ಶಿಮ್ಲಾ: ಹಿಂದಿ ನಟ ಆಸಿಫ್ ಬಸ್ರಾರ ಮೃತದೇಹ ಇಂದು ನೇಣುಬಿಗಿದ ಸ್ಥಿತಿಯಲ್ಲಿ ಹಿಮಾಚಲ ಪ್ರದೇಶದ ಧರಮ್ಶಾಲಾದ ಖಾಸಗಿ ಕಟ್ಟದವೊಂದರಲ್ಲಿ ಪತ್ತೆಯಾಗಿದೆ. ಆಸಿಫ್ ಬಸ್ರಾ ಹಲವು ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದರು.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಫೊರೆನ್ಸಿಕ್ ತಂಡದವರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಹಿಂದಿ ಸಿನಿ ಹಾಗೂ ಕಿರುತೆರೆಯ ಕೆಲವು ನಟ ನಟಿಯರು ಈ ಹಿಂದೆ ಲಾಕ್ಡೌನ್ ತಂದೊಡ್ಡಿದ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಆಸಿಫ್ ಸಾವಿನ ಹಿಂದಿನ ಕಾರಣ ಸದ್ಯ ತಿಳಿದುಬಂದಿಲ್ಲ.
Published On - 6:23 pm, Thu, 12 November 20