ಕೆನಡಾದಲ್ಲಿ ನಮ್ಮ ಅಧಿಕಾರಿಗಳಿಗೆ ಉತ್ತಮ ಸುರಕ್ಷತೆ ಸಿಕ್ಕರೆ, ಕೆನಡಿಯನ್ನರಿಗೆ ವೀಸಾ ನೀಡುತ್ತೇವೆ: ಎಸ್​​. ಜೈಶಂಕರ್​​

|

Updated on: Oct 23, 2023 | 12:29 PM

ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸುರಕ್ಷತೆ ನೀಡಿದರೆ ಹಾಗೂ ಅದನ್ನು ಇನ್ನುಷ್ಟು ಬಲಗೊಳಿಸಿದರೆ ಕೆನಡಿಯನ್ನರಿಗೆ ವೀಸಾ ನೀಡುವಿಕೆಯನ್ನು ಪುನರಾರಂಭಿಸುವ ಸಾಧ್ಯತೆಯಿದೆ ಎಂದು ಜೈಶಂಕರ್​​ ಹೇಳಿದ್ದಾರೆ. ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ದೆಹಲಿ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಬಯಸುತ್ತಿದ್ದಾರೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅವರು ನಮ್ಮ ಜತೆಗೆ ಕಾರ್ಯನಿರ್ವಹಿಸಲು ಬಯಸಿದರೆ ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರಿಗೂ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕರಿಗೆ ನೀಡುವಷ್ಟೇ ಸಮಾನತೆಯನ್ನು ಅಲ್ಲಿಯು ನೀಡಬೇಕು ಎಂದು ಹೇಳಿದ್ದಾರೆ.

ಕೆನಡಾದಲ್ಲಿ ನಮ್ಮ ಅಧಿಕಾರಿಗಳಿಗೆ ಉತ್ತಮ ಸುರಕ್ಷತೆ ಸಿಕ್ಕರೆ, ಕೆನಡಿಯನ್ನರಿಗೆ ವೀಸಾ ನೀಡುತ್ತೇವೆ: ಎಸ್​​. ಜೈಶಂಕರ್​​
ಎಸ್​​. ಜೈಶಂಕರ್​​
Follow us on

ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಘರ್ಷಣೆ (india canada diplomatic row) ಅಂತ್ಯ ಕಾಣುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿತ್ತು. ಆದರೆ ಭಾರತ ಮತ್ತು ಕೆನಡಾ ನಡುವಿನ ಮಾತುಕತೆಯಿಂದ ಈ ಎಲ್ಲ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್​​ ಅವರ ಈ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಹಾಗೂ ಕೆನಡಾ ಮತ್ತು ಭಾರತದ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ. ಕೆನಡಾ ಸಿಬ್ಬಂದಿಗಳು ಅಂದರೆ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ದೆಹಲಿ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಬಯಸುತ್ತಿದ್ದಾರೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅವರು ನಮ್ಮ ಜತೆಗೆ ಕಾರ್ಯನಿರ್ವಹಿಸಲು ಬಯಸಿದರೆ ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರಿಗೂ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕರಿಗೆ ನೀಡುವಷ್ಟೇ ಸಮಾನತೆಯನ್ನು ಅಲ್ಲಿಯು ನೀಡಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್​​ ಹೇಳಿದ್ದಾರೆ. ಜತೆಗೆ ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸುರಕ್ಷತೆ ನೀಡಿದರೆ ಹಾಗೂ ಅದನ್ನು ಇನ್ನುಷ್ಟು ಬಲಗೊಳಿಸಿದರೆ ಕೆನಡಿಯನ್ನರಿಗೆ ವೀಸಾ ನೀಡುವಿಕೆಯನ್ನು ಪುನರಾರಂಭಿಸುವ ಸಾಧ್ಯತೆಯಿದೆ ಎಂದು ಜೈಶಂಕರ್​​ ಹೇಳಿದ್ದಾರೆ.

ಜೂನ್​​ನಲ್ಲಿ ಖಲಿಸ್ತಾನ್​​ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್​​​ಗಳ ಕೈವಾಡ ಇದೆ. ಇದಕ್ಕೆ ನೇರ ಕಾರಣ ಭಾರತ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಆರೋಪಿಸಿದ ನಂತರ ಭಾರತ ಮತ್ತು ಕೆನಡಾದ ನಡುವಿನ ಸಂಬಂಧ ಹದಗೆಟ್ಟಿದೆ. ಈ ಹೇಳಿಕೆಯ ನಂತರ ಕೆನಡಾದಲ್ಲಿರುವ ಹಿರಿಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾದಿಂದ ಹೊರಹಾಕಲಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಕೆನಡಾದ ರಾಜತಾಂತ್ರಿಮ ಅಧಿಕಾರಿಗಳನ್ನು ಹೊರ ಹಾಕಲಾಗಿತ್ತು. ಇದರ ಜತೆಗೆ ಕೆನಡಿಯನ್ನರಿಗೆ ವೀಸಾ ನೀಡುವಿಕೆಯನ್ನು ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿ: ಭಾರತದ ಎಚ್ಚರಿಕೆ ಬೆನ್ನಲ್ಲೇ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡ ಕೆನಡಾ

ಇದೀಗ ಕೆನಡಾ ಒಂದು ವೇಳೆ ನಮ್ಮ ರಾಜತಾಂತ್ರಿಕ ಅಧಿಕಾರಿಗಳಿಗೆ ಉತ್ತಮ ಸುರಕ್ಷತೆ ನೀಡಿದರೆ ವೀಸಾಗಳ ವಿತರಣೆಯನ್ನು ಪುನರಾರಂಭಿಸುತ್ತೇವೆ ಎಂದು ಎಸ್​​ ಜೈಶಂಕರ್​​ ಕೆನಡಾ ಮತ್ತು ಭಾರತದ ನಡುವಿನ ಸಂಬಂಧ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆಗೊಳಿಸುವುದರ ಬಗ್ಗೆ ಮಾತನಾಡಿದ ಅವರು, ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಸಮಾವೇಶದಲ್ಲಿ ರಾಜತಾಂತ್ರಿಕ ಸಮಾನತೆಯನ್ನು ಹೆಚ್ಚು ಒದಗಿಸಲಾಗಿದೆ. ಇದು ಅಂತರರಾಷ್ಟ್ರೀಯ ನಿಯಮವಾಗಿದೆ. ನಮ್ಮ ಕಾರ್ಯಗಳಲ್ಲಿ ಕೆನಡಾ ಅಧಿಕಾರಿಗಳ ತೋಡಗಿಕೊಳ್ಳುವ ಕಾರಣ ಕೆನಡಾದಲ್ಲಿರುವ ಭಾರತದ ಅಧಿಕಾರಿಗಳ ಸುರಕ್ಷತೆಯು ನಮಗೆ ಮುಖ್ಯ ಎಂದು ಹೇಳಿದ್ದಾರೆ.

ಈಗಾಗಲೇ ಭಾರತದಲ್ಲಿರುವ ತನ್ನ 41 ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂಪಡೆದಿದೆ. ಈ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮಾತನಾಡಿದ್ದು, ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಗಳನ್ನು ಈಗಾಗಲೇ ಹಿಂಪಡೆಯಲಿದೆ. ಭಾರತ ಈ ಕ್ರಮ ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದದ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದಾರೆ. ಆದರೆ ಈ ಆರೋಪವನ್ನು ಭಾರತ ವಿರೋಧಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ