ಮುಂಬೈ ದಾಳಿ: ಪಾಕ್ ಬಂಧಿಸಿದ್ದ ಭಯೋತ್ಪಾದಕರ ಪಟ್ಟಿಯನ್ನು ತಿರಸ್ಕರಿಸಿದ ಭಾರತ

| Updated By: ಸಾಧು ಶ್ರೀನಾಥ್​

Updated on: Nov 13, 2020 | 4:54 PM

ಕರಾಚಿ: ಪಾಕಿಸ್ತಾನ ಬಿಡುಗಡೆ ಮಾಡಿರುವ 19 ಜನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಭಾರತ ಶುಕ್ರವಾರ ತಿರಸ್ಕರಿಸಿದೆ. 2008ರ ಮುಂಬೈ ದಾಳಿಗೆ ಸಹಕರಿಸಿದ್ದರು ಎಂದು ಪಾಕ್ ಇವರನ್ನು ಬಂಧಿಸಿತ್ತು. 28 ವಿದೇಶಿಯರೂ ಸೇರಿ, 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಗೆ ಯೋಜನೆ ಮತ್ತು ಆರ್ಥಿಕ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಫೆಡರಲ್ ತನಿಖಾ ಎಜೆನ್ಸಿ (ಎಫ್ಐಎ) ಇವರನ್ನು ಬಂಧಿಸಿರುವುದಾಗಿ ತಿಳಿಸಿತ್ತು. ಬಂಧಿಸಿರುವ ಭಯೋತ್ಪಾದಕರು ದಾಳಿ ಅಯೋಜಿಸಿರುವುದನ್ನು ಪಾಕಿಸ್ತಾನ ಖಚಿತಪಡಿಸಿದೆ. ದುರ್ಘಟನೆ ನಡೆದು 12 ವರ್ಷಗಳಾದರೂ ಪಾಕ್ […]

ಮುಂಬೈ ದಾಳಿ: ಪಾಕ್ ಬಂಧಿಸಿದ್ದ ಭಯೋತ್ಪಾದಕರ ಪಟ್ಟಿಯನ್ನು ತಿರಸ್ಕರಿಸಿದ ಭಾರತ
Follow us on

ಕರಾಚಿ: ಪಾಕಿಸ್ತಾನ ಬಿಡುಗಡೆ ಮಾಡಿರುವ 19 ಜನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಭಾರತ ಶುಕ್ರವಾರ ತಿರಸ್ಕರಿಸಿದೆ. 2008ರ ಮುಂಬೈ ದಾಳಿಗೆ ಸಹಕರಿಸಿದ್ದರು ಎಂದು ಪಾಕ್ ಇವರನ್ನು ಬಂಧಿಸಿತ್ತು.

28 ವಿದೇಶಿಯರೂ ಸೇರಿ, 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಗೆ ಯೋಜನೆ ಮತ್ತು ಆರ್ಥಿಕ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಫೆಡರಲ್ ತನಿಖಾ ಎಜೆನ್ಸಿ (ಎಫ್ಐಎ) ಇವರನ್ನು ಬಂಧಿಸಿರುವುದಾಗಿ ತಿಳಿಸಿತ್ತು. ಬಂಧಿಸಿರುವ ಭಯೋತ್ಪಾದಕರು ದಾಳಿ ಅಯೋಜಿಸಿರುವುದನ್ನು ಪಾಕಿಸ್ತಾನ ಖಚಿತಪಡಿಸಿದೆ. ದುರ್ಘಟನೆ ನಡೆದು 12 ವರ್ಷಗಳಾದರೂ ಪಾಕ್ ನೊಂದವರಿಗೆ ನ್ಯಾಯ ನೀಡಿಲ್ಲ ಎಂದು ಭಾರತ ದೂರಿದೆ.

27 ಆರೋಪಿಯಾಗಳ ಮೇಲೆ ಚಾರ್ಜ್ ಶೀಟ್..
ಎಲ್ಲ 19 ಭಯೋತ್ಪಾದಕರು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಭಾರತ ನೀಡಿದ ಸುಳಿವುಗಳನ್ನು ಆಧರಿಸಿ 2019 ರ ಫೆಬ್ರವರಿಯಲ್ಲಿ ಕೇಸ್ ಫೈಲ್​ ಮಾಡಲಾಗಿತ್ತು. ಅಲ್ಲದೇ ಅಂತರಾಷ್ಟ್ರೀಯ ಒತ್ತಡವೂ ಈ ಕೇಸ್ ದಾಖಲಿಸಲು ಕಾರಣವಾಗಿತ್ತು. 27 ಆರೋಪಿಗಳ ಮೇಲೆ ಚಾರ್ಜ್ ಶೀಟ್ ದಾಖಲಿಸಿದ್ದರು.

19 ಭಯೋತ್ಪಾದಕರ ಪೈಕಿ ಅಮ್ಜದ್ ಖಾನ್ ಪಾತ್ರವೇನು?
19 ಭಯೋತ್ಪಾದಕರಲ್ಲಿ ಓರ್ವನಾಗಿರುವ ಅಮ್ಜದ್ ಖಾನ್, ಮುಂಬೈ ದಾಳಿ ನಡೆಸಲು AI ಹುಸೇನಿ ಮತ್ತು AI ಫೌಜ್ ಎಂಬ ಬೋಟ್​ಗಳನ್ನು ಖರೀದಿಸಿ ಉಗ್ರರಿಗೆ ನೀಡಿದ್ದ. ಕರಾಚಿಯ ARZ ವಾಟರ್ ಸ್ಪೋರ್ಟ್​ನಿಂದ ಲೈಫ್ ಜಾಕೆಟ್, ಯಮಹಾ ಮೊಟಾರ್ ಬೋಟ್ ಎಂಜಿನ್ ಮತ್ತು ತೇಲುವ ದೋಣಿಗಳನ್ನು ಖರೀದಿಸಿದ್ದ. ದಾಳಿಗೆ ನೆರವಾಗಲು ಸಹಕರಿಸಿದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ.

ಪಾಕ್​ಗೆ ನೀಡಿರುವ ಭಯೋತ್ಪಾದನಾ ನಿರ್ಮೂಲನೆ ಗಡುವು 2021ಕ್ಕೆ ಮುಗಿಯಲಿದೆ..
ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದೆ. ಇತರ ದೇಶಗಳ ಆರ್ಥಿಕ ಸಹಾಯ ಪಡೆಯಲು ಪಾಕ್, ಮುಂಬೈ ದಾಳಿ ಸೇರಿದಂತೆ ಹಲವು ಉಗ್ರರನ್ನು ಬಂಧಿಸಬೇಕಿದೆ. 2021 ಕ್ಕೆ ಪಾಕ್​ಗೆ, ಭಯೋತ್ಪಾದನೆ ನಿರ್ಮೂಲನೆ ಮಾಡಲು ನೀಡಿರುವ ಗಡುವು ಮುಗಿಯಲಿದೆ. ಅಷ್ಟರಲ್ಲಿ ಪಾಕ್ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸುವ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಗಾದಲ್ಲಿ ಮಾತ್ರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್​ಗೆ ಆರ್ಥಿಕ ಸಹಾಯ ದೊರಕಲಿದೆ.