ಕಪ್ಪಗಿನ ಆಕಾಶ.. ಆ ಆಕಾಶದ ತುಂಬೆಲ್ಲಾ ಹೊಳೆಯುವ ನಕ್ಷತ್ರಗಳ ರಾಶಿ. ಒಂದಷ್ಟು ಗಮವಿಟ್ಟು ನೋಡಿದ್ರೆ ಅಲ್ಲೂ ನಮಗೆ ಬಣ್ಣಗಳು ಕಣ್ಣು ಕುಕ್ಕುತ್ತವೆ. ಅಷ್ಟಕ್ಕೂ ಬಾಹ್ಯಾಕಾಶ ವೀಕ್ಷಣೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಇದೊಂದು ಕೌತುಕದ ವಿಚಾರ. ಬಾಹ್ಯಾಕಾಶ ವೀಕ್ಷಣೆಗಾಗಿ ಬದುಕನ್ನೇ ಮುಡಿಪಿಟ್ಟ ಸಾಧಕರು ನಮ್ಮ ನಡುವೆ ಇದ್ದಾರೆ. ಇಂತಹ ಸಾಧಕರು ತೀವ್ರ ಕುತೂಹಲದಿಂದ ಕಾಯುತ್ತಿರುವ ‘ಸಹಸ್ರಮಾನದ ಘಟನೆ’ಗೆ ಕ್ಷಣಗಣನೆ ಆರಂಭವಾಗಿದೆ.
ಬಾಹ್ಯಾಕಾಶದಲ್ಲಿ ಬ್ಲಾಸ್ಟ್ ಆಗುತ್ತಾ ಪ್ರಕಾಶಮಾನವಾದ ನಕ್ಷತ್ರ?
ಅಬ್ಬಬ್ಬಾ.. ಹೊಳೆಯುವ ನಕ್ಷತ್ರಗಳನ್ನ ರಾತ್ರಿಯ ಕಗ್ಗತ್ತಲಲ್ಲಿ ಕಣ್ತುಂಬಿಕೊಳ್ಳುವುದೇ ಕೌತುಕ. ಅಲ್ಲಲ್ಲಿ ಬೀಳುವ ಧೂಮಕೇತುಗಳು, ಕ್ಷುದ್ರಗ್ರಹಗಳು ಈ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ದೊಡ್ಡವರೇ ಇರಬಹುದು, ಪುಟಾಣಿಗಳೇ ಇರಬಹುದು. ಬಾಹ್ಯಾಕಾಶ ಅನ್ನೋದು ತೀವ್ರ ಕುತೂಹಲ ಸೃಷ್ಟಿಸಿರುವ ವಸ್ತು. ಇದೀಗ ಈ ಕುತೂಹಲ ಇಮ್ಮಡಿಗೊಳಿಸುವಂತಹ ಘಟನೆಗೆ ಬಾಹ್ಯಾಕಾಶ ಸಾಕ್ಷಿಯಾಗುತ್ತಿದೆ. ಕಳೆದ 1 ಸಾವಿರ ವರ್ಷದಲ್ಲಿ ಒಮ್ಮೆ ಮಾತ್ರವೇ ನಡೆದಿರುವ ಸೂಪರ್ನೋವಾ ಸ್ಫೋಟದಂತಹ ಘಟನೆ ಮತ್ತೊಮ್ಮೆ ಬಾಹ್ಯಾಕಾಶದಲ್ಲಿ ಸಂಭವಿಸಲಿದೆ.
ಸೂರ್ಯನಿಗಿಂತ ಸಾವಿರ ಪಟ್ಟು ದೊಡ್ಡದಿರುವ ನಕ್ಷತ್ರದಿಂದ ಸಂಕಷ್ಟ?
ಅದು ಹೈಸ್ಕೂಲ್ ಪಾಠವೇ ಇರಬಹುದು, ಇಲ್ಲ ಪ್ಲಾನಿಟೋರಿಯಂ ಷೋಗಳೇ ಇರಬಹುದು. ಬೀಟಲ್ಗೀಸ್ ಎಂಬ ಪ್ರಕಾಶಮಾನವಾದ ನಕ್ಷತ್ರದ ಬಗ್ಗೆ ಮಾತನಾಡದೆ ಚರ್ಚೆ ಪೂರ್ಣವಾಗೋದೇ ಇಲ್ಲ. ಅಷ್ಟು ಹೆಸರುವಾಸಿ ಈ ಕೆಂಪು ದೈತ್ಯ. ಭೂಮಿಯ ನಿವಾಸಿಗಳಿಗೆ ಬೀಟಲ್ಗೀಸ್ ಸಾವಿರಾರು ವರ್ಷಗಳಿಂದಲೂ ತಿಳಿದಿರುವ ನಕ್ಷತ್ರ. ರಾತ್ರಿಯ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗುವ ಈ ನಕ್ಷತ್ರ, ವಿಜ್ಞಾನಿಗಳನ್ನ ಮಾತ್ರವಲ್ಲ. ಇಡೀ ಮನುಕುಲವನ್ನೇ ಕುತೂಹಲದ ಕೂಪಕ್ಕೆ ತಳ್ಳಿಬಿಡುತ್ತದೆ.
ಇಷ್ಟೆಲ್ಲಾ ವಿಶೇಷತೆ ಹೊಂದಿರುವ ನಕ್ಷತ್ರ ಇದೀಗ ಸ್ಫೋಟಗೊಳ್ಳುತ್ತದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಯಾಕಂದ್ರೆ ಕೆಲತಿಂಗಳಿಂದ ತೀವ್ರ ಪ್ರಮಾಣದಲ್ಲಿ ತನ್ನ ಪ್ರಕಾಶತೆಯನ್ನ ಕಳೆದುಕೊಳ್ತಿರೋ ಬೀಟಲ್ಗೀಸ್, ಮಂದವಾಗುತ್ತಾ ಸಾಗಿ ಕೆಂಡದಂಥ ಸ್ಥಿತಿಗೆ ತಲುಪಿದೆ. ಇದು ಸ್ಫೋಟವಾಗುವ ಮುನ್ಸೂಚನೆ ನೀಡ್ತಿದೆ.
ಸೂರ್ಯನ ಹೊರತು ಹಗಲಿನಲ್ಲೂ ನಕ್ಷತ್ರ ದರ್ಶನ?
ಅಂದಹಾಗೆ ನಮಗೆಲ್ಲಾ ತಿಳಿದಿರುವಂತೆ ಸೂರ್ಯನೂ ಒಂದು ನಕ್ಷತ್ರ. ಸೌರವ್ಯೂಹದ ಬಾಸ್ ಸೂರ್ಯನನ್ನು ಕೆಂಪು ನಕ್ಷತ್ರ ಅಂತಾ ಕರೆಯಲಾಗುತ್ತದೆ. ಆದ್ರೆ ಸೂರ್ಯನಿಗಿಂತ 1 ಸಾವಿರ ಪಟ್ಟು ದೊಡ್ಡದಾಗಿರುವ ಬೀಟಲ್ಗೀಸ್ ನಕ್ಷತ್ರವನ್ನ ‘ಕೆಂಪುದೈತ್ಯ’ ಎನ್ನಲಾಗುತ್ತದೆ. ಅಕಸ್ಮಾತ್ ಈ ನಕ್ಷತ್ರ ಸ್ಫೋಟಗೊಂಡರೆ ಇದುವರೆಗೂ ಬಾಹ್ಯಾಕಾಶದಲ್ಲಿ ಕಾಣಸಿಗದಷ್ಟು ಬೆಳಕು ಸ್ಫೋಟಗಳ್ಳುತ್ತದೆ. ಭೂಮಿಯ ಒಂದು ಭಾಗ ಹಗಲಿನಲ್ಲಿ ಇದ್ದರೂ ಅಲ್ಲೂ ಕೂಡ ಮತ್ತೊಂದು ನಕ್ಷತ್ರದ ದರ್ಶನವಾಗಲಿದೆ.
‘ಸೂಪರ್ನೋವಾ’ ಸೃಷ್ಟಿಯಾದರೆ ಭೂಮಿಗೆ ಆಪತ್ತು ಗ್ಯಾರಂಟಿ?
ಸೂರ್ಯನಿಗಿಂತ ಬೀಟಲ್ಗೀಸ್ ಸ್ಫೋಟ ಪ್ರಕಾಶಮಾನವಾಗಿ ಗೋಚರವಾಗಲಿದೆ. ಈ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ ವಿಕಿರಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಸುಮಾರು 642 ಜೋತಿರ್ವರ್ಷ ದೂರದಲ್ಲಿರುವ ಬೀಟಲ್ಗೀಸ್, ತನ್ನ ಶಕ್ತಿಯಿಂದ ಭೂಮಿಗೆ ಆಪತ್ತು ತರುವ ಸಾಧ್ಯತೆ ದಟ್ಟವಾಗಿದೆ. ವಿಜ್ಞಾನಿಗಳಲ್ಲಿ ಇದು ಭಾರಿ ಆತಂಕಕ್ಕೆ ಕಾರಣವಾಗುವ ಜೊತೆ ಜೊತೆಗೆ, ಕುತೂಹಲವನ್ನೂ ಸೃಷ್ಟಿಮಾಡಿದೆ.
ಒಟ್ನಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಬಾಹ್ಯಾಕಾಶ ಒಂದು ಕುತೂಹಲದ ವಸ್ತುವಾಗಿರಲೇಬೇಕು. ಹುಟ್ಟಿನಿಂದ ಆರಂಭವಾಗಿ, ಅಂತ್ಯದವರೆಗೂ ನಮಗೆ ಬಾಹ್ಯಾಕಾಶ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಜ್ಞಾನ ನೀಡುತ್ತಾ ಬಂದಿದೆ. ಅದರಲ್ಲೂ ಸೂಪರ್ನೋವಾದಂತಹ ಘಟನೆ ನಮ್ಮೆಲ್ಲರ ಜೀವಿತಾವಧಿಯಲ್ಲಿ ಸಂಭವಿಸಿದ್ರೆ, ಅದಕ್ಕಿಂತಲೂ ದೊಡ್ಡ ಭಾಗ್ಯ ಮತ್ತೊಂದಿಲ್ಲ.