ಗಡಿ ಬಿಟ್ಟು ಹಿಂದೆ ಸರಿಯಲು ‘ಡ್ರ್ಯಾಗನ್’ ಸೇನೆ ಗ್ರೀನ್ ಸಿಗ್ನಲ್!

|

Updated on: Jun 24, 2020 | 7:00 AM

ದೆಹಲಿ: ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಬಾರ್ಡರ್ ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಲೆಪ್ಟಿನೆಂಟ್ ಜನರಲ್‌ ನಡುವೆ ನಡೆದ ಮಾತುಕತೆ ಸಕ್ಸಸ್ ಆಗಿದ್ದು, 2 ದೇಶಗಳು ಗಡಿಯಿಂದ ತಮ್ಮ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ. ಅಷ್ಟಕ್ಕೂ ಕಿರಿಕ್ ಚೀನಾ ಇಷ್ಟು ಸುಲಭವಾಗಿ ಸಂಧಾನಕ್ಕೆ ಸೈ ಅಂದಿದ್ದು ಯಾಕೆ? ಚೀನಾ ಮತ್ತೆನಾದ್ರೂ ಖತರ್ನಾಕ್ ಪ್ಲ್ಯಾನ್ ಮಾಡಿದೆಯಾ? ಗಡಿಯಲ್ಲಿ ಕಿರಿಕ್, ವ್ಯಾಪರದಲ್ಲೂ ಕಿರಿಕ್, ಇನ್ನೂ ವಿಶ್ವಸಂಸ್ಥೆ ವಿಚಾರಕ್ಕೆ ಬಂದ್ರೆ ಭಾರತದ ವಿರುದ್ಧ ಬರೀ ಕಿರಿ […]

ಗಡಿ ಬಿಟ್ಟು ಹಿಂದೆ ಸರಿಯಲು ‘ಡ್ರ್ಯಾಗನ್’ ಸೇನೆ ಗ್ರೀನ್ ಸಿಗ್ನಲ್!
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಬಾರ್ಡರ್ ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಲೆಪ್ಟಿನೆಂಟ್ ಜನರಲ್‌ ನಡುವೆ ನಡೆದ ಮಾತುಕತೆ ಸಕ್ಸಸ್ ಆಗಿದ್ದು, 2 ದೇಶಗಳು ಗಡಿಯಿಂದ ತಮ್ಮ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ. ಅಷ್ಟಕ್ಕೂ ಕಿರಿಕ್ ಚೀನಾ ಇಷ್ಟು ಸುಲಭವಾಗಿ ಸಂಧಾನಕ್ಕೆ ಸೈ ಅಂದಿದ್ದು ಯಾಕೆ? ಚೀನಾ ಮತ್ತೆನಾದ್ರೂ ಖತರ್ನಾಕ್ ಪ್ಲ್ಯಾನ್ ಮಾಡಿದೆಯಾ?

ಗಡಿಯಲ್ಲಿ ಕಿರಿಕ್, ವ್ಯಾಪರದಲ್ಲೂ ಕಿರಿಕ್, ಇನ್ನೂ ವಿಶ್ವಸಂಸ್ಥೆ ವಿಚಾರಕ್ಕೆ ಬಂದ್ರೆ ಭಾರತದ ವಿರುದ್ಧ ಬರೀ ಕಿರಿ ಕಿರಿ, ಕಿರಿಕಿರಿ. ಯಾಕಂದ್ರೆ ಇದು ಚೀನಾಗೆ ಹುಟ್ಟುತ್ತಲೇ ಬಂದ ರೋಗ. ಅದರಲ್ಲೂ ಭಾರತವನ್ನ ಸಿಕ್ಕಾಪಟ್ಟೆ ದ್ವೇಷಿಸೋ ಚೀನಾಗೆ ಈಗೀಗ ಸ್ವಲ್ಪ ಬುದ್ಧಿ ಬಂದಂತೆ ಕಾಣ್ತಿದೆ. ಗಡಿಯಲ್ಲಿ ಚೀನಾ ಯೋಧರ ಸಾವಿನ ನಂತರ ‘ಡ್ರ್ಯಾಗನ್ ನಾಡು’ ಚೀನಾ ಥಂಡಾ ಹೊಡೆದುಬಿಟ್ಟಿದೆ. ಭಾರತದ ಜೊತೆ ಯುದ್ಧಕ್ಕಿಂತ ಸಂಧಾನವೇ ಬೆಟರ್ ಅಂತಿದೆ.

ಅಂತೂ ಬದಲಾಯಿತು ಸಂದಿಗ್ಧ ಪರಿಸ್ಥಿತಿ!
ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಇದೆ. ಜೂನ್‌ 15 ರಂದು ಭಾರತ-ಚೀನಾ ಸೈನಿಕರ ಮಧ್ಯೆ ಸಂಭವಿಸಿದ ಘರ್ಷಣೆ ನಂತರ ಭಾರತ ಅಲರ್ಟ್ ಆಗಿದ್ದು, ಯುದ್ಧ ವಿಮಾನ ಹಾಗೂ ಕ್ಷಿಪಣಿಗಳನ್ನು ಗಡಿಗೆ ಕಳಿಸಿದೆ. ವೈರಿಪಡೆಯ ರುಂಡ ಚೆಂಡಾಡಲು ಸೇನೆ ಸಿದ್ಧವಾಗಿದೆ. ಇಂಥ ಹೊತ್ತಲ್ಲೇ ಭಾರತ ಮತ್ತು ಚೀನಾ ಸೇನೆಗಳ ಲೆಫ್ಟಿನೆಂಟ್ ಜನರಲ್ಸ್ ಮಧ್ಯೆ ಸುದೀರ್ಘ 11 ಗಂಟೆಗಳ ಮಾತುಕತೆ ನಡೆದಿದೆ.

ಪೂರ್ವ ಲಡಾಖ್‌ನ ‘ಚೂಸೂಲ್‌ ಮೋಲ್ಡ್‌’ನಲ್ಲಿ ನಡೆದ ಮಾತುಕತೆಯಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್, ಚೀನಾ ಲೆಫ್ಟಿನೆಂಟ್ ಲೀಯೂ ಲಿನ್ ಭಾಗವಹಿಸಿದ್ದರು. ಸದ್ಯದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಎರಡೂ ಸೇನೆಗಳು ಗಡಿ ಬಿಕ್ಕಟ್ಟಿನ ಶಮನಕ್ಕೆ ಸಹಮತ ಸೂಚಿಸಿವೆ. ಗಡಿಯಿಂದ ತಮ್ಮ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಒಪ್ಪಿವೆ.

ಇದು ಜಸ್ಟ್ ಟ್ರೇಲರ್.. ಮುಂದಿದೆ ‘ಸೆಕೆಂಡ್ ಶೋ’..!
ಯೆಸ್ ಇದೀಗ ನಡೆದಿರುವ ಸಂಧಾನ ಭಾರತದ ಪಾಲಿಗೆ ಮಹತ್ವದ್ದು. ಯಾಕಂದ್ರೆ ಒಪ್ಪಂದದ ಪ್ರಕಾರ ಚೀನಾ ‘ಪಂಗಾಂಗೋ ತ್ಸೋ’ ಸರೋವರದ ಸಮೀಪ ಫಿಂಗರ್‌ 4ರವರೆಗೂ ಭಾರತದ ಭೂಮಿಯನ್ನ ಅತಿಕ್ರಮಿಸಿಕೊಂಡಿತ್ತು. ಈಗ ನಡೆದಿರುವ ಮಾತುಕತೆಯಂತೆ ಇಲ್ಲಿಂದ ಚೀನಾ ಸೇನೆ ಹಿಂದೆ ಸರಿಯಬೇಕಾಗುತ್ತೆ.

ಪೂರ್ವ ಲಡಾಖ್‌ನ ಎಲ್ಲಾ ಏರಿಯಾಗಳಿಂದ ಎರಡೂ ಸೇನೆಗಳು ಹಿಂದೆ ಸರಿಯುವ ವಿಧಾನಗಳ ಬಗ್ಗೆ ಚರ್ಚೆ ನಡೆಸ್ತಿವೆ. ಹೀಗಾಗಿ ಈ ಮಾತುಕತೆ ಮುಂದುವೆರಯಲಿದೆ. ಮುಖ್ಯವಾಗಿ ಪಂಗಾಂಗೋ ತ್ಸೋ ಸರೋವರದಿಂದ ಹಿಂದೆ ಸರಿಯಲು ಚೀನಾ ಒಪ್ಪಬೇಕಾದ ಒತ್ತಡಕ್ಕೆ ಸಿಕಿದೆ. ಈಗ ಗಡಿಯಲ್ಲಿ ನಡೆದಿರುವ ಹಿಂಸಾಚಾರದಿಂದ ಚೀನಾ ಕೂಡ ಕಂಗಾಲಾಗಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಮಟ್ಟಕ್ಕೆ ತಿರುಗಬಹುದು ಎಂಬ ಆತಂಕವೂ ಚೀನಾವನ್ನ ಕಾಡುತ್ತಿದೆ. ಹೀಗಾಗಿ ಸಂಧಾನಕ್ಕೆ ಸೈ ಎಂದಿದೆ.

ಗಡಿ ಕಂಟಕ ಮುಗಿಯುತ್ತಿದ್ದಂತೆ ನಡೆಯಲಿದ್ಯಾ ಸೈಬರ್ ದಾಳಿ?
ಹೌದು ಇಂಥದ್ದೊಂದು ಚರ್ಚೆ ಹುಟ್ಟಲು ಕಾರಣ ಸಿಂಗಾಪುರ ಕಂಪನಿಯಿಂದ ಸಿಕ್ಕಿರುವ ಮಾಹಿತಿ. ಭಾರತದ ಗಡಿಯಲ್ಲಿ ಮೊದಲಿಗೆ ಚೀನಾದಿಂದ ದಾಳಿ ನಡೆದಿದ್ದು, ಇದಾದ ನಂತರ ಸದ್ಯ ಸಂಧಾನವೂ ನಡೆಯುತ್ತಿದೆ. ಇಷ್ಟೆಲ್ಲದರ ಮಧ್ಯೆ ಸೈಬರ್ ದಾಳಿಗೆ ಚೀನಾ ಸಂಚು ರೂಪಿಸಿದೆ ಎನ್ನಲಾಗ್ತಿದೆ. ಈ ಕುರಿತು ಭಾರತಕ್ಕೆ ಸಿಂಗಾಪುರ ಕಂಪನಿ ಮಾಹಿತಿ ನೀಡಿದೆ. ಮಾಹಿತಿಯನ್ನ ಮಹಾರಾಷ್ಟ್ರ ಸೈಬರ್ ಇಲಾಖೆ ಖಚಿತಪಡಿಸಿದೆ.

3-4 ದಿನದಲ್ಲಿ ಬರೋಬ್ಬರಿ 40 ಸಾವಿರದ 300 ಬಾರಿ ಸೈಬರ್ ದಾಳಿಗೆ ಚೀನಾ ಹ್ಯಾಕರ್ಸ್ ಯತ್ನಿಸಿದ್ದಾರಂತೆ. ಇದೇ ರೀತಿ ಇತ್ತೀಚೆಗೆ ಆಸಿಸ್ ಮೇಲೂ ಸೈಬರ್ ದಾಳಿ ನಡೆದಿತ್ತು. ಚೀನಾ ನಡೆಯನ್ನು ಆಸ್ಟ್ರೇಲಿಯಾ ವಿರೋಧಿಸಿದ್ದಕ್ಕೆ ಆಸ್ಟ್ರೇಲಿಯಾ ಮೇಲೆ ಸೈಬರ್ ದಾಳಿ ನಡೆದಿತ್ತು. ಆಸ್ಟ್ರೇಲಿಯಾದ ಪ್ರಮುಖ ಇಲಾಖೆ ಹಾಗೂ ಕಂಪನಿಗಳ ವೆಬ್​ಸೈಟ್ಸ್ ಹ್ಯಾಕ್ ಆಗಿದ್ದವು. ಇದೀಗ ಭಾರತದ ಮೇಲೂ ಚೀನಾ ಹ್ಯಾಕರ್ಸ್ ಗ್ಯಾಂಗ್ ಇಂತಹದ್ದೇ ಪ್ರಯೋಗ ಮಾಡಿ, ಹ್ಯಾಕ್ ಮಾಡಲು ಯತ್ನಿಸುತ್ತಿದೆ.

ಒಟ್ನಲ್ಲಿ ಗಡಿಯಲ್ಲಿ ವಾತಾವರಣ ತಿಳಿಯಾಗುತ್ತಿದೆ. ನಿನ್ನೆ ಭಾರತ-ರಷ್ಯಾ ಹಾಗೂ ಚೀನಾ ನಡುವೆ ತ್ರಿಪಕ್ಷೀಯ ಮಾತುಕತೆ ಕೂಡ ನಡೆದಿದೆ. ಇದೇ ಸಂದರ್ಭದಲ್ಲಿ ರಷ್ಯಾ ಎರಡೂ ದೇಶಗಳ ಬಗ್ಗೆಯೂ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ ಎಂದಿದೆ. ಭಾರತ ಹಾಗೂ ಚೀನಾ ತಾವೇ ಕೂತು ಗಡಿಸಮಸ್ಯೆ ಇತ್ಯರ್ಥಪಡಿಸಿಕೊಳ್ಳುತ್ತವೆ ಅನ್ನೋ ಮೂಲಕ ಅಮೆರಿಕಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದೆ. ಭಾರತ, ರಷ್ಯಾ, ಚೀನಾ ಮಧ್ಯೆ ವರ್ಚ್ಯುವಲ್ ಸಭೆ ಮುಗಿಯುತ್ತಿದ್ದಂತೆ, ಗಡಿಯಲ್ಲೂ ಶಾಂತಿ ನೆಲೆಸುವ ಮುನ್ಸೂಚನೆ ಸಿಕ್ಕಿರುವುದು ನೆಮ್ಮದಿಯ ಸಂಗತಿ.

Published On - 6:56 am, Wed, 24 June 20