India Covid Updates: ಭಾರತದಲ್ಲಿ ಬರೋಬ್ಬರಿ 12,213 ಮಂದಿಗೆ ಕೊರೊನಾ ಸೋಂಕು, 11 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆ ಬರುವ ಸಂಭವ ಹೆಚ್ಚಿದ್ದು, ಕಳೆದ 24 ಗಂಟೆಗಳಲ್ಲಿ 12,213 ಮಂದು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಜೂನ್ 15ರ ಬೆಳಗ್ಗೆ 8 ಗಂಟೆಯಿಂದ ಜೂನ್ 16ರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಸಕ್ರಿಯ ಪ್ರಕರಣಗಳು 58,515 ಇದ್ದು, ನಿತ್ಯದ ಪಾಸಿಟಿವಿಟಿ ದರ ಶೇ.2.35ರಷ್ಟಿದೆ.

India Covid Updates: ಭಾರತದಲ್ಲಿ ಬರೋಬ್ಬರಿ 12,213 ಮಂದಿಗೆ ಕೊರೊನಾ ಸೋಂಕು, 11 ಮಂದಿ ಸಾವು
Coronavirus
Edited By:

Updated on: Jun 16, 2022 | 10:23 AM

ನವದೆಹಲಿ: ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆ ಬರುವ ಸಂಭವ ಹೆಚ್ಚಿದ್ದು, ಕಳೆದ 24 ಗಂಟೆಗಳಲ್ಲಿ 12,213 ಮಂದು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಜೂನ್ 15ರ ಬೆಳಗ್ಗೆ 8 ಗಂಟೆಯಿಂದ ಜೂನ್ 16ರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಸಕ್ರಿಯ ಪ್ರಕರಣಗಳು 58,515 ಇದ್ದು, ನಿತ್ಯದ ಪಾಸಿಟಿವಿಟಿ ದರ ಶೇ.2.35ರಷ್ಟಿದೆ.

ಇದುವರೆಗೆ 42674712 ಮಂದಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ ಬುಧವಾರ ಒಂದೇ ದಿನ 7624 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 1,95,67,37,014 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಕಳೆದ 24 ಗಮಟೆಗಳಲ್ಲಿ 15,21,942 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್​ ಕೊರೊನಾ ಲಸಿಕೆಯ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ತಮ್ಮ ಜೀವವನ್ನೇ ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ ಲಸಿಕೆಯನ್ನು ಮೊದಲು ನೀಡಲಾಗಿತ್ತು.
ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಇದೀಗ ಬೂಸ್ಟರ್​ ಡೋಸ್ ಕೂಡ ನೀಡಲಾಗುತ್ತಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us