ರಾಮನವಮಿ ಮೆರವಣಿಗೆ ಮೇಲೆ ಅನ್ಯ ಕೋಮಿನ ಜನರಿಂದ ಕಲ್ಲು ತೂರಾಟ; ಪೊಲೀಸ್​ ಅಧಿಕಾರಿ ಸೇರಿ 10 ಮಂದಿಗೆ ಗಾಯ, ಕರ್ಫ್ಯೂ ಹೇರಿಕೆ

ನಿನ್ನೆ ಎಲ್ಲೆಡೆ ರಾಮನವಮಿ ಸಂಭ್ರಮವಿತ್ತು. ಹಾಗೇ ಖಾರ್ಗೋನ್​​ನಲ್ಲಿ ಕೂಡ ರಾಮನವಮಿ ಪ್ರಯುಕ್ತ ಪೂಜೆ, ಮೆರವಣಿಗೆ ನಡೆದಿತ್ತು. ಮುಸ್ಲಿಂ ಪ್ರಾಬಲ್ಯವಿರುವ ತಲಾಬ್ ಚೌಕ್​​ ಬಳಿ ಮೆರವಣಿಗೆ ತಲುಪುತ್ತಿದ್ದಂತೆ ಸಂಘರ್ಷ ಶುರುವಾಗಿದೆ.

ರಾಮನವಮಿ ಮೆರವಣಿಗೆ ಮೇಲೆ ಅನ್ಯ ಕೋಮಿನ ಜನರಿಂದ  ಕಲ್ಲು ತೂರಾಟ; ಪೊಲೀಸ್​ ಅಧಿಕಾರಿ ಸೇರಿ 10 ಮಂದಿಗೆ ಗಾಯ, ಕರ್ಫ್ಯೂ ಹೇರಿಕೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Apr 11, 2022 | 10:22 AM

ರಾಮ ನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಘಟನೆ ಮಧ್ಯಪ್ರದೇಶದ ಖಾರ್ಗೋನ್​ನಲ್ಲಿ ನಡೆದಿದೆ. ಸದ್ಯ ಸ್ಥಳದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಕಲ್ಲು ತೂರಾಟದಲ್ಲಿ ಸ್ಥಳೀಯ ಎಸ್​ಪಿ ಸಿದ್ಧಾರ್ಥ್​ ಚೌಧರಿ ಸೇರಿ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನುಗ್ರಹ ಪಿ., ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಯಾರದ್ದೂ ಪ್ರಾಣಹೋಗಿಲ್ಲ. ಆದರೆ 10 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಿನ್ನೆ ಎಲ್ಲೆಡೆ ರಾಮನವಮಿ ಸಂಭ್ರಮವಿತ್ತು. ಹಾಗೇ ಖಾರ್ಗೋನ್​​ನಲ್ಲಿ ಕೂಡ ರಾಮನವಮಿ ಪ್ರಯುಕ್ತ ಪೂಜೆ, ಮೆರವಣಿಗೆ ನಡೆದಿತ್ತು. ಮುಸ್ಲಿಂ ಪ್ರಾಬಲ್ಯವಿರುವ ತಲಾಬ್ ಚೌಕ್​​ ಬಳಿ ಮೆರವಣಿಗೆ ತಲುಪುತ್ತಿದ್ದಂತೆ ಸಂಘರ್ಷ ಶುರುವಾಗಿದೆ. ಈ ರಾಮನವಮಿ ನಿಮಿತ್ತ ಮೆರವಣಿಗೆಯಲ್ಲಿ ಹಾಕಲಾಗಿದ್ದ ಹಾಡಿನ ಬಗ್ಗೆ ಕೆಲವರು ಕ್ಯಾತೆ ತೆಗೆದಿದ್ದಾರೆ. ಹಾಡನ್ನು ನಿಲ್ಲಿಸಲು ಮೆರವಣಿಗೆ ನಡೆಸುತ್ತಿದ್ದವರು ಒಪ್ಪದೆ ಇದ್ದಾಗ ಮೊದಲು ಮಾತಿನ ಚಕಮಕಿ ನಡೆದಿದೆ. ನಂತರ ಕೆಲವರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲಿಂದ ಸಂಘರ್ಷ ಶುರುವಾಗಿದೆ. ಅಲ್ಲಿಂದ ಶುರುವಾದ ಹಿಂಸಾಚಾರ ಮಿತಿಮೀರಿ, ನಾಲ್ಕು ಮನೆಗಳನ್ನೂ ಸುಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೀಗ ತಲಾಬ್​ ಚೌಕ್​, ಗೋಶಾಲಾ ಮಾರ್ಗ, ಮೋತಿಪುರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಎಸ್​.ಎಸ್​.ಮುಜಲ್ದಾ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಅನುಗ್ರಹ್​ ಪಿ, ಎಸ್​ಪಿ ಸಿದ್ಧಾರ್ಥ್​ ಚೌಧರಿ, ಉಪವಿಭಾಗೀಯ ಅಧಿಕಾರಿ ಮಿಲಿಂದ್​ ಧೋಕೆ ಇಲ್ಲಿನ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ. ಇದು ಎರಡು ಕೋಮುಗಳ ನಡುವಿನ ಸಂಘರ್ಷವಾಗಿರುವುದರಿಂದ ಅತ್ಯಂತ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದೂ ಮುಜಲ್ದಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Communal Clashes: ಕವಿತೆ ಅವಿತಿಲ್ಲ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ

Published On - 9:45 am, Mon, 11 April 22