Ukraine-Russia War ಮಂಗಳವಾರ ರಾತ್ರಿಯಿಂದ ಉಕ್ರೇನ್ ರಾಜಧಾನಿಯಲ್ಲಿ 35 ಗಂಟೆಗಳ ಕರ್ಫ್ಯೂ
ಮಂಗಳವಾರ ಬೆಳಗ್ಗೆ ಉಕ್ರೇನ್ ರಾಜಧಾನಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕೀವ್ ಮೇಯರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಉಕ್ರೇನ್ (Ukraine) ರಾಜಧಾನಿ ಕೀವ್ (Kyiv) ಮಂಗಳವಾರ ರಾತ್ರಿಯಿಂದ 35 ಗಂಟೆಗಳ ಕರ್ಫ್ಯೂ ವಿಧಿಸಲಿದೆ ಎಂದು ನಗರದ ಮೇಯರ್ ಇಂದು ರಷ್ಯಾದ ಹೊಸ ದಾಳಿಗಳ ನಡುವೆ ಘೋಷಿಸಿದರು. ಕೀವ್ ರಷ್ಯಾದ (Russia)ಪಡೆಗಳಿಂದ ಸುತ್ತುವರಿದಿದೆ ಮತ್ತು ನಗರವು ತನ್ನ 3.5-ಮಿಲಿಯನ್ ಯುದ್ಧಪೂರ್ವ ಜನಸಂಖ್ಯೆಯ ಅಂದಾಜು ಅರ್ಧದಷ್ಟು ಕಳೆದುಕೊಂಡಿದೆ. ಉಕ್ರೇನ್‌ನಾದ್ಯಂತ ರಷ್ಯಾದ ಆಕ್ರಮಣವು ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ. ರಷ್ಯಾದ ಪಡೆಗಳು ಕೀವ್ ಸಮೀಪಿಸಿದ್ದು ಮಾತ್ರವಲ್ಲದೆ ದಕ್ಷಿಣ ಬಂದರು ನಗರವಾದ ಮರಿಯುಪೋಲ್‌ನ ಮುತ್ತಿಗೆಯನ್ನು ಮುಂದುವರೆಸಿವೆ. ಅಲ್ಲಿ ಸುಮಾರು 2,200 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಪಡೆಗಳು ಮೊದಲು ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದ್ದವು. ಫೆಬ್ರವರಿ 24 ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ಣ ಪ್ರಮಾಣದ ಭೂಮಿ ಮತ್ತು ವಾಯು ದಾಳಿಯನ್ನು ಪ್ರಾರಂಭಿಸಿದಾಗಿನಿಂದ ಮೂರು ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಅವರಲ್ಲಿ ಹೆಚ್ಚಿನವರು ಪೋಲೆಂಡ್‌ಗೆ ಪಲಾಯನ ಮಾಡಿದ್ದರು.
48 ಮಕ್ಕಳು ಸೇರಿದಂತೆ 691 ನಾಗರಿಕರು ಉಕ್ರೇನ್‌ನಲ್ಲಿ ಹತ್ಯೆಯಾಗಿದ್ದಾರೆ: ವಿಶ್ವಸಂಸ್ಥೆ ಜಿನೀವಾ: 20 ದಿನಗಳ ಹಿಂದೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ 691 ಜನರು ಸಾವನ್ನಪ್ಪಿದ್ದಾರೆ ಮತ್ತು 1,143 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮಂಗಳವಾರ ತಿಳಿಸಿದೆ. ಹಿಂದಿನ ವರದಿಯ ಪ್ರಕಾರ 48 ಮಕ್ಕಳನ್ನು ಒಳಗೊಂಡಂತೆ ಸಾವಿನ 636 ನಾಗರಿಕರು ಹತ್ಯೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಗಳಹಕ್ಕು ಪರಿವೀಕ್ಷಕರು ಸೋಮವಾರ ಹೇಳಿದ್ದಾರೆ.ಖಾರ್ಕಿವ್ ಪ್ರದೇಶದಲ್ಲಿನ ಇಝಿಯಂ, ಮಾರಿಯುಪೋಲ್ ದಕ್ಷಿಣ ನಗರ ಮತ್ತು ಡೊನೆಟ್ಸ್ಕ್ ಪ್ರದೇಶದ ವೊಲ್ನೋವಾಖಾ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತೀವ್ರವಾದ ಆಕ್ರಮಣ ಮತ್ತು ವರದಿ ವಿಳಂಬಗಳ ಕಾರಣದಿಂದಾಗಿ ನಿಜವಾದ ನಾಗರಿಕ ಸಾವುನೋವುಗಳ ಅಂಕಿಅಂಶಗಳು “ಗಣನೀಯವಾಗಿ ಹೆಚ್ಚಿವೆ” ಎಂದು ನಂಬಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಮಂಗಳವಾರ ಬೆಳಿಗ್ಗೆ ದಾಳಿಯಲ್ಲಿ ನಾಲ್ವರು ಸಾವು ಮಂಗಳವಾರ ಬೆಳಗ್ಗೆ ರಾಜಧಾನಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕೀವ್ ಮೇಯರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಮೇ ವೇಳೆಗೆ ಯುದ್ಧ ಮುಗಿಯಬಹುದು: ಉಕ್ರೇನಿಯನ್ ಅಧ್ಯಕ್ಷರ ಸಲಹೆಗಾರ ಉಕ್ರೇನ್‌ನಲ್ಲಿನ ಯುದ್ಧವು ಮೇ ತಿಂಗಳ ಆರಂಭದ ವೇಳೆಗೆ ಕೊನೆಗೊಳ್ಳುವ ಸಾಧ್ಯತೆಯಿದೆ, ರಷ್ಯಾವು ತನ್ನ ನೆರೆಯ ರಾಷ್ಟ್ರದ ಮೇಲೆ ದಾಳಿ ಮಾಡಲು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷರ ಮುಖ್ಯಸ್ಥರ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಸೋಮವಾರ ತಡರಾತ್ರಿ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾದ ಯುದ್ಧವನ್ನು ಪ್ರತಿಭಟಿಸಿ ಲೈವ್ ಶೋಗೆ ಅಡ್ಡಿಪಡಿಸಿದ ರಷ್ಯಾ ಟಿವಿಯ ಸಂಪಾದಕಿ ನಾಪತ್ತೆ
Published On - 9:02 pm, Tue, 15 March 22