ದೆಹಲಿ ಸೆಪ್ಟೆಂಬರ್ 12: ಇತ್ತೀಚೆಗೆ ಮುಕ್ತಾಯಗೊಂಡ G20 ಶೃಂಗಸಭೆಯಲ್ಲಿ (G20 Summit), ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭಾರತವನ್ನು ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೆ ಭೂಮಿ ಮತ್ತು ಸಮುದ್ರ ಮಾರ್ಗಗಳ ಮೂಲಕ ಸಂಪರ್ಕಿಸುವ ಹೊಸ ವ್ಯಾಪಾರ ಕಾರಿಡಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ‘ಭಾರತ-ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್’ (India-Middle East Europe Economic Corridor)ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆಯ ಪಾಲುದಾರಿಕೆಯ ಭಾಗವಾಗಿದೆ. ಘೋಷಣೆಯ ನಂತರ, ಉದ್ದೇಶಿತ ಕಾರಿಡಾರ್‌ನ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಅನಿಮೇಟೆಡ್ ಕ್ಲಿಪ್‌ಗಳು ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೆ ಸರಕುಗಳನ್ನು ಹೇಗೆ ಸಾಗಿಸಲಾಗುತ್ತದೆ ಎಂಬುದನ್ನು ತೋರಿಸುತ್ತವೆ. ಇದು ಇಲ್ಲಿನ ವ್ಯಾಪಾರಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (BRI) ಗೆ ನೇರ ಸವಾಲಾಗಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಅನಿಮೇಟೆಡ್ ವಿಡಿಯೊ ಭಾರತದ ಪಶ್ಚಿಮ ಬಂದರಿನಿಂದ ಹೊರಟು ಓಮನ್ ಕೊಲ್ಲಿಯ ಕಡೆಗೆ ಸಾಗುತ್ತಿರುವುದನ್ನು ತೋರಿಸುತ್ತದೆ. ಇದು ದುಬೈನಲ್ಲಿ ನಿಂತು ನಂತರ ಸರಕು ಸೌದಿ ಅರೇಬಿಯಾ, ಜೋರ್ಡಾನ್ ಮತ್ತು ಇಸ್ರೇಲ್ ಮೂಲಕ ಚಲಿಸಲು ರೈಲು ಮಾರ್ಗವನ್ನು ಬಳಸುತ್ತದೆ. ಇದು ಮತ್ತೆ ಹೈಫಾದಿಂದ ಯುರೋಪ್ ತಲುಪಲು ಸಮುದ್ರ ಮಾರ್ಗವನ್ನು ಬಳಸುತ್ತದೆ. ಸೈಪ್ರಸ್ ಅನ್ನು ಮುಟ್ಟಿದ ನಂತರ, ಅದು ಗ್ರೀಸ್ ಅನ್ನು ತಲುಪುತ್ತದೆ. ಆಗ್ನೇಯ ಯುರೋಪ್‌ನಲ್ಲಿ ಸೆರ್ಬಿಯಾ ಮತ್ತು ಕ್ರೊಯೇಷಿಯಾಕ್ಕೆ ಭೂ ಮಾರ್ಗದ ಮೂಲಕ ಸರಕುಗಳನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿದೆ ಎಂಬುದನ್ನು ವಿಡಿಯೊ ತೋರಿಸಿದೆ.
ಸರಕು ಆಸ್ಟ್ರಿಯಾವನ್ನು ಪ್ರವೇಶಿಸಿ ಜರ್ಮನಿಯಲ್ಲಿ ಪ್ರಯಾಣವನ್ನು ಕೊನೆಗೊಳಿಸುತ್ತದೆ. 8,158 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸುತ್ತದೆ ಎಂದು ವಿಡಿಯೊದಲ್ಲಿ ತೋರಿಸಲಾಗಿದೆ.
Proposed India-Middle East-Europe trade corridor explained in this video. pic.twitter.com/ndshkZOji0
— Vice Admiral Arun Kumar Singh (@subnut) September 11, 2023
ಕಾರಿಡಾರ್ ಭಾರತ ಮತ್ತು ಯುರೋಪ್ ಅನ್ನು ಹತ್ತಿರಕ್ಕೆ ತರುವುದಲ್ಲದೆ, ಅಗ್ಗದ ಮತ್ತು ವೇಗದ ವ್ಯಾಪಾರವನ್ನು ಸಕ್ರಿಯಗೊಳಿಸುತ್ತದೆ. ಈ ಮಾರ್ಗವು ಮಹತ್ವದ್ದಾಗಿದೆ. ಏಕೆಂದರೆ ಇದು ಚೀನಾದ BRI ಗೆ ಪರ್ಯಾಯವಾಗಿದೆ.ಅಷ್ಟೇ ಅಲ್ಲದೆ ಭಾಗವಹಿಸುವ ದೇಶಗಳನ್ನು ಚೀನಾದ ಸಾಲದ ಬಲೆಗೆ ಬೀಳುವಂತೆ ಒತ್ತಾಯಿಸುವುದಿಲ್ಲ. ಇದು ನೀರು ಮತ್ತು ರೈಲ್ವೆ ಜಾಲಗಳ ಮೂಲಕ ವ್ಯಾಪಾರ, ಇಂಧನ ಮತ್ತು ಸಂವಹನದ ಕ್ರಾಂತಿಯಾಗಿರುತ್ತದೆ.
ಕಾರಿಡಾರ್ ಅನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುವುದು. ಮೊದಲನೆಯದು (ಪೂರ್ವ ಕಾರಿಡಾರ್) ಭಾರತ ಮತ್ತು ಪಶ್ಚಿಮ ಏಷ್ಯಾವನ್ನು ಸಂಪರ್ಕಿಸುತ್ತದೆ. ಎರಡನೇ ಭಾಗವು ಪಶ್ಚಿಮ ಏಷ್ಯಾವನ್ನು ಯುರೋಪ್ ನೊಂದಿಗೆ ಸಂಪರ್ಕಿಸುತ್ತದೆ.
ಈ ಉದ್ದೇಶಿತ ಕಾರಿಡಾರ್ ಕಂಪನಿಗಳಿಗೆ ಮುಂಬೈನಿಂದ ಯುರೋಪ್‌ಗೆ ತಮ್ಮ ಕಂಟೈನರ್‌ಗಳನ್ನು ಸಾಗಿಸಲು ಸುಲಭವಾಗುತ್ತದೆ. ಯಾಕೆಂದರೆ ಈ ಮೊದಲು ಹೇಗೆ ಸಾಗಿಸಬೇಕಾದರೆ ಸೂಯೆಜ್ ಕಾಲುವೆಯ ಮೂಲಕ ಹೋಗಬೇಕಾಗಿತ್ತು, ಅದು ಉದ್ದವಾಗಿದೆ. ಈ ಕಾರಿಡಾರ್ ಸೂಯೆಜ್ ಕಾಲುವೆಯ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಕಾರಿಡಾರ್‌ಗಾಗಿ ಹೈಫಾ ದುಬೈನಿಂದ ಹೈಫಾಗೆ ರೈಲು ಮಾರ್ಗವನ್ನು ನಿರ್ಮಿಸಲಾಗುವುದು. ಇದು ಅಸ್ತಿತ್ವದಲ್ಲಿರುವ ವ್ಯಾಪಾರವನ್ನು 40 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ವಿಶೇಷ ಉಡುಗೊರೆ; ಗಿಫ್ಟ್ ಬಾಕ್ಸ್ನಲ್ಲಿ ಏನೆಲ್ಲಾ ಇತ್ತು?
ಭಾರತವು ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕೆ ಸಂಪರ್ಕಿಸುವ ಕಾರಿಡಾರ್‌ನ ಮಧ್ಯಭಾಗದಲ್ಲಿರುತ್ತದೆ. ಇದು ಮೂಲಸೌಕರ್ಯ ಮತ್ತು ಸಂವಹನವನ್ನು ಸುಧಾರಿಸುವುದಲ್ಲದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹೊಸ ಪೂರೈಕೆ ಸರಪಳಿಗಳನ್ನು ಸೃಷ್ಟಿಸುತ್ತದೆ. ಈ ಕಾರಿಡಾರ್ 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಸಹಾಯ ಮಾಡುವ ಪ್ರಮುಖ ಹೆಜ್ಜೆಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ