ಪ. ಬಂಗಾಳ ಅಸೆಂಬ್ಲಿ ಚುನಾವಣೆ: ಮಮತಾ ಬ್ಯಾನರ್ಜಿಗೆ ಶುರುವಾಯ್ತು ಓವೈಸಿ ನಡುಕ!
ಅಸಾದುದ್ದೀನ್ ಓವೈಸಿ ಬಂಗಾಳಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಪಕ್ಕದ ಬಿಹಾರದಲ್ಲಿ ಎಐಎಂಐಎಂ 5 ಸೀಟ್ ಗೆದ್ದಿರುವುದು ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದೆ. ಓವೈಸಿಯ ಪ್ರಬಲ ಟಾರ್ಗೆಟ್ ದಲಿತ ಮತ್ತು ಮುಸ್ಲಿಂ ಮತಗಳು. ಪಶ್ಚಿಮ ಬಂಗಾಳ ಅಸೆಂಬ್ಲಿಯ 294 ಸೀಟುಗಳಲ್ಲಿ 100-110 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳ ಪ್ರಾಬಲ್ಯವಿದೆ. ಇಷ್ಟು ದಿನ ಈ ಎಲ್ಲ ಮತಗಳೂ ಟಿಎಂಸಿ ಬುಟ್ಟಿಗೆ ಬಂದುಬೀಳುತ್ತಿದ್ದವು. 2021ರ ಚುನಾವಣೆಯಲ್ಲಿ ಓವೈಸಿ ಪಕ್ಷ ಕಣಕ್ಕಿಳಿಯುವುದು ಮಮತಾ ಬ್ಯಾನರ್ಜಿಗೆ ಇನ್ನೋರ್ವ ಪ್ರಬಲ ಸ್ಪರ್ಧಿಯನ್ನು ಸೃಷ್ಟಿಸಲಿದೆ. ಬಂಗಾಳಿಗರು ಹೊರ […]
ಅಸಾದುದ್ದೀನ್ ಓವೈಸಿ ಬಂಗಾಳಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಪಕ್ಕದ ಬಿಹಾರದಲ್ಲಿ ಎಐಎಂಐಎಂ 5 ಸೀಟ್ ಗೆದ್ದಿರುವುದು ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದೆ. ಓವೈಸಿಯ ಪ್ರಬಲ ಟಾರ್ಗೆಟ್ ದಲಿತ ಮತ್ತು ಮುಸ್ಲಿಂ ಮತಗಳು. ಪಶ್ಚಿಮ ಬಂಗಾಳ ಅಸೆಂಬ್ಲಿಯ 294 ಸೀಟುಗಳಲ್ಲಿ 100-110 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳ ಪ್ರಾಬಲ್ಯವಿದೆ. ಇಷ್ಟು ದಿನ ಈ ಎಲ್ಲ ಮತಗಳೂ ಟಿಎಂಸಿ ಬುಟ್ಟಿಗೆ ಬಂದುಬೀಳುತ್ತಿದ್ದವು. 2021ರ ಚುನಾವಣೆಯಲ್ಲಿ ಓವೈಸಿ ಪಕ್ಷ ಕಣಕ್ಕಿಳಿಯುವುದು ಮಮತಾ ಬ್ಯಾನರ್ಜಿಗೆ ಇನ್ನೋರ್ವ ಪ್ರಬಲ ಸ್ಪರ್ಧಿಯನ್ನು ಸೃಷ್ಟಿಸಲಿದೆ.
ಬಂಗಾಳಿಗರು ಹೊರ ರಾಜ್ಯಗಳ ಪಕ್ಷವನ್ನು ಬೆಂಬಲಿಸುವುದಿಲ್ಲವಂತೆ! ಕಾಶ್ಮೀರದ ನಂತರ ಅತಿ ಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ. ಇದೇ ಮತಗಳು 2011ರಲ್ಲಿ ಎಡ ಪಕ್ಷಗಳನ್ನು ಸೋಲಿಸಲು ಮಮತಾ ಬ್ಯಾನರ್ಜಿಗೆ ನೆರವಾಗಿದ್ದವು. ದೇಶದ ಮುಸ್ಲಿಂ ಮತಗಳನ್ನು ಧ್ರುವೀಕರಿಸುತ್ತಿರುವ ಓವೈಸಿಯಿಂದ ಈ ಮತಗಳಲ್ಲಿ ಒಡಕು ಹುಟ್ಟಲಿದೆ. ಟಿಎಂಸಿ ಸೋಲಿಗೂ ಓವೈಸಿ ಸ್ಪರ್ಧೆ ಕಾರಣವಾಗಬಹುದು ಎಂದು ವಿಶ್ಲೇಷಣೆ ನಡೆಸಲಾಗುತ್ತಿದೆ.
ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ನಿಜಕ್ಕೂ ಗೆದ್ದವರು ಯಾರು ಗೊತ್ತೇ !?
ಈಗಾಗಲೇ 23 ಜಿಲ್ಲೆಗಳಲ್ಲಿ ಎಐಎಂಐಎಂ ತನ್ನ ಘಟಕ ಹೊಂದಿದೆ. ಅಲ್ಲದೇ 22 ಜಿಲ್ಲೆಗಳಲ್ಲಿ ಜನರಿಗೆ ಪರಿಚಿತವಾಗಿದೆ. ಅತ್ಯಂತ ಪ್ರಬಲವಾದ ಚುನಾವಣಾ ರಾಜನೀತಿಯೊಂದಿಗೆ ಬಂಗಾಲದಲ್ಲಿ ಸ್ಪರ್ಧಿಸಲಿದ್ದೇವೆ ಎಂದು AIMIM ರಾಷ್ಟ್ರೀಯ ವಕ್ತಾರ ಅಸೀಮ್ ವಖಾರ್ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ನಡೆಸಿದ ಆ್ಯಂಟಿ ಎನ್ಆರ್ಸಿ ರ್ಯಾಲಿಯನ್ನೂ ಮೀರಿ ಸ್ಟ್ರಾಟರ್ಜಿ ರೂಪಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಂಗಾಳದಲ್ಲಿ ಶೇಕಡಾ 30 ಹಿಂದಿ-ಉರ್ದು ಭಾಷಿಕರಿದ್ದಾರೆ. ಬಿಜೆಪಿ ವಿರುದ್ಧದ ಟಿಎಂಸಿ ಹೋರಾಟ ಇವರಿಗೆ ತೃಪ್ತಿ ನೀಡಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯ ನಮ್ಮನ್ನು ಬೆಂಬಲಿಸಲಿದೆ ಎಂದು ವಖಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಹೊರ ರಾಜ್ಯಗಳ ಪಕ್ಷವನ್ನು ಬಂಗಾಳಿಗರು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.