ದೇಶದಲ್ಲಿ 7,200ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಪ್ರಕರಣ; ದೆಹಲಿ ಹೈಕೋರ್ಟ್​ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್​

|

Updated on: May 21, 2021 | 2:09 PM

ದೇಶದಲ್ಲಿ ಬ್ಲ್ಯಾಕ್ ಫಂಗಸ್​ನಿಂದ ಸಾವಿಗೀಡಾಗಿರುವ 219ಕ್ಕೂ ಅಧಿಕ ಮಂದಿ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 90 ಜನ ಮೃತಪಟ್ಟಿದ್ದಾರೆ. ಗುಜರಾತ್​ನಲ್ಲಿ 61, ಮಧ್ಯಪ್ರದೇಶದಲ್ಲಿ 31, ತೆಲಂಗಾಣದಲ್ಲಿ 10, ಹರಿಯಾಣದಲ್ಲಿ 8, ಉತ್ತರ ಪ್ರದೇಶದಲ್ಲಿ 8, ಬಿಹಾರದಲ್ಲಿ 2, ಚತ್ತೀಸ್​ಗಡ 1 ಹಾಗೂ ದೆಹಲಿ ‌1 ಸಾವು ಸಂಭವಿಸುವುದು ಖಾತರಿಯಾಗಿದೆ.

ದೇಶದಲ್ಲಿ 7,200ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಪ್ರಕರಣ; ದೆಹಲಿ ಹೈಕೋರ್ಟ್​ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್​
ಸಾಂಕೇತಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಜತೆಗೆ ಬ್ಲ್ಯಾಕ್​ ಫಂಗಸ್​ ಸೋಂಕು ಸಹ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬ್ಲ್ಯಾಕ್​ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ದೆಹಲಿ ಹೈಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದು ದೇಶದಲ್ಲಿ 7,200ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಸೋಂಕಿತರ ಪೈಕಿ ಸುಮಾರು 219ಕ್ಕೂ ಅಧಿಕ ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ರಾಜಸ್ಥಾನ ಸೇರಿದಂತೆ ಕೆಲವು ಕಡೆ ಬ್ಲ್ಯಾಕ್​ ಫಂಗಸ್ ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಆಯಾ ರಾಜ್ಯದ ಸರ್ಕಾರಗಳು ಘೋಷಿಸಿವೆ.

ದೇಶದಲ್ಲಿ ಬ್ಲ್ಯಾಕ್ ಫಂಗಸ್​ನಿಂದ ಸಾವಿಗೀಡಾಗಿರುವ 219ಕ್ಕೂ ಅಧಿಕ ಮಂದಿ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 90 ಜನ ಮೃತಪಟ್ಟಿದ್ದಾರೆ. ಗುಜರಾತ್​ನಲ್ಲಿ 61, ಮಧ್ಯಪ್ರದೇಶದಲ್ಲಿ 31, ತೆಲಂಗಾಣದಲ್ಲಿ 10, ಹರಿಯಾಣದಲ್ಲಿ 8, ಉತ್ತರ ಪ್ರದೇಶದಲ್ಲಿ 8, ಬಿಹಾರದಲ್ಲಿ 2, ಚತ್ತೀಸ್​ಗಡ 1 ಹಾಗೂ ದೆಹಲಿ ‌1 ಸಾವು ಸಂಭವಿಸುವುದು ಖಾತರಿಯಾಗಿದೆ.

ನಿನ್ನೆ (ಮೇ 20) ಬ್ಲ್ಯಾಕ್​ ಫಂಗಸ್​ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೆ ಪ್ರಮುಖ ಸೂಚನೆಯೊಂದನ್ನು ನೀಡಿರುವ ಕೇಂದ್ರ ಸರ್ಕಾರ 1897ರ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಮ್ಯೂಕೋರ್ಮೈಕೋಸಿಸ್​ ಸೋಂಕನ್ನು ಗುರುತಿಸುವಂತೆ ತಿಳಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿರುವ ಲೋಕ ನಾಯಕ್ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳನ್ನು ಬ್ಲ್ಯಾಕ್ ಫಂಗಸ್​ ಚಿಕಿತ್ಸಾ ಕೇಂದ್ರಗಳೆಂದು ತಿಳಿಸಿದ್ದಾರೆ.

ಯಾವ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಬ್ಲ್ಯಾಕ್​ ಫಂಗಸ್​ ಪ್ರಕರಣಗಳಿವೆ
ಮಹಾರಾಷ್ಟ್ರ: 1,500 ಪ್ರಕರಣಗಳು, 90 ಸಾವು
ಗುಜರಾತ್: 1,163 ಪ್ರಕರಣಗಳು, 61ಸಾವು
ಮಧ್ಯಪ್ರದೇಶ: 575 ಪ್ರಕರಣಗಳು, 31 ಸಾವು
ಹರಿಯಾಣ: 268 ಪ್ರಕರಣಗಳು, 08 ಸಾವು
ದೆಹಲಿ: 203 ಪ್ರಕರಣಗಳು, 01 ಸಾವು
ಉತ್ತರ ಪ್ರದೇಶ: 169 ಪ್ರಕರಣಗಳು, 08 ಸಾವು
ಬಿಹಾರ: 103ಪ್ರಕರಣಗಳು, 02 ಸಾವು
ಚತ್ತೀಸ್​ಗಡ: 101 ಪ್ರಕರಣಗಳು, 01 ಸಾವು
ಕರ್ನಾಟಕ: 97 ಪ್ರಕರಣಗಳು, 00 ಸಾವು
ತೆಲಂಗಾಣ: 90 ಪ್ರಕರಣಗಳು, 10 ಸಾವು

(India has more than 7200 Black fungus cases Union Government affidavit to Delhi High Court clarifies)

ಇದನ್ನೂ ಓದಿ:
ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಇವೆ..ಸಾವಿನ ವರದಿಯಾಗಿಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್​ 

ನಿಮಗೆ ಬ್ಲ್ಯಾಕ್ ಫಂಗಸ್ ಇದೆಯೋ, ಇಲ್ಲವೋ ಗುರುತಿಸುವುದು ಹೇಗೆ? ಏನು ಕ್ರಮ ತೆಗೆದುಕೊಳ್ಳಬೇಕು? ಚಿಕಿತ್ಸಾ ವಿಧಾನವೇನು?

Published On - 8:51 am, Fri, 21 May 21