ಏನೇನೋ ಹೇಳಿಕೆಗಳನ್ನು ನೀಡಿ, ಮಾಡಬಾರದ ಕೆಲಸ ಮಾಡಿ ವಿವಾದ ಸೃಷ್ಟಿಸುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಿಜೆಪಿ ಶಾಸಕ ಹಾಡು ಹಾಡಿ ವಿವಾದ ಹುಟ್ಟುಹಾಕಿದ್ದಾರೆ. ನಿನ್ನೆ ಹೈದರಾಬಾದ್ನಲ್ಲಿ ರಾಮನವಮಿ ಪ್ರಯುಕ್ತ ನಡೆಸಿದ್ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಗೋಶಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು, Jo ram ka naam na le unko bharat se bhagana Hai (ಶ್ರೀರಾಮನ ಹೆಸರನ್ನು ಹೇಳದೆ ಇರುವವರನ್ನು ದೇಶದಿಂದ ಓಡಿಸಬೇಕು, ಈ ದೇಶದಲ್ಲಿ ಇರಲು ಯೋಗ್ಯರಲ್ಲ) ಎಂಬ ಹಾಡೊಂದನ್ನು ಹಾಡಿದ್ದಾರೆ. ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಲ್ಡೋಜರ್ ಮೂಲಕ ಕಾಶಿ ಮತ್ತು ಮಥುರಾವನ್ನು ಸ್ವಚ್ಛಗೊಳಿಸುತ್ತಾರೆ. ಭಾರತ ಕೆಲವೇ ವರ್ಷಗಳಲ್ಲಿ ಹಿಂದೂ ರಾಷ್ಟ್ರವಾಗಲಿದೆ’ ಎಂಬ ಸಾಲುಗಳನ್ನೂ ಈ ಹಾಡು ಒಳಗೊಂಡಿದೆ.
BJP MLA Raja Singh sings the song “Jo ram ka naam na le unko bharat se bhagana Hai” at #RamNavami Rally in Hydrabad.@hydcitypolice should take immediate action on this.@asadowaisi @KTRTRSpic.twitter.com/wGEEa7FHEg
— Naved Sheikh (@navedns1) April 10, 2022
ಕಾಶಿ ಮತ್ತು ಮಥುರಾದಲ್ಲಿ ಹಿಂದೂ ದೇಗುಲ ಮತ್ತು ಮಸೀದಿ ವಿವಾದ ಎದ್ದಿರುವುದು ಗೊತ್ತೇ ಇದೆ. ಅಯೋಧ್ಯೆಯಲ್ಲಿ ಇದ್ದ ವಿವಾದದಲ್ಲಿ ತೀರ್ಪು ಹಿಂದುಗಳ ಪರವಾಗಿ ಅಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದ್ದಂತೆ, ಕಾಶಿ ಮತ್ತು ಮಥುರಾದಲ್ಲಿ ಮಸೀದಿ ಇರುವ ಸ್ಥಳವನ್ನೂ ಹಿಂದುಗಳಿಗೆ ಬಿಟ್ಟುಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದೀಗ ಬಿಜೆಪಿ ಶಾಸಕರು ಹಾಡಿರುವ ಹಾಡಿನ ಸಾಲುಗಳು ಇದೇ ಅರ್ಥ ಒಳಗೊಂಡಿವೆ. ಬಿಟ್ಟುಕೊಡದಿದ್ದರೂ ಯೋಗಿ ಸರ್ಕಾರ ಅದನ್ನು ಕೆಡವುತ್ತದೆ ಎಂಬುದು ಸಾಲುಗಳ ಸಾರಾಂಶವಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೇಹದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಹಿಂದುತ್ವದ ಗುಂಪುಗಳು ಹೀಗೆ ಪ್ರಚೋದನಕಾರಿ ಭಾಷಣ ಮಾಡುತ್ತಲೇ ಇವೆ. ಅದಕ್ಕೆ ಪೊಲೀಸರ ಸಹಕಾರವೂ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಹಾಗೇ, ಇತ್ತೀಚೆಗೆ ಎಲ್ಲೆಲ್ಲಿ ಹಿಂಸಾಚಾರ, ಕೋಮುಗಲಭೆಗಳು ನಡೆದಿವೆ ಎಂಬುದನ್ನೂ ತಿಳಿಸಿದ್ದಾರೆ. ಅದರಾಚೆಗೆ ಧರ್ಮಗುರುಗಳು ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆಕೊಟ್ಟಿದ್ದು, ಅತ್ಯಾಚಾರಿಗಳೆಂದು ಹೀಗಳೆದಿದ್ದನ್ನು ನಾನು ಇಲ್ಲಿ ಉಲ್ಲೇಖಿಸಿಲ್ಲ. ಅದೂ ನಿರತಂತರವಾಗಿ ನಡೆಯುತ್ತಲೇ ಇದೆ. ರಾಮನವಮಿ ಶೋಭಾಯಾತ್ರೆಯಂತೂ ದೇಶಾದ್ಯಂತ ಬಹುತೇಕ ಕಡೆ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಲೆಂದೇ ನಡೆಸಲಾಯಿತು ಎಂದೂ ಟ್ವೀಟ್ ಮಾಡಿದ್ದಾರೆ.
Just in the last few days Hindutva mobs with the blessing of cops provoked/participated in violence in at least these places:
1. Karauli, Rajasthan
2. Khambata & Himmatnagar, Gujarat (Mausoleum set on fire)
3. Khargone, Madhya Pradesh 1/3— Asaduddin Owaisi (@asadowaisi) April 10, 2022
ಇದನ್ನೂ ಓದಿ: ಇದು ಅವಿವೇಕದ ರಾಜಕಾರಣ: ಪೊಲೀಸ್ ಆಯುಕ್ತರ ಮಾತಿಗೆ ರಾಜಕೀಯ ಲೇಪ ಕೊಟ್ಟವರಿಗೆ ಭಾಸ್ಕರ್ ರಾವ್ ತರಾಟೆ
Published On - 11:57 am, Mon, 11 April 22