ಹೈದರಾಬಾದ್: ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿ ಸಂಕಷ್ಟ ಪರಿಹಾರಕ್ಕಾಗಿ ಬೇಡಿಕೊಂಡ್ರೆ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ವಾಡಿಕೆ. ಇಂಥ ಪುಣ್ಯಕ್ಷೇತ್ರದಲ್ಲಿ ನಿಧಿಗಾಗಿ ಮಧ್ಯರಾತ್ರಿ ಪೂಜೆ ಮಾಡಲಾಗಿದೆ. ಅಲ್ಲಿ ನಡೆದ ಈ ಘಟನೆಯೊಂದು ಸ್ಥಳೀಯರನ್ನ ಬೆಚ್ಚಿಬೀಳುವಂತೆ ಮಾಡಿದೆ.
ನಿಧಿ ಪಡೆಯಲು ಕಗ್ಗತ್ತಲ ಪೂಜೆ..!
ಆಂಧ್ರಪ್ರದೇಶದಲ್ಲಿರುವ ಪುಣ್ಯಕ್ಷೇತ್ರ ಶ್ರೀಕಾಳಹಸ್ತಿಯಲ್ಲಿ ನಿಧಿಗಳ್ಳರ ಹಾವಳಿ ಜೋರಾಗಿದೆ. ಈಗ ಮತ್ತೊಂದು ಘಟನೆ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ. ಶ್ರೀಕಾಳಹಸ್ತಿ ಕಾಲಭೈರವೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ನಿಧಿ ಆಸೆಗೆ ಕಗ್ಗತ್ತಲಲ್ಲಿ ಪೂಜೆ ಮಾಡುತ್ತಿದ್ದ ತಮಿಳುನಾಡು ಮೂಲದ ಗ್ಯಾಂಗ್ ಅರೆಸ್ಟ್ ಆಗಿದೆ.
ಪೂಜೆ ಮಾಡುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಅಲರ್ಟ್ ಆದ ಪೊಲೀಸ್ರು ಕ್ಷುದ್ರಪೂಜೆ ನೆರವೇರಿಸುತ್ತಿದ್ದವರನ್ನ ಬಂಧಿಸಿದ್ದಾರೆ.
ಕ್ಷುದ್ರಪೂಜೆ ಮಾಡಲು ಅಧಿಕಾರಿಗಳ ಬೆಂಬಲ..?
ಪಿಡಿಒ ನೀಡಿದ ದೂರಿನ ಅನ್ವಯ ಕಾಳಹಸ್ತಿ ಗ್ರಾಮೀಣ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ ಬೆಚ್ಚಿಬೀಳಿಸೋ ಅಂಶ ಹೊರಬಿದ್ದಿದೆ. ಕ್ಷುದ್ರಪೂಜೆಗೆ ದೇವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಬೆಂಬಲ ನೀಡಿದ್ರಂತೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
Published On - 6:35 am, Thu, 28 November 19