ದೆಹಲಿ ಡಿಸೆಂಬರ್ 20: ತೃಣಮೂಲ ಸಂಸದ (TMC) ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ (Jagdeep Dhankhar) ಅವರನ್ನು ಅಣಕಿಸಿದ್ದರ ವಿರುದ್ಧ ಆಡಳಿತಾರೂಢ ಬಿಜೆಪಿ (BJP) ಕಿಡಿ ಕಾರಿದ್ದು , ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬುಧವಾರ ಶಾಂತವಾಗಿರಲು ಕರೆ ನೀಡಿದ್ದು, ಪ್ರಚೋದನಕಾರಿ ಭಾಷೆಯ ಬಳಕೆಯ ವಿರುದ್ಧ ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಹೊಸ ಸಂಸತ್ತಿನ ಮೆಟ್ಟಿಲುಗಳ ಮೇಲೆ ಮಂಗಳವಾರ ಮಧ್ಯಾಹ್ನ ನಡೆದ ಅಣಕ”ವೈಯಕ್ತಿಕ ದಾಳಿ” ಮತ್ತು “ರೈತ ಅಥವಾ ಸಮುದಾಯದ (ಉಪರಾಷ್ಟ್ರಪತಿ ಜಾಟ್ ಸಮುದಾಯದವರ) ಅವಮಾನ” ಎಂದು ಧನ್ಖರ್ ಅವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಈ ರೀತಿ ಮಾತನಾಡಬಾರದು. ಜನರನ್ನು ಪ್ರಚೋದಿಸುವುದನ್ನು ತಪ್ಪಿಸಬೇಕು. ಪ್ರತಿಯೊಂದು ವಿಚಾರದಲ್ಲೂ ಜಾತಿ ಎಳೆದು ಜನರನ್ನು ಕೆರಳಿಸಬಾರದು ಎಂದಿದ್ದಾರೆ.
ನನಗೆ ಮಾತನಾಡಲು ಅವಕಾಶ ನೀಡದಿದ್ದರೆ ನಾನು ದಲಿತ ಎಂಬ ಕಾರಣಕ್ಕೆ ಹೇಳಬೇಕೇ? ಎಂದು ಕೇಳಿದ ಖರ್ಗೆ, ನನ್ನ ಮೇಲೂ ಸಮುದಾಯದ ಹೆಸರಲ್ಲಿ ಆಗಾಗ್ಗೆ ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ. “ನಡೆದ ಅವಮಾನವು ಜಾತಿ ಆಧಾರಿತವಾಗಿದೆ ಮತ್ತು ರೈತರನ್ನು (ಸಹ) ಅವಮಾನಿಸಲಾಗಿದೆ ಎಂದು ಸಭಾಪತಿ ಹೇಳಿದರು. ನನ್ನ ಜಾತಿಯ ಮೇಲೂ ಯಾವಾಗಲೂ ದಾಳಿ ಮಾಡಲಾಗುತ್ತದೆ. ನಾನು ಏನನ್ನೂ ಹೇಳುವುದಿಲ್ಲ ಎಂದಿದ್ದಾರೆ ಖರ್ಗೆ.
#WATCH | On Rajya Sabha Chairman Jagdeep Dhankhar saying “My caste also attacked” over mimicry row, LoP RS Mallikarjun Kharge says “…My caste is always affected because I am not allowed to speak (in the House)…” pic.twitter.com/IxDAPKSWbx
— ANI (@ANI) December 20, 2023
ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಧನ್ಖರ್ ಅವರ ಅನುಕರಣೆ ಮಾಡಿದ್ದಕ್ಕೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬ್ಯಾನರ್ಜಿ ಈ ರೀತಿ ಅನುಕರಣೆ ಮಾಡುತ್ತಿರುವಾಗ ರಾಹುಲ್ ಗಾಂಧಿ ಆ ಘಟನೆಯನ್ನು ಚಿತ್ರೀಕರಿಸಿದ್ದರು. ಇದಕ್ಕೂ ಬಿಜೆಪಿ ವಾಗ್ದಾಳಿ ನಡೆಸಿದೆ.
ಬುಧವಾರ ಬೆಳಿಗ್ಗೆ ರಾಜ್ಯಸಭೆಯಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಸದರು ಧನ್ಖರ್ ಅವರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
ಸಂಸತ್ ನಲ್ಲಿ ವಿಪಕ್ಷ ಸಂಸದರ ಸಾಮೂಹಿಕ ಅಮಾನತುಗಳ ನಂತರ ಸಂಸದರು ಬಹುತೇಕ ಎಲ್ಲರೂ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳಿಂದ ಬಂದವರು ಬ್ಯಾನರ್ಜಿ ಅವರ ಕ್ರಮಗಳನ್ನು “ಬಲವಾಗಿ ಖಂಡಿಸುತ್ತಾರೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇದನ್ನೂ ಓದಿ: ಉಪರಾಷ್ಟ್ರಪತಿ ಧನ್ಖರ್ ಅಣಕಿಸಿದ ಟಿಎಂಸಿ ಸಂಸದ; ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡನೆ
ಈ ಪ್ರತಿಭಟನೆಗೆ ಉತ್ತರಿಸಿದ ಖರ್ಗೆ, ಹೊರಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಸದನದಲ್ಲಿ ನಿರ್ಣಯ ಅಂಗೀಕರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಕೇಳಿದ್ದಾರೆ. ಸಂಸತ್ತಿನಲ್ಲಿ ಸದಸ್ಯರ ಅಮಾನತು ಕ್ರಮವನ್ನು ಟೀಕಿಸಿದ ಖರ್ಗೆ, ನೀವು ನಿಯಮಗಳನ್ನು ಅನುಸರಿಸಿಲ್ಲ, ಅಮಾನತುಗೊಂಡವರನ್ನು ಮತ್ತೆ ಕರೆಯಬೇಕು ಎಂದು ನಾವು ಬಯಸುತ್ತೇವೆ” ಎಂದು ಹೇಳಿದರು.
ಪ್ರತಿಪಕ್ಷಗಳು “ಯಾರನ್ನೂ ಅವಮಾನಿಸಲು ಬಯಸುವುದಿಲ್ಲ”. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಮಾತ್ರ ಬಯಸುತ್ತವೆ ಎಂದು ಅವರು ಒತ್ತಿ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ