ಗೃಹ ಸಚಿವ ಅಮಿತ್​ ಷಾ ಟ್ವಿಟರ್​ ಅಕೌಂಟ್​ ಲಾಕ್! ಟ್ವಿಟರ್​ ಸಂಸ್ಥೆ ನೀಡಿದ ಸ್ಪಷ್ಟನೆ ಏನು?

ದೆಹಲಿ: ಗೃಹ ಸಚಿವ ಅಮಿತ್ ಶಾ ಟ್ವಿಟ್ಟರ್ ಅಕೌಂಟ್ ಅನ್ನು ನಿನ್ನೆ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು. ಆದರೆ ತಕ್ಷಣ ಎಚ್ಚೆತ್ತ ಟ್ವಿಟರ್ ಸಂಸ್ಥೆ ಖಾತೆಯನ್ನು ಅನ್ಲಾಕ್ ಮಾಡಿದೆ. ಕಾಪಿ ರೈಟ್​ ನಿಯಮವನ್ನು ಈ ಅಕೌಂಟ್​ ಬಳಕೆದಾರರು ಉಲ್ಲಂಘಿಸಿದಕ್ಕಾಗಿ ಹಾಗೂ ಬಳಕೆದಾರರ ಅಜಾಗರೂಕತೆಯ ಕಾರಣದಿಂದ ಅಕೌಂಟ್ ಲಾಕ್ ಮಾಡಿದ್ದಾಗಿ ಅಮಿತ್ ಶಾ ಟ್ವಿಟ್ಟರ್ ಖಾತೆ ಬಗ್ಗೆ ಟ್ವಿಟರ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಚಿತ್ರದ ಹಕ್ಕು ಹೊಂದಿರುವವರ ಆಕ್ಷೇಪ.. ಅಮಿತ್ ಶಾ ಅವರ ಅಕೌಂಟಿನ ಡಿಸ್ಪ್ಲೇ ಚಿತ್ರವನ್ನು (DP) ಸಹ […]

ಗೃಹ ಸಚಿವ ಅಮಿತ್​ ಷಾ ಟ್ವಿಟರ್​ ಅಕೌಂಟ್​ ಲಾಕ್! ಟ್ವಿಟರ್​  ಸಂಸ್ಥೆ ನೀಡಿದ ಸ್ಪಷ್ಟನೆ ಏನು?
Updated By: ಸಾಧು ಶ್ರೀನಾಥ್​

Updated on: Nov 13, 2020 | 3:42 PM

ದೆಹಲಿ: ಗೃಹ ಸಚಿವ ಅಮಿತ್ ಶಾ ಟ್ವಿಟ್ಟರ್ ಅಕೌಂಟ್ ಅನ್ನು ನಿನ್ನೆ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು. ಆದರೆ ತಕ್ಷಣ ಎಚ್ಚೆತ್ತ ಟ್ವಿಟರ್ ಸಂಸ್ಥೆ ಖಾತೆಯನ್ನು ಅನ್ಲಾಕ್ ಮಾಡಿದೆ. ಕಾಪಿ ರೈಟ್​ ನಿಯಮವನ್ನು ಈ ಅಕೌಂಟ್​ ಬಳಕೆದಾರರು ಉಲ್ಲಂಘಿಸಿದಕ್ಕಾಗಿ ಹಾಗೂ ಬಳಕೆದಾರರ ಅಜಾಗರೂಕತೆಯ ಕಾರಣದಿಂದ ಅಕೌಂಟ್ ಲಾಕ್ ಮಾಡಿದ್ದಾಗಿ ಅಮಿತ್ ಶಾ ಟ್ವಿಟ್ಟರ್ ಖಾತೆ ಬಗ್ಗೆ ಟ್ವಿಟರ್ ಸಂಸ್ಥೆ ಸ್ಪಷ್ಟನೆ ನೀಡಿದೆ.

ಚಿತ್ರದ ಹಕ್ಕು ಹೊಂದಿರುವವರ ಆಕ್ಷೇಪ..
ಅಮಿತ್ ಶಾ ಅವರ ಅಕೌಂಟಿನ ಡಿಸ್ಪ್ಲೇ ಚಿತ್ರವನ್ನು (DP) ಸಹ ಟ್ವಿಟ್ಟರ್ ತೆಗೆದು ಹಾಕಿತ್ತು. ಚಿತ್ರದ ಹಕ್ಕು ಹೊಂದಿರುವವರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಫೋಟೋ ತೆಗೆಯಲಾಗಿತ್ತು ಎಂದು ಟ್ವಿಟ್ಟರ್ ತಿಳಿಸಿದೆ. ಅವರ ಟ್ವಿಟ್ಟರ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ‘ಕಾಪಿ ರೈಟ್ ಸಮಸ್ಯೆಯಿಂದಾಗಿ ಚಿತ್ರವನ್ನು ತೆಗೆಯಲಾಗಿದೆ’ ಎಂಬ ಮಾಹಿತಿ ಪ್ರದರ್ಶನವಾಗುತ್ತಿತ್ತು.

ಗೃಹ ಸಚಿವ ಅಮಿತ್​ ಷಾಗೇ ಕಾಪಿ ರೈಟ್​ ಕಾಟ!
ದೇಶದ ಗೃಹ ಮಂತ್ರಿಯ ಟ್ವಿಟ್ಟರ್ ಖಾತೆಯ ಚಿತ್ರವೇ ಕಾಪಿ ರೈಟ್ ಸಮಸ್ಯೆಯಿಂದಾಗಿ ತೆಗೆಯಲ್ಪಟ್ಟಿದೆ. ಹೀಗಾಗಿ ಟ್ವಿಟರ್​ ಬಳಕೆದಾರರು ಕಾಪಿ ರೈಟ್ ಕುರಿತು ಹೊಂದಿರಬೇಕಾದ ಜಾಗ್ರತೆಯನ್ನು ಈ ಪ್ರಸಂಗ  ಸಾರುತ್ತಿದೆ.

Published On - 3:40 pm, Fri, 13 November 20