ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಅಗೌರವ ತೋರಿದ ಆರೋಪ; ಬಾಬಾ ರಾಮ್​ದೇವ್​ ವಿರುದ್ಧ ಎಫ್​ಐಆರ್​

|

Updated on: May 27, 2021 | 7:10 PM

ಯೋಗಗುರು ಬಾಬಾ ರಾಮ್​ದೇವ್ ಅವರು ಅಲೋಪಥಿಕ್​​ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ ಭಾರತೀಯ ವೈದ್ಯಕೀಯ ಸಂಘ ಈ ಬಗ್ಗೆ ಮೊದಲು ಆರೋಗ್ಯ ಸಚಿವ ಹರ್ಷವರ್ಧನ್​​ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಅಗೌರವ ತೋರಿದ ಆರೋಪ; ಬಾಬಾ ರಾಮ್​ದೇವ್​ ವಿರುದ್ಧ ಎಫ್​ಐಆರ್​
ಯೋಗ ಗುರು ಬಾಬಾ ರಾಮ್​ದೇವ್​
Follow us on

ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ನೀಡಿದ ದೂರಿನ ಅನ್ವಯ ಇದೀಗ ನವದೆಹಲಿಯ ಐಪಿ ಎಸ್ಟೇಟ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಬಾಬಾ ರಾಮ್​ ದೇವ್ ಅವರು ಅಲೋಫಥಿಕ್​ ವೈದ್ಯಕೀಯ ಪದ್ಧತಿಯನ್ನು ಒಂದು ಮೂರ್ಖ ವಿಜ್ಞಾನ ಎಂದು ಕರೆದ ವಿಡಿಯೋ ವೈರಲ್ ಆದಾಗಿನಿಂದ ಐಎಂಎ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಲೇ ಇದೆ. ಬಾಬಾ ರಾಮ್​ ದೇವ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದೆ.

ಯೋಗಗುರು ಬಾಬಾ ರಾಮ್​ದೇವ್ ಅವರು ಅಲೋಪಥಿಕ್​​ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ ಭಾರತೀಯ ವೈದ್ಯಕೀಯ ಸಂಘ ಈ ಬಗ್ಗೆ ಮೊದಲು ಆರೋಗ್ಯ ಸಚಿವ ಹರ್ಷವರ್ಧನ್​​ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಅದಾದ ಬಳಿಕ ಬಾಬಾ ರಾಮ್​ ದೇವ್​ಗೆ ಪತ್ರ ಬರೆದಿದ್ದ ಹರ್ಷವರ್ಧನ್​, ಅಲೋಪಥಿಕ್​ಗೆ ಅವಮಾನ ಮಾಡುವ ಮೂಲಕ ಇಡೀ ದೇಶದ ಭಾವನೆಗೆ ಧಕ್ಕೆ ತಂದಿದ್ದೀರಿ. ನೀವು ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಹೇಳಿದ್ದರು.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪತಂಜಲಿ ಯೋಗ ಟ್ರಸ್ಟ್​, ಬಾಬಾ ರಾಮ್​ದೇವ್​ ಅವರಿಗೆ ಅಲೋಪಥಿಕ್ ಬಗ್ಗೆ ಅಗೌರವ ಇಲ್ಲ. ಅವರು ವಾಟ್ಸ್​ಆ್ಯಪ್​​ನಲ್ಲಿ ಬಂದಿದ್ದ ಸಂದೇಶವೊಂದನ್ನು ಓದುತ್ತಿದ್ದರು ಎಂದು ಹೇಳಿತ್ತು. ಆದರೆ ಐಎಂಎ ಈ ಸಮರ್ಥನೆಯಿಂದ ಸಮಾಧಾನಗೊಂಡಿಲ್ಲ. ರಾಮ್​ ದೇವ್ ವಿರುದ್ಧ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆಯನ್ನು ಹೂಡಿದೆ. ಇದೀಗ ಪೊಲೀಸರಿಗೂ ದೂರು ನೀಡಿದ್ದು, ಎಫ್​​ಐಆರ್ ದಾಖಲಾಗಿದೆ.

ಇದನ್ನೂ ಓದಿ: Cyclone Yaas ಯಾಸ್ ಚಂಡಮಾರುತದ ಪರಿಣಾಮಗಳ ಬಗ್ಗೆ ನಾಳೆ ಮೋದಿ ಜತೆ ಅವಲೋಕನ ಸಭೆ ನಡೆಸಲಿದ್ದಾರೆ ಮಮತಾ ಬ್ಯಾನರ್ಜಿ