IIIT ಕೋಟ್ಟಯಂನ ಹುಡುಗರ ಹಾಸ್ಟೆಲ್‌ನಲ್ಲಿ ಪಟಾಕಿ ಎಸೆದು ರಾಕೆಟ್ ಹಾರಿಸಿ ಮೋಜು; ವೈರಲ್ ವಿಡಿಯೊ

|

Updated on: Nov 15, 2023 | 1:46 PM

ಕೇರಳದ ಕೋಟ್ಟಯಂನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ (ಐಐಐಟಿ)ಯಲ್ಲಿ ನಡೆದ ಘಟನೆಯೊಂದರಲ್ಲಿ ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವಿದ್ಯಾರ್ಥಿಗಳು ಪಟಾಕಿ ಬಳಸಿ ಮೋಜು ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೊವನ್ನು thetatvaindia ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದೆ.

IIIT ಕೋಟ್ಟಯಂನ ಹುಡುಗರ ಹಾಸ್ಟೆಲ್‌ನಲ್ಲಿ ಪಟಾಕಿ ಎಸೆದು ರಾಕೆಟ್ ಹಾರಿಸಿ ಮೋಜು; ವೈರಲ್ ವಿಡಿಯೊ
ಐಐಟಿ ಕೋಟ್ಟಯಂ
Follow us on

ತಿರುವನಂತಪುರಂ ನವೆಂಬರ್ 15:ದೀಪಾವಳಿಯು(Diwali) ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಬೆಳಕು ಮತ್ತು ಸಮೃದ್ಧಿಯ ಹಬ್ಬವಾಗಿದೆ. ಎಲ್ಲರೂ ತಮ್ಮ ಮನೆ ಅಥವಾ ಹಾಸ್ಟೆಲ್‌ಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ಈ ಹಬ್ಬದ ಋತುವನ್ನು ಆಚರಿಸುತ್ತಾರೆ. ಆದರೆ ಕೇರಳದ (Kerala) ಕೋಟ್ಟಯಂನ (Kottayam) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ (IIIT)ಯಲ್ಲಿ ನಡೆದ ಘಟನೆಯೊಂದರಲ್ಲಿ ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವಿದ್ಯಾರ್ಥಿಗಳು ಪಟಾಕಿ ಬಳಸಿ ಮೋಜು ಮಾಡುತ್ತಿರುವುದನ್ನು ಕಾಣಬಹುದು.ಈ ವಿಡಿಯೊವನ್ನು thetatvaindia ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದೆ.

“ಕೇರಳದ ಕೊಟ್ಟಾಯಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾಲೇಜಿನ ಹುಡುಗರ ಹಾಸ್ಟೆಲ್ ದೀಪಾವಳಿಯಂದು ಪಟಾಕಿಗಳನ್ನು ಬಳಸಿ ಯುದ್ಧ ಮಾಡಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.


ವಿಡಿಯೊವನ್ನು ವೀಕ್ಷಿಸಿದ ನಂತರ ನೆಟಿಜನ್​​ಗಳಲ್ಲಿ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದು, ಇನ್ನು ಕೆಲವರು ಟೀಕಿಸಿದ್ದಾರೆ. ಬಳಕೆದಾರರೊಬ್ಬರು, ಇದನ್ನು ನೋಡಿದ ನಂತರ ಉಕ್ರೇನ್ ಮತ್ತು ರಷ್ಯಾ ನಿಜವಾಗಿ ಶಾಂತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ನಡೆಯುತ್ತಿರುವ ಇಸ್ರೇಲ್ ಯುದ್ಧಕ್ಕೆ ಹೋಲಿಸಿದ ಬಳಕೆದಾರರು “ಇಸ್ರೇಲ್-ಗಾಜಾ ಯುದ್ಧಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಕೋಟ್ಟಯಂ ಕೇರಳದ ಒಂದು ಸ್ವಾಯತ್ತ ಎಂಜಿನಿಯರಿಂಗ್ ಸಂಸ್ಥೆಯಾಗಿದೆ.

ಮಾಲೆಗಾಂವ್‌ನ ಥಿಯೇಟರ್‌ನಲ್ಲಿಯೂ ಇದೇ ರೀತಿಯ ಘಟನೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿದ ಮತ್ತೊಂದು ಘಟನೆ ಈ ಹಿಂದೆ ವರದಿಯಾಗಿತ್ತು. ದೃಶ್ಯಗಳು ಕಾಲ್ತುಳಿತದಂತಹ ಪರಿಸ್ಥಿತಿಯ ನಡುವೆಯೂ ಪ್ರೇಕ್ಷಕರು ರಕ್ಷಣೆಗಾಗಿ ಓಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾ ಪ್ರದರ್ಶನದ ವೇಳೆ ಈ  ಘಟನೆ ನಡೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 1:46 pm, Wed, 15 November 23