೂ. 5,000 ಕನಿಷ್ಠ ಬ್ಯಾಲೆನ್ಸ್ ಮಾನದಂಡದೊಂದಿಗೆ ಬರುತ್ತದೆ ಮತ್ತು ಅದನ್ನು ನಿರ್ವಹಿಸಬೇಕು. ಪಾಲಕರು ಅಥವಾ ಪೋಷಕರ ಸಾವಿನ ಸಂದರ್ಭದಲ್ಲಿ ಈ ಖಾತೆ ಮೂಲಕವಾಗಿ ಮಗುವಿಗೆ 1 ಲಕ್ಷ ರೂಪಾಯಿಗಳ ಉಚಿತ ಶಿಕ್ಷಣ ವಿಮಾ ರಕ್ಷಣೆ ಇದೆ. ಮನಿಮ್ಯಾಕ್ಸಿಮೈಸರ್ ಸೌಲಭ್ಯವೂ ಇದೆ. ಇದರಲ್ಲಿ ಮಗುವಿನ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ರೂ. 35,000 ಮೀರಿದರೆ ರೂ. 25,000 ಮೀರಿದ ಮೊತ್ತವು ಮಗುವಿನ ಹೆಸರಿನಲ್ಲಿ 1 ವರ್ಷ 1 ದಿನದ ಫಿಕ್ಸೆಡ್​ ಡೆಪಾಸಿಟ್​ ಆಗಿ ತಾನೇ ತಾನಾಗಿ ವರ್ಗಾವಣೆಯಾಗುತ್ತದೆ. 7 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಬ್ಯಾಂಕಿನಿಂದ ಎಟಿಎಂ, ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಗುವು ಎಟಿಎಮ್‌ಗಳಲ್ಲಿ ರೂ. 2,500ವರೆಗೂ ಹಣವನ್ನು ಹಿಂಪಡೆಯಬಹುದು ಮತ್ತು ದಿನಕ್ಕೆ ರೂ. 10,000 ವ್ಯಾಪಾರ- ವಹಿವಾಟಿನ ಸ್ಥಳಗಳಲ್ಲಿ ಖರ್ಚು ಮಾಡಬಹುದು. ಆದರೆ ಇದಕ್ಕೆ ಪೋಷಕರ ಅನುಮತಿಯು ಬ್ಯಾಂಕ್‌ಗೆ ಬೇಕಾಗುತ್ತದೆ.
Follow us on

ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್​ಡಿಎಫ್​ಸಿ ಬ್ಯಾಂಕ್​ನ ನೆಟ್​ ಬ್ಯಾಂಕಿಂಗ್​ ಮತ್ತು ಮೊಬೈಲ್ ಬ್ಯಾಂಕಿಂಗ್​ ಸೇವೆಯಲ್ಲಿ ಮಂಗಳವಾರ ವ್ಯತ್ಯಯವಾಗಿದೆ. ಈ ಬಗ್ಗೆ ಎಚ್​ಡಿಎಫ್​ಸಿ ಬ್ಯಾಂಕ್ ಟ್ವೀಟ್ ಮಾಡಿ, ನಮ್ಮ ಹಲವು ಗ್ರಾಹಕರಿಗೆ ಇಂದು ನೆಟ್​ ಬ್ಯಾಂಕ್​ ಮತ್ತು ಮೊಬೈಲ್ ಬ್ಯಾಂಕಿಂಗ್​ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಆ್ಯಪ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ನಮಗೆ ರಿಪೋರ್ಟ್ ಮಾಡಿದ್ದು, ನಾವು ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಅನನುಕೂಲತೆಗಾಗಿ ಕ್ಷಮೆ ಕೇಳುತ್ತೇವೆ ಎಂದೂ ಹೇಳಿಕೊಂಡಿದೆ.

ಎಚ್​ಡಿಎಫ್​ಸಿ ಹಲವು ಗ್ರಾಹಕರಿಗೆ ಇಂದು ನೆಟ್​ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್​ ಸೇವೆಯಲ್ಲಿ ಸಮಸ್ಯೆಯಾಗಿದ್ದು, ಟ್ವಿಟರ್​, ಸೋಷಿಯಲ್ ಮೀಡಿಯಾಗಳ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಎಚ್​ಡಿಎಫ್​ಸಿ ಆ್ಯಪ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ನೆಟ್​ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಡಿಸೆಂಬರ್​ನಲ್ಲಿ ಕೂಡ ಪದೇಪದೆ ಹೀಗೆ ಆಗುತ್ತಿತ್ತು. ಆಗ ಎಲ್ಲ ಡಿಜಿಟಲ್​ ಲಾಂಚ್​ಗಳನ್ನೂ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆರ್​ಬಿಐ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಹೇಳಿತ್ತು.

ಇಂದು ಕೂಡ ಎಚ್​​ಡಿಎಫ್​ಸಿ ಬ್ಯಾಂಕ್​ ಗ್ರಾಹಕರು ತುಂಬ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇದು ಹಣಕಾಸು ವರ್ಷದ ಅಂತ್ಯ. ಈಗಲೇ ನೆಟ್​ ಬ್ಯಾಂಕಿಂಗ್​ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕೈಕೊಟ್ಟಿವೆ. ವ್ಯವಹಾರಕ್ಕೆ ತುಂಬ ತೊಡಕಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ಎಚ್​ಡಿಎಫ್​ಸಿ ಬ್ಯಾಂಕ್​ನ ಡಿಜಿಟಲ್ ಸೇವೆಗಳು ಸಂಪೂರ್ಣವಾಗಿ ಸರಿ ಹೋಗುವುದಾದರೂ ಯಾವಾಗ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: PM Modi in Tamil Nadu: ವಿಧಾನಸಭೆಯಲ್ಲಿ ಡಿಎಂಕೆ ನಾಯಕರು ಜಯಲಲಿತಾ ಜತೆ ವರ್ತಿಸಿದ್ದನ್ನು ಮರೆಯಬಾರದು: ನರೇಂದ್ರ ಮೋದಿ

ಬೆಳಗಾವಿಯಲ್ಲೇ ವಾಸ್ತವ್ಯ ಹೂಡಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸದಲ್ಲಿ ದಿಢೀರ್ ಬದಲಾವಣೆ