ನಾ ಖಾವೂಂಗಾ,ನಾ ಖಾನೇ ದೂಂಗಾ ಎಂದು ಮೋದಿ ಹೇಳಿದ್ದು ಬೀಫ್ ಬಗ್ಗೆ ಆಗಿರಬೇಕು: ಶಶಿ ತರೂರ್ ಟ್ವೀಟ್

|

Updated on: Feb 28, 2023 | 9:21 PM

'ನಾ ಖಾವೂಂಗಾ ನಾ ಖಾನೇ ದೂಂಗಾ ಎಂದು ಅವರು ಹೇಳಿದ್ದು ಬೀಫ್ ಬಗ್ಗೆ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಭ್ರಷ್ಟಾಚಾರ ವಿರೋಧಿ ಘೋಷಣೆಯನ್ನು ಉಲ್ಲೇಖಿಸಿ ತರೂರ್ ಕುಟುಕಿದ್ದಾರೆ.

ನಾ ಖಾವೂಂಗಾ,ನಾ ಖಾನೇ ದೂಂಗಾ ಎಂದು ಮೋದಿ ಹೇಳಿದ್ದು ಬೀಫ್ ಬಗ್ಗೆ ಆಗಿರಬೇಕು: ಶಶಿ ತರೂರ್ ಟ್ವೀಟ್
ಶಶಿ ತರೂರ್
Follow us on

ದೆಹಲಿ: ಭ್ರಷ್ಟಾಚಾರದ ಆರೋಪವಿದ್ದರೂ ಬಿಜೆಪಿಗೆ ಸೇರ್ಪಡೆ ಆದ ನಂತರ ತನಿಖೆಯನ್ನು ನಿಲ್ಲಿಸಿದ ನಾಯಕರ ಪಟ್ಟಿಯನ್ನು ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ (Shashi Tharoor) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ನಾ ಖಾವೂಂಗಾ,ನಾ ಖಾನೇ ದೂಂಗಾ (ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂಬುದು ಪದದ ಅರ್ಥ) ಎಂದಿದ್ದು ಬೀಫ್ (Beef) ಬಗ್ಗೆಯಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ಬಂಧಿಸಿ ನಂತರ ವಿಶೇಷ ನ್ಯಾಯಾಲಯವು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಿದ ಒಂದು ದಿನದ ನಂತರ ತರೂರ್ ಈ ರೀತಿ ವಾಗ್ದಾಳಿ ಮಾಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸುವೇಂದು ಅಧಿಕಾರಿ, ಭಾವನಾ ಗಾವ್ಲಿ, ಯಶವಂತ್ ಜಾಧವ್, ಯಾಮಿನಿ ಜಾಧವ್, ಪ್ರತಾಪ್ ಸರ್ನಾಯಕ್ ಮತ್ತು ನಾರಾಯಣ್ ರಾಣೆ ಎಂಬ ಎಂಟು ನಾಯಕರ ಪಟ್ಟಿಯನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ನಾಯಕರು ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳಿಗೆ ಸೇರಿದವರು.


ತರೂರ್ ಅವರು ಹಂಚಿಕೊಂಡ ಪಟ್ಟಿಯ ಸ್ಕ್ರೀನ್‌ಶಾಟ್ ನಲ್ಲಿ ಬಿಜೆಪಿಯನ್ನು ಬೆಂಬಲಿಸಿ ಪಕ್ಷವನ್ನು ಬದಲಾಯಿಸಿದ ನಂತರ ಈ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಗಳು ಸ್ಥಗಿತಗೊಂಡಿವೆ ಎಂದು ಹೇಳಿದೆ.

ಇದನ್ನೂ ಓದಿ: ಮನೀಶ್ ಸಿಸೋಡಿಯಾ ನಿರ್ವಹಿಸಿದ್ದ 18 ಇಲಾಖೆಗಳ ಜವಾಬ್ದಾರಿಯನ್ನು ಇಬ್ಬರು ಸಚಿವರಿಗೆ ಹಂಚಿದ ಕೇಜ್ರಿವಾಲ್

ಇದನ್ನು ವ್ಯಾಪಕವಾಗಿ ಶೇರ್ ಮಾಡಲಾಗಿದ್ದು, ನಾನೂ ಕೂಡಾ ಇದನ್ನು ಹಂಚಿಕೊಳ್ಳುತ್ತಿದ್ದೇನೆ.. ‘ನಾ ಖಾವೂಂಗಾ ನಾ ಖಾನೇ ದೂಂಗಾ ಎಂದು ಅವರು ಹೇಳಿದ್ದು ಬೀಫ್ ಬಗ್ಗೆ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಭ್ರಷ್ಟಾಚಾರ ವಿರೋಧಿ ಘೋಷಣೆಯನ್ನು ಉಲ್ಲೇಖಿಸಿ ತರೂರ್ ಕುಟುಕಿದ್ದಾರೆ.

2021-22ರ ಈಗ ರದ್ದಾದ ಅಬಕಾರಿ ನೀತಿಯ ವಿವಿಧ ಅಂಶಗಳ ಕುರಿತು ಸುಮಾರು ಎಂಟು ಗಂಟೆಗಳ ವಿಚಾರಣೆಯ ನಂತರ ಸಿಸೋಡಿಯಾ ಅವರನ್ನು ಭಾನುವಾರ ಸಂಜೆ ಸಿಬಿಐ ಬಂಧಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Tue, 28 February 23