ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ

|

Updated on: Jul 31, 2020 | 9:30 PM

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ. ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ […]

ಭಾರತದ ಮೊಬೈಲ್‌ ಕ್ರಾಂತಿಗೆ ಈಗ 25 ವರ್ಷ
Follow us on

ನವದೆಹಲಿ: ಭಾರತದಲ್ಲಿ ಮೊಬೈಲ್‌ ಸಂವಹನದ ಆರಂಭಕ್ಕೆ ಈಗ 25 ವರ್ಷಗಳಾಗಿವೆ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ 1995ರ ಜುಲೈ 31ರಂದು ಮೊದಲ ಮೊಬೈಲ್‌ ಕರೆಯನ್ನು ಮಾಡಲಾಗಿತ್ತು. ಅಂದಿನಿಂದ ಆರಂಭವಾದ ದೂರಸಂವಹನ ಕ್ರಾಂತಿಗೆ ಈಗ 25ವರ್ಷಗಳಾಗಿವೆ.

ಹೌದು 1995ರ ಜುಲೈ 31ರಂದು ಭಾರತದಲ್ಲಿ ಮೊದಲ ದೂರವಾಣಿ ಕರೆ ಮಾಡಲಾಗಿತ್ತು. ಕೊಲ್ಕತಾದ ರೈಟರ್ಸ್‌ ಬಿಲ್ಡಿಂಗ್‌ನಿಂದ ಅಂದಿನ ಪಶ್ಚಿಮ್‌ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಆಗಿನ ಕೇಂದ ಸಂವಹನ ಸಚಿವ ಸುಖರಾಮ್‌ ಅವರಿಗೆ ಮೊದಲ ಕರೆ ಮಾಡುವ ಮೂಲಕ ಭಾರತದಲ್ಲಿ ಮೊಬೈಲ್‌ ಕ್ರಾಂತಿಗೆ ನಾಂದಿ ಹಾಡಿದ್ದರು.

ಅಂದು ಆರಂಭವಾದ ಮೊಬೈಲ್‌ ಕ್ರಾಂತಿ ಭಾರತವನ್ನು ಈಗ ವಿಶ್ವದ ಎರಡನೇ ಮೊಬೈಲ್‌ ಬಳಕೆದಾರರ ಸ್ಥಾನಕ್ಕೆ ಕೊಂಡೊಯ್ದಿದೆ. ಭಾರತದ ಖ್ಯಾತ ಉದ್ಯಮಿ ಬಿ ಕೆ ಬಿರ್ಲಾ ಆಸ್ಟ್ರೇಲಿಯಾದ ಕಂಪನಿಯ ಸಹಬಾಗಿತ್ವದಲ್ಲಿ ಭಾರತದಲ್ಲಿ ಮೊದಲ ಮೊಬೈಲ್‌ ಸಂವಹನಕ್ಕೆ ನಾಂದಿ ಹಾಡಿದ್ದರು.

ಮೊದಲು ಉಪಯೋಗಿಸಿದ ಮೊಬೈಲ್‌ ನೋಕಿಯಾ ಕೂಡಾ ಆರಂಭದ ದಿನಗಳಲ್ಲಿ ಭಾರತದಲ್ಲಿ ಭಾರೀ ಪಾಪುಲರ್‌ ಆಗಿತ್ತು. ಇದಾದ ನಂತರ ಮಾರುಕಟ್ಟೆಗೆ ರಿಲಯನ್ಸ್‌ನ ಜಿಯೋ ಆಗಮನದೊಂದಿಗೆ ಇಂಟರ್‌ನೆಟ್‌ ಮೊಬೈಲ್‌ಗಳು ಪಾಪುಲರ್‌ ಆಗಿ ಮೊಬೈಲ್‌ ಕ್ರಾಂತಿಯೇ ಭಾರತದಲ್ಲಿ ನಡೆದಿದೆ.