AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಾಮನವಮಿ ಶೋಭಾಯಾತ್ರೆಯಲ್ಲಿ ಹಾಡು ಹಾಡಿ ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕ; ಓವೈಸಿಯಿಂದ ಪ್ರತಿಕ್ರಿಯೆ

ವಿಡಿಯೋ ವೈರಲ್ ಆದ ಬೆನ್ನಲ್ಲೇ  ಆಲ್​ ಇಂಡಿಯಾ ಮಜ್ಲಿಸ್​ ಇ ಇತ್ತೇಹದುಲ್​ ಮುಸ್ಲಿಮೀನ್​ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಹಿಂದುತ್ವದ ಗುಂಪುಗಳು ಹೀಗೆ ಪ್ರಚೋದನಕಾರಿ ಭಾಷಣ ಮಾಡುತ್ತಲೇ ಇವೆ ಎಂದು ಹೇಳಿದ್ದಾರೆ.

Video: ರಾಮನವಮಿ ಶೋಭಾಯಾತ್ರೆಯಲ್ಲಿ ಹಾಡು ಹಾಡಿ ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕ; ಓವೈಸಿಯಿಂದ ಪ್ರತಿಕ್ರಿಯೆ
ಹಾಡು ಹಾಡುತ್ತಿರುವ ಬಿಜೆಪಿ ಶಾಸಕ
TV9 Web
| Edited By: |

Updated on:Apr 11, 2022 | 11:59 AM

Share

ಏನೇನೋ ಹೇಳಿಕೆಗಳನ್ನು ನೀಡಿ, ಮಾಡಬಾರದ ಕೆಲಸ ಮಾಡಿ ವಿವಾದ ಸೃಷ್ಟಿಸುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಿಜೆಪಿ ಶಾಸಕ ಹಾಡು ಹಾಡಿ ವಿವಾದ ಹುಟ್ಟುಹಾಕಿದ್ದಾರೆ. ನಿನ್ನೆ ಹೈದರಾಬಾದ್​ನಲ್ಲಿ ರಾಮನವಮಿ ಪ್ರಯುಕ್ತ ನಡೆಸಿದ್ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಗೋಶಮಹಲ್​ ಬಿಜೆಪಿ ಶಾಸಕ ರಾಜಾ ಸಿಂಗ್​ ಅವರು,  Jo ram ka naam na le unko bharat se bhagana Hai (ಶ್ರೀರಾಮನ ಹೆಸರನ್ನು ಹೇಳದೆ ಇರುವವರನ್ನು ದೇಶದಿಂದ ಓಡಿಸಬೇಕು, ಈ ದೇಶದಲ್ಲಿ ಇರಲು ಯೋಗ್ಯರಲ್ಲ) ಎಂಬ ಹಾಡೊಂದನ್ನು ಹಾಡಿದ್ದಾರೆ. ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬುಲ್ಡೋಜರ್ ಮೂಲಕ ಕಾಶಿ ಮತ್ತು ಮಥುರಾವನ್ನು ಸ್ವಚ್ಛಗೊಳಿಸುತ್ತಾರೆ. ಭಾರತ ಕೆಲವೇ ವರ್ಷಗಳಲ್ಲಿ ಹಿಂದೂ ರಾಷ್ಟ್ರವಾಗಲಿದೆ’ ಎಂಬ ಸಾಲುಗಳನ್ನೂ ಈ ಹಾಡು ಒಳಗೊಂಡಿದೆ.

ಕಾಶಿ ಮತ್ತು ಮಥುರಾದಲ್ಲಿ ಹಿಂದೂ ದೇಗುಲ ಮತ್ತು ಮಸೀದಿ ವಿವಾದ ಎದ್ದಿರುವುದು ಗೊತ್ತೇ ಇದೆ. ಅಯೋಧ್ಯೆಯಲ್ಲಿ ಇದ್ದ ವಿವಾದದಲ್ಲಿ ತೀರ್ಪು ಹಿಂದುಗಳ ಪರವಾಗಿ ಅಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದ್ದಂತೆ, ಕಾಶಿ ಮತ್ತು ಮಥುರಾದಲ್ಲಿ ಮಸೀದಿ ಇರುವ ಸ್ಥಳವನ್ನೂ ಹಿಂದುಗಳಿಗೆ ಬಿಟ್ಟುಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದೀಗ ಬಿಜೆಪಿ ಶಾಸಕರು ಹಾಡಿರುವ ಹಾಡಿನ ಸಾಲುಗಳು ಇದೇ ಅರ್ಥ ಒಳಗೊಂಡಿವೆ. ಬಿಟ್ಟುಕೊಡದಿದ್ದರೂ ಯೋಗಿ ಸರ್ಕಾರ ಅದನ್ನು ಕೆಡವುತ್ತದೆ ಎಂಬುದು ಸಾಲುಗಳ ಸಾರಾಂಶವಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ  ಆಲ್​ ಇಂಡಿಯಾ ಮಜ್ಲಿಸ್​ ಇ ಇತ್ತೇಹದುಲ್​ ಮುಸ್ಲಿಮೀನ್​ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಹಿಂದುತ್ವದ ಗುಂಪುಗಳು ಹೀಗೆ ಪ್ರಚೋದನಕಾರಿ ಭಾಷಣ ಮಾಡುತ್ತಲೇ ಇವೆ.  ಅದಕ್ಕೆ ಪೊಲೀಸರ ಸಹಕಾರವೂ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಹಾಗೇ, ಇತ್ತೀಚೆಗೆ ಎಲ್ಲೆಲ್ಲಿ ಹಿಂಸಾಚಾರ, ಕೋಮುಗಲಭೆಗಳು ನಡೆದಿವೆ ಎಂಬುದನ್ನೂ ತಿಳಿಸಿದ್ದಾರೆ.  ಅದರಾಚೆಗೆ ಧರ್ಮಗುರುಗಳು ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆಕೊಟ್ಟಿದ್ದು, ಅತ್ಯಾಚಾರಿಗಳೆಂದು ಹೀಗಳೆದಿದ್ದನ್ನು ನಾನು ಇಲ್ಲಿ ಉಲ್ಲೇಖಿಸಿಲ್ಲ. ಅದೂ ನಿರತಂತರವಾಗಿ ನಡೆಯುತ್ತಲೇ ಇದೆ. ರಾಮನವಮಿ ಶೋಭಾಯಾತ್ರೆಯಂತೂ ದೇಶಾದ್ಯಂತ ಬಹುತೇಕ ಕಡೆ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಲೆಂದೇ ನಡೆಸಲಾಯಿತು ಎಂದೂ ಟ್ವೀಟ್​​ ಮಾಡಿದ್ದಾರೆ.

ಇದನ್ನೂ ಓದಿ: ಇದು ಅವಿವೇಕದ ರಾಜಕಾರಣ: ಪೊಲೀಸ್ ಆಯುಕ್ತರ ಮಾತಿಗೆ ರಾಜಕೀಯ ಲೇಪ ಕೊಟ್ಟವರಿಗೆ ಭಾಸ್ಕರ್ ರಾವ್ ತರಾಟೆ

Published On - 11:57 am, Mon, 11 April 22

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ