ನವದೆಹಲಿ, ಅಕ್ಟೋಬರ್ 19: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಸರಣಿಯ 100 ಕಂತುಗಳ ಪಯಣವನ್ನು ಒಳಗೊಂಡ ಮೂರನೇ ಪುಸ್ತಕ ‘ಇಗ್ನೈಟಿಂಗ್ ಕಲೆಕ್ಟಿವ್ ಗುಡ್ನೆಸ್: ಮನ್ ಕೀ ಬಾತ್ @ 100 (Igniting Collective Goodness: MKB@100)’ ಇತ್ತೀಚೆಗೆ ಬಿಡುಗಡೆಯಾಗಿದೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ (BlueKraft Digital Foundation) ಬಿಡುಗಡೆ ಮಾಡಿರುವ ಪುಸ್ತಕದ ಬಗ್ಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2023ರ ಏಪ್ರಿಲ್‌ನಲ್ಲಿ ಮನ್ ಕೀ ಬಾತ್ 100 ಸಂಚಿಕೆಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪುಸ್ತಕ ಬರೆಯುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಪ್ರಧಾನಿ ಮೋದಿ ಮುನ್ನುಡಿಯಲ್ಲಿ ಹೇಳಿದ್ದಾರೆ.
ಸರಣಿಯ ಈ ಮೊದಲ ಪುಸ್ತಕವನ್ನು 26 ಕಂತುಗಳ ನಂತರ ಮತ್ತು 2017 ರ ಮೇ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪುಸ್ತಕ ಬಿಡುಗಡೆ ಮಾಡಿದ್ದರು. ನಂತರದ ಪುಸ್ತಕವನ್ನು, 50 ಕಂತುಗಳ ಬಳಿಕ 2019 ರ ಮಾರ್ಚ್ನಲ್ಲಿ ಆಗಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಿಡುಗಡೆ ಮಾಡಿದ್ದರು.
ಇದೀಗ ಮೂರನೇ ಪುಸ್ತಕದ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜನರು ಮತ್ತು ಅವರ ಪ್ರಧಾನ ಮಂತ್ರಿಯ ನಡುವಿನ ಮೋಡಿಮಾಡುವ ಸಂಭಾಷಣೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ ‘ಇಗ್ನೈಟಿಂಗ್ ಕಲೆಕ್ಟಿವ್ ಗುಡ್ನೆಸ್’. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಮ್ಮ ತಾಯ್ನಾಡಿಗೆ ಉತ್ಸಾಹ ಮತ್ತು ಮಾನವೀಯತೆಯಿಂದ ಸೇವೆ ಸಲ್ಲಿಸುವಂತೆ ಮಾಡುವ ಸರ್ವೋತ್ಕೃಷ್ಟ ಒಳ್ಳೆಯತನದ ಪ್ರತಿಬಿಂಬವಾಗಿದೆ. ಈ ಪ್ರೀತಿಯ ಪ್ರಯತ್ನದ ಪ್ರತಿಯನ್ನು ಇಂದೇ ಪಡೆದುಕೊಳ್ಳಿ ಎಂದು ಇರಾನಿ ಇನ್ಸ್ಟಾಗ್ರಾಂ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
Received a copy of a book on “Mann Ki Baat.” Chronicles the remarkable journey of the @airnewsalerts which reached 100 episodes in April’23.
Small, self-motivated good deeds of nation building have found recognition in the words of @PMOIndia, one Sunday each month.
Indeed… pic.twitter.com/iESegwxOoc— Nirmala Sitharaman (@nsitharaman) October 18, 2023
‘ಮನ್ ಕೀ ಬಾತ್’ ಪುಸ್ತಕದ ಪ್ರತಿಯನ್ನು ಪಡೆದೆ. ಗಮನಾರ್ಹ ಸರಣಿಯು 2023ರ ಏಪ್ರಿಲ್‌ನಲ್ಲಿ 100 ಸಂಚಿಕೆಗಳನ್ನು ತಲುಪಿತು. ರಾಷ್ಟ್ರ ನಿರ್ಮಾಣದ ಸಣ್ಣ, ಸ್ವಯಂ ಪ್ರೇರಿತ ಸತ್ಕಾರ್ಯಗಳು ಪದಗಳಲ್ಲಿ ಮನ್ನಣೆಯನ್ನು ಕಂಡುಕೊಂಡಿವೆ. ಪ್ರಧಾನಿಯವರು ತಿಂಗಳು ಒಂದು ಭಾನುವಾರ ನಡೆಸುವ ಕಾರ್ಯಕ್ರಮ ನಿಜಕ್ಕೂ ಸಾಮೂಹಿಕ ಒಳಿತನ್ನು ಬಿಂಬಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
The new book ‘Igniting Collective Goodness: Mann Ki Baat @ 100’ tells the story of a unique journey undertaken by our nation under the leadership of PM @narendramodi Ji. It sheds new light on how Modi Ji with the sheer power of his words rallied the nation behind common goals of… pic.twitter.com/gBMAEMgtcv
— Amit Shah (@AmitShah) October 17, 2023
ಹೊಸ ಪುಸ್ತಕ ‘ಇಗ್ನೈಟಿಂಗ್ ಕಲೆಕ್ಟಿವ್ ಗುಡ್ನೆಸ್: ಮನ್ ಕೀ ಬಾತ್ @ 100′ ಪ್ರಧಾನಿ ನಾಯಕತ್ವದಲ್ಲಿ ನಮ್ಮ ರಾಷ್ಟ್ರವು ಕೈಗೊಂಡ ವಿಶಿಷ್ಟ ಪ್ರಯಾಣದ ಕಥೆಯನ್ನು ಹೇಳುತ್ತದೆ. ನರೇಂದ್ರ ಮೋದಿ ಜೀ ಅವರು ತಮ್ಮ ಮಾತುಗಳ ಶಕ್ತಿಯಿಂದ ಹೇಗೆ ಒಳಿತಿನ ಸಾಮಾನ್ಯ ಗುರಿಗಳೊಂದಿಗೆ ರಾಷ್ಟ್ರವನ್ನು ಒಟ್ಟುಗೂಡಿಸಿದರು ಎಂಬುದರ ಕುರಿತು ಇದು ಹೊಸ ಬೆಳಕನ್ನು ಚೆಲ್ಲುತ್ತದೆ. ದತ್ತಾಂಶಗಳು ಮತ್ತು ಒಳನೋಟಗಳಿಂದ ಕೂಡಿರುವ ಈ ಪುಸ್ತಕವು ಮನ್ ಕೀ ಬಾತ್ 100 ನೇ ಸಂಚಿಕೆಯನ್ನು ದಾಟುತ್ತಿರುವಾಗ, ಪರಿವರ್ತಕ ಪ್ರಯಾಣವನ್ನು ಪ್ರತಿಬಿಂಬಿಸಲು ಬಯಸುವ ಯುವಕರು ಓದಲೇಬೇಕಾದ ಪುಸ್ತಕವಾಗಿದೆ. ಈ ಸಂದರ್ಭದಲ್ಲಿ ನಾನು ಈ ಸಾಹಿತ್ಯ ರತ್ನದೊಂದಿಗೆ ಬಂದಿದ್ದಕ್ಕಾಗಿ ಬ್ಲೂಕ್ರಾಫ್ಟ್ ಅನ್ನು ಅಭಿನಂದಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Received an advance copy of ‘Igniting Collective Goodness: Mann Ki Baat @ 100’, published by @bluekraft. The success of ‘Mann Ki Baat’ reflects PM Shri @narendramodi‘s exceptional connection with the people of India. Through his interactions, Modi ji has fostered a collective… pic.twitter.com/a80WTh9nMZ
— Rajnath Singh (@rajnathsingh) October 18, 2023
ಬ್ಲೂಕ್ರಾಫ್ಟ್ ಪ್ರಕಟಿಸಿರುವ ‘ಇಗ್ನೈಟಿಂಗ್ ಕಲೆಕ್ಟಿವ್ ಗುಡ್ನೆಸ್: ಮನ್ ಕೀ ಬಾತ್ @ 100′ ಪುಸ್ತಕವನ್ನು ಸ್ವೀಕರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಜನರೊಂದಿಗೆ ಹೊಂದಿದ ಅಸಾಧಾರಣ ಸಂಪರ್ಕವನ್ನು ಮನ್ ಕೀ ಬಾತ್ನ ಯಶಸ್ಸು ಬಿಂಬಿಸಿದೆ. ಸಂವಾದಗಳ ಮೂಲಕ, ಮೋದಿ ಜೀ ನಮ್ಮ ದೇಶವನ್ನು ಒಗ್ಗೂಡಿಸುವ ಸಾಮೂಹಿಕ ಯತ್ನ ಮಾಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಅಧ್ಯಕ್ಷರೊಂದಿಗೆ ಮೋದಿ ಮಾತು; ಗಾಜಾ ಆಸ್ಪತ್ರೆ ದಾಳಿಯಲ್ಲಿ ಸಾವಿಗೀಡಾದವರಿಗೆ ಸಂತಾಪ
ಈ ಪುಸ್ತಕವು ನಮ್ಮ ಸಾಮೂಹಿಕ ಒಳ್ಳೆಯತನದ ಪರಿವರ್ತಕ ಶಕ್ತಿಯನ್ನು ಸೆರೆಹಿಡಿಯುತ್ತದೆ. ನಮ್ಮ ಜನರ ನಿಜವಾದ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ಆಲೋಚನೆಗಳು ‘ನವ ಭಾರತ’ವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಪ್ರತಿಯೊಬ್ಬರು, ವಿಶೇಷವಾಗಿ ಭಾರತದ ಭವಿಷ್ಯವನ್ನು ನಿರ್ಮಿಸಲು ಕೊಡುಗೆ ನೀಡುವ ಯುವಕರು ಓದಲೇಬೇಕಾದ ಪುಸ್ತಕವಿದು ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ