ಶುಕ್ರವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ಹಾಗೂ ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಅಂಕಿಅಂಶವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರೋನ ವೈರಸ್‌ನ ಒಮಿಕ್ರಾನ್ ರೂಪಾಂತರವು ದೇಶದಲ್ಲಿ ತೀವ್ರವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1000ದ ಗಡಿ ದಾಟಿದ್ದು, ಇದುವರೆಗೆ 1,270 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು 374 ರೋಗಿಗಳು ಚೇತರಿಸಿಕೊಂಡು, ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಇದೇ ವೇಳೆ ತಿಳಿಸಲಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕ್ರಮವಾಗಿ 450 ಮತ್ತು 320 ಪ್ರಕರಣಗಳು ವರದಿಯಾಗಿವೆ. ಗುರುವಾರ ರಾತ್ರಿ ಬಿಹಾರದಲ್ಲಿ ಒಮಿಕ್ರಾನ್ನ ಮೊದಲ ಪ್ರಕರಣ ವರದಿಯಾಗಿದೆ.
ಈ ನಡುವೆ, ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 16,764 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸತತ ಮೂರನೇ ದಿನವೂ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ದೇಶದಲ್ಲಿ ಇದುವರೆಗೆ ಒಟ್ಟು 3,48,38,804 ಜನರಿಗೆ ಸೋಂಕು ಕಾಣಿಸಿಕೊಂಡಂತಾಗಿದೆ. 7,500 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದು, 220 ಜನರು ಒಂದೇ ದಿನದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈ ವರೆಗೆ ಒಟ್ಟು 3,42,66,363 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 481,080 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು ಸುಮಾರು 9,000 ರಷ್ಟು ಹೆಚ್ಚಾಗಿದ್ದು, 91,361 ರಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
COVID19 | India reports 16,764 new cases, 7,585 recoveries and 220 deaths in the last 24 hours.
Active caseload currently stands at 91,361. Recovery Rate currently at 98.36%
Omicron case tally stands at 1,270. pic.twitter.com/zbKKRiP4kW
— ANI (@ANI) December 31, 2021
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಕಳೆದ 24 ಗಂಟೆಗಳಲ್ಲಿ 12,50,837 ಮಾದರಿಗಳನ್ನು ಕೋವಿಡ್ -19 ವರದಿಗಾಗಿ ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 66,65,290 ಡೋಸ್‌ಗಳನ್ನು ನೀಡುವುದರೊಂದಿಗೆ ದೇಶದ ವ್ಯಾಕ್ಸಿನೇಷನ್ 1.44 ಬಿಲಿಯನ್ ಜನರನ್ನು ತಲುಪಿದಂತಾಗಿದೆ. ವಯಸ್ಕ ಜನಸಂಖ್ಯೆಯ ಶೇಕಡಾ 90 ರಷ್ಟು ಜನರಿಗೆ ಮೊದಲ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
With the administration of 66,65,290 vaccine doses in the last 24 hrs, India’s COVID-19 vaccination coverage exceeds 144.54 Cr. The recovery rate stands at 98.36%. Weekly positivity Rate at 0.89% remains less than 1% from last 47 days: Union Health Ministry
— ANI (@ANI) December 31, 2021
ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಲವು ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಬಿಗಿ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿವೆ. ಪುದುಚೇರಿ ಹಾಗೂ ಹರ್ಯಾಣ ಇತ್ತೀಚೆಗೆ ನೈಟ್ ಕರ್ಫ್ಯೂ ಹೇರಿವೆ.
ಇದನ್ನೂ ಓದಿ:
ಮಕ್ಕಳ ಮೇಲೆ ಒಮಿಕ್ರಾನ್ ಪರಿಣಾಮ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ